ವೆಂಕಟ ನರಸಿಂಹ ದೇವಾ ಎನ್ನ ಸಂಕಟ ಪರಿಹರಿಸುವಾ
ಶಂಕೆಯಿಲ್ಲದ ಬಿರುದಾಂಕ ಮಹಿಮನಾದ
ಪಂಕಜನಾಭ ಶ್ರೀ ಪರಮಾತ್ಮ ಪರಬ್ರಹ್ಮ ಪ
ಸÀಕಲಲೋಕ ಕರ್ತನಾದ ಶ್ರೀಲಕುಮಿರಮಣ ವೇಣುನಾದ
ಮುಕುತಿದಾಯಕ ಕೃಷ್ಣ---ಲ್ಲಾ
ಮೂರ್ತಿ ಅಮಿತ ಪರಕ್ರಾಮ
ಸುಜನ ರಕ್ಷಕ ಹರಿ 1
ಸಿಂಧುಶಯನ ಜಗದೀಶ ಆನಂದ ಪರಿಪೂರ್ಣ ವಿಲಾಸ
ಮಂದರಧರ ಮುಕುಂದ ಅತಿಸುಂದರ ರೂಪ ಗೋವಿಂದ
ಅನುದಿನ ಇಂದು ಇರುವಾ 2
ಆದಿ ಮಧ್ಯಾಂತ ರಹಿತ ಸಕಲ ವೇದಾಂತರ ಪ್ರಖ್ಯಾತ
ಸಾಧು ಸಜ್ಜನರೊಡೆಯಾನೀತಾ ಅತಿ ಮೋದದಲಿರುವಂಥ ದಾತಾ
ಮಾಧವ ವೈಕುಂಠ
ಮನಿಯಾಗಿ ಇರುವಂಥಾ 3