ಸಿದ್ಧಿ ವಿನಾಯಕ ಪರಿಪಾಹಿ | ವರ ಪ
ಸಿದ್ಧಿ ವಿನಾಯಕ ವೀರಭದ್ರನಗ್ರಜನೆ ಮಹಾ
ರುದ್ರದೇವನ ಸುಕುಮಾರ | ಧೀರ ಅ.ಪ
ಮೊದಲು ನಿನ್ನಡಿಗಳಿಗೆ ಮುದದಿ ವಂದಿಸುವರಿಗೆ
ಸದಮಲ ಸುಮಾರ್ಗವೀವದೇವ | ವರ1
ಏಕವಿಂಶತಿಸುರೂಪ ಕಾಕುದುರ್ಮತಿಯನು ನಿ-
ರಾಕರಿಸಿ ಕೊಡುವದು ನಿರ್ವಿಘ್ನವಂ | ವರ 2
ತಾಮಸರಹಿತ ಗುರುರಾಮವಿಠಲನಡಿಗಳ ನಿ-
ಷ್ಕಾಮದಿಂದಾ ಭಜಿಸುವಂತೆಮಾಡು | ವರ 3