ನಮಾಮಿ ತಂದೆಯೇ | ಮುದ್ದುಮೋಹನಾನತೋಸ್ಮಿ ಸಿದ್ಧರೇ | ತ್ವತ್ವದಾಂಬುಜಂ ಪ
ಸುಕೃತ ವೆಂಥದೋಗುರುಗಳ್ ನಿಮ್ಮಯಾ | ಕರುಣದೊರಕಿತು 1
ವಿಲಸಿತಾಮಲಾ ನಿ | ಷ್ಕಲ್ಮುಷ ಹೃದಯರೇಆಲವಾ ಬೋಧರಾ | ಒಲವ ಪಡೆದರೇ 2
ಹಲವು ಜನುಮದೀ | ಬಳಲಿ ಬಂದುದಾತಿಳಿದು ನೀವೆನ್ನಾ | ಪಾಲಿಸೀದಿರಿ3
ಕ | ಳಂಕ ವಿಹಿತವೂ 4
ಎಂದು ಕರುಣೆಯಿಂ | ತಂದೆ ವೆಂಕಟನಾಹೊಂದಿ ಭಜಿಪರಾ | ಅಂದು ಪ್ರೇರಿಸೀ5
ಕರೆದು ಎನ್ನನೂ | ತೆರಳು ಎನುತಲೀಒರೆದು ಮತಿಯನೂ | ದಾರಿ ತೊರ್ದಿರೀ 6
ಸೋಮ ಶೇಖರಾ | ಸಮ ಪದಸ್ಥನೇಸಾಮಾಜಾದ್ರಿಲೀ | ಪ್ರಮಾಥಿವತ್ಸರಾ 7
ವದ್ಯ ಫಾಲ್ಗುಣಾ | ಪ್ರತಿಪದಾದಿನಾಆದಿವಾರದೀ | ವಿದಿತ ಮಾರ್ಗದೀ 8
ಗುರು ಗೋವಿಂದನಾ | ನಾಮ ತಾರಕಾಅರುಹೀ ಪ್ರೀತಿಲೀ | ದಾರಿ ತೋರ್ದಿರೀ 9
ಕೋಮಲಾಂಗನೇ | ನಿಮ್ಮ ಮಹಿಮೆಯಾಪಾಮರಾನು ನಾ | ಗಮಿಸಲಾಪನೇ 10
ಗತಿಯೆ ನೀವೆಂದೂ | ಸತತ ತುತಿಸುವೆಅತುಳ ಮಹಿಮರೇ | ಹಿತವ ಮಾಡಿರಿ 11
ತವ ಪದಾರ್ಚನೇ ತ್ರಿ | ಸವನ ಸಂಧ್ಯವೂಹವನ ಹೋಮವೂ | ಭವದ ಶೋಷವೂ 12
ನೀವೆ ಬಂಧುವೂ | ನೀವೆ ಬಳಗವೂನೀವೆ ತಾಯಿಯೂ | ನೀವೆ ತಂದೆಯೂ 13
ನಿಂತು ನೀವೆನ್ನಾ | ಅಂತರಂಗದೀಮಂತವ್ಯ ರಂಗನಾ ಚಿಂತೆ ಪಾಲಿಸೀ 14
ಗುರು ಗೋವಿಂದ ವಿಠಲನಾ | ಸುರಚಿರಾಮಲಾಚರಣ ಪುಷ್ಕರ | ಸ್ಮರಿಪ ಗುರುವರಾ 15|