ಇಂದರೆ ರಮಣಾ ಇಟ್ಟಾಂಗಿರಬೇಕು ಪ
ಒಮ್ಮಿಗೆ ಕದಶನ ಶಾಖಾ ಆಹಾರವ ನೀಡುವನು
ಒಮ್ಮಿಗೆ ಷೆಡ್ರಸದ್ದನ್ನವ ಸಾರುಣಿಸುವನು 1
ಒಮ್ಮಿಗೆ ಜೀರ್ಣ ಕಂಥಾಧಾರಿಯೆನಿಸುವನು|
ಒಮ್ಮಿಗೆ ದಿವ್ಯಾಂಬರಗಳ ನುಡಿಸಿ ನೋಡುವನು 2
ಒಮ್ಮಿಗೆ ಧರಿಯಲಿ ತೋಳತಲೆದಿಂಬದಲಿಡುವಾ|
ಒಮ್ಮಿಗೆ ಪರ್ಯಾಂಕಾಸನ ಸಂಪದ ಕೊಡುವಾ 3
ಒಮ್ಮಿಗೆ ಕವಡಿ ಲಾಭಕ ಕೃತ-ಕೃತ್ಯೆಯೆನಿಸುವನು
ತಂದೆ ಮಹಿಪತಿ-ಕಂದಗ ಸಾರಿದ ನಿಜ ಖೂನಾ 4
ತಂದೆ ಮಹೀಪತಿ-ಕಂದಗ ಸಾರಿದ ನಿಜ ಖೂನಾ|
ದ್ವಂದ್ವ ಗೆಲಿದು ಸ್ವಾನಂದದಲಿರುವವನೇ ಜಾಣಾ 5