ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುದ್ರದೇವರು ಶಿವನೆ ನಾ ನಿನ್ನ ಸೇವಕನಯ್ಯ ದುಮ್ಮಾನ ಬಿಡಿಸಯ್ಯ ಸುಜನ ಸಹಾಯ ಸಿರಿಧರನರಮಯ್ಯ ಪ ಭಾಗವತ ಶಾಸ್ತ್ರವನು ಅವನೀಶಗೆ ಪೇಳ್ದವ ನೀನಲ್ಲವೆ ಅ.ಪ. ತೈಜಸ ತಾಮಸವೆಂಬ ತ್ರೈತತ್ತ್ವಗಳೆಂಬ ಸಾಂಬ ಸುರಪಾದ್ಯರ ಬಿಂಬ ವೈಕಲ್ಯಾಸ್ಪದವನು ಕಳೆದೊಮ್ಮೆಲೆ ವೈಕುಂಠಕೆ ಕರೆದೊಯ್ಯೊ ಕರಿಗೊರಳಾ 1 ಮೃತ್ಯುಂಜಯ ಮುಪ್ಪುರಹರ ಮಹದೇವ ದೇವರ್ಕಳ ಕಾವ ಸ್ತುತ್ಯಾದ್ರಿಜಾಪತಿ ಜತತೀವನದಾವ ದುರಿತಾಂಬುಧಿ ನಾವ ಕೃತ್ತಿವಾಸ ಉನ್ನತ್ಯವರಾಧಗ - ಳೆತ್ತಿಣಿಸದೆ ಕೃತಕೃತ್ಯನ ಮಾಡೈ 2 ಗಂಗಾಧರ ಷಣ್ಮುಖ ಗಣಪರ ತಾತ ತ್ರೈಲೋಕ್ಯಖ್ಯಾತ ಲಿಂಗಾಹ್ವಯ ತಾರಕಹರ ನಿರ್ಭೀತ ಭುವನಾಧಿನಾಥ ತುಂಗ ಮಹಿಮ ನಿಸ್ಸಂಗ ಹರಿಯದ್ವತೀ ಯಂಗ ಡಮರು ಶೂಲಂಗಳ ಧರಿಸಿಹ 3 ಪಂಚಾನನ ಪನ್ನಗಭೂಷಣ ಭೀಮ ಭುವನಾಭಿರಾಮ ಸಂಚಿಂತನ ಮಾಡುವ ಸಂತತ ನೇಮ ಶ್ರೀರಾಮನಾಮ ಪಂಚಶರಾರಿ ವಿರಿಂಚಿಕುವರ ನಿ - ಷ್ಕಿಂಚನರೊಡೆಯನ ಮಂಚಪದಾರ್ಹನೆ4 ಸ್ಪಟಿಕಾಭ ಕಪಾಲಿ ಕಾಮಿತಫಲದ ಫಲ್ಗುಣಸಖ ಶ್ರೀದ - ವಿಠಲಾಶ್ರಯವಿತ್ತಪಮಿತ್ರ ದ್ವಿರದ ಚರ್ಮಾಂಬರನಾದ ಕುಟಿಲರಹಿತ ಧೂರ್ಜಟಿ ವೈಷ¨sಕಧ್ವಜ ನಿಟಿಲನಯನ ಸಂಕಟವÀ ನಿವಾರಿಸೊ 5
--------------
ಶ್ರೀದವಿಠಲರು