ಇಂದೀವರಭಾಸಂ ಪ
ಬೃಂದಾರಕ ಗಣಾನಂದ ವಿಲಾಸಂ ಅ.ಪ
ಅಷ್ಟತೀರ್ಥಲಸದಷ್ಟ ಶೈಲಪರಿ
ಶಿಷ್ಟ ಶಿಖರಿ ವಿಹಾರಂ
ಪರಮೇಷ್ಠಿ ಸಮರ್ಚಿತ
ಮಷ್ಟ ಸಿದ್ಧಿದಾತಾರ ಮುದಾರಂ 1
ಅಂಬುಜಭವಪಿತಮಂಬುಜ ಪತ್ರ ವಿ
ಡಂಬಿ ನಯನಯುಗಳಂ
ಜಂಭನಿಸೂದನ ಡಂಭರಹಿತ ಘಟ
ಸಂಭವನುತ ಚರಣಾಂಬುಜ ಯುಗಳಂ 2
ನಂದೋಪವರ ಕರುಣಂ
ಮಂದಹಾಸ ವಿಜಿತೇಂದು ಕಿರಣಮತಿ
ಸುಂದರಾಂಗಮಾನಂದ ವಿತರಣಂ 3
ಕಲಮಧುರಸ್ವನಚಲಿತ ಹೃದಯ ಗೋ
ಕುಲ ಮೋಹನ ವೇಣುನಿನಾದಂ
ಲಲನಾಜನ ಸÀಂಮಿಳಿತ ವಿನೋದಂ 4
ಕರುಣಾಯತ ನಿಜವೇಷಂ
ಹರಿಣಾರಿ ಮಹೀಧರಣಾಲಯ ಶ್ರೀ
ವರದಾನತಪದಶರಣ ಸುಪೋಷಂ 5