ಬಾ ಭಾಗ್ಯಲಕ್ಷ್ಮಿ ನಿನ್ನ ನಾ ಸೇವೆಗೈಯ್ಯುವೆ
ನಾ ನಿನ್ನ ಪ್ರಾರ್ಥಿಸಿ ಬೇಡಿಕೊಂಬುವೆ ಪ
ನಿನ್ನೇ ನಂಬಿದೆ ಪನ್ನಗವೇಣಿ
ನೀಯೆನ್ನ ಕೈಯ ಬಿಡಬೇಡ ತಾಯೆ
ಸನ್ನುತ ಚರಿತೆ ನಿನ್ನೇ ನಂಬುವೆ
ಪಾದ ತೋರೆ
ಸಂಪನ್ನೆ ನಿನ್ನ ಸದಾ ಸೇವೆಗೈವ ಚಿದಾನಂದವೀಯೆ 1
ಸಾರವಾದ ಸಂಸಾರದಲಿ ನೀರೆ ನೀನಲ್ಲದಿನ್ನಾರೆ
ತೋರಿ ಕರುಣವ ನೀ ಸಾರೆ ಬಂದು
ಪೊರೆ ಕರುಣಾಸಿರಿಯೆ ಎನ್ನ ಸೇವೆಯನು ಕೈಗೊಂಡು
ಲಕುಮೀತಾಯೆ ಸದಾನಿನ್ನ ಸೇವೆ ಚಿದಾನಂದವೀಯೆ 2
ಪತಿ ಪಾದಸೇವೆ ಸÀತಿಗೆ ನೀನುಳಿಸಿ
ಸತತದಿ ಮಾಂಗಲ್ಯ ಭಾಗ್ಯವ ನೀಡೆ
ಸತಿ ನೀನೆಂದು
ಸ್ತುತಿಪೆ ಸತತ ಎನ್ನ ಮೊರೆಯಾಲಿಸಿ ಕಾಯೆ
ಸದಾ ನಿನ್ನ ಸೇವೆ ಚಿದಾನಂದವೀಯೆ3