ಹರಿಕಾಣದ ಉಪಾಯ ನರಬಲ್ಲನೆ
ದುರುಳರ್ ತಾವ್ ಕರ್ತರೆಂದು ವ್ಯರ್ಥರಾಗುವರು ಪ
ಸುರಪತಿಯ ಸ್ವರ್ಗವನು ಬಲಿರಾಯ ಕೈಗೊಂಡು
ಎರೆಡು ಐವತ್ತು ಹಯಮೇಧಗೈಯ್ಯೆ
ಪುರಂದರಗೆ ತಮ್ಮನಾಗಿ ಉದಿಸಿ ಬಲಿಯನು ಗೆದ್ದು
ಎರೆಡು ಅಡಿಯಲಿ ಬುವಿಯನಳೆದು ಕೊಳಲಿಲ್ಲವೆ 1
ಅಸುರರು ಅಮರರಲ್ಲಿ ಅತಿದ್ವೇಷವನುಗೈಯೆ
ಬಿಸಜಲೋಚನ ತಾನು ಸ್ತ್ರೀರೂಪದಿ
ನಸುನಗುತ ರಾಕ್ಷಸರ ಮೋಹಿಸಿ ಸುಧೆಯನು ಸುಮ |
ನಸರಿಗಿತ್ತಾದರಿಸಿ ಕರುಣಿಸಿದ ಸ್ವಾಮಿ 2
ಗುರುಭೀಷ್ಮರನು ಗೆಲುವುದಕ್ಕೆ ಕೃಷ್ಣನು ಯುಧಿ
ಷ್ಠಿರನಿಂದ ಒಂದು ನುಡಿಯನು ನುಡಿಸಿ
ಗುರುರಾಮ ವಿಠಲಗೆ ಸರಿಯು ಇನ್ನುಂಟೆ? 3