ಚಂದ್ರಶೇಖರ ಸುಮನಸೇಂದ್ರ ಪೂಜಿತ ಚರಣಾ
ಹೀಂದ್ರ ಪದಯೋಗ್ಯ ವೈರಾಗ್ಯ | ವೈರಾಗ್ಯಾ ಪಾಲಿಸಮ
ರೇಂದ್ರ ನಿನ್ನಡಿಗೆ ಶರಣೆಂಬೆ 1
327ನಂದಿವಾಹನ ವಿಮಲ ಮಂದಾಕಿನೀಧರನೆ
ವೃಂದಾರಕೇಂದ್ರ ಗುಣಸಾಂದ್ರ | ಗುಣಸಾಂದ್ರ ಎನ್ನ ಮನ
ಮಂದಿರದಿ ನೆಲೆಸಿ ಸುಖವೀಯೊ 2
328ಕೃತ್ತಿವಾಸನೆ ನಿನ್ನ ಭೃತ್ಯಾನುಭೃತ್ಯ ಎ
ನ್ನತ್ತ ನೋಡಯ್ಯ ಶುಭಕಾಯ ಭಕ್ತರಪ
ಮೃತ್ಯು ಪರಿಹರಿಸಿ ಸಲಹಯ್ಯ 3
329 ನೀಲಕಂಧರ ರುಂಡಮಾಲಿ ಮೃಗವರಪಾಣಿ
ಶೈಲಜಾರಮಣ ಶಿವರೂಪಿ | ಶಿವರೂಪಿ ನಿನ್ನವರ
ನಿತ್ಯ ಪರಮಾಪ್ತ 4
330ತ್ರಿಪುರಾರಿ ನಿತ್ಯವೆನ್ನಪರಾಧಗಳ ನೋಡಿ
ಕುಪಿತನಾಗದಲೆ ಸಲಹಯ್ಯ | ಸಲಹಯ್ಯ ಬಿನ್ನೈಪೆ
ಕೃಪಣವತ್ಸಲನೆ ಕೃಪೆಯಿಂದ 5
331ಪಂಚಾಸ್ಯ ಮನ್ಮನದ ಚಂಚಲವ ಪರಿಹರಿಸಿ
ಸಂಚಿತಾಗಾಮಿ ಪ್ರಾರಬ್ಧ | ಪ್ರಾರಬ್ಧ ದಾಟಸು ವಿ
ರಿಂಚಿಸಂಭವನೆ ಕೃತಯೋಗ 6
332 ಮಾನುಷಾನ್ನವನುಂಡು ಜ್ಞಾನ ಶೂನ್ಯನು ಆದೆ
ಅನುದಿನ | ಅನುದಿನದಿ ನಾ ನಿನ್ನ
ಧೀನದವನಯ್ಯ ಪ್ರಮಥೇಶ 7
333 ಅಷ್ಟಮೂತ್ರ್ಯಾತ್ಮಕನೆ ವೃಷ್ಟಿವರ್ಯನ ಹೃದಯಾ
ಧಿಷ್ಠಾನದಲ್ಲಿ ಇರದೋರು | ಇರದೋರು ನೀ ದಯಾ
ದೃಷ್ಟಿಯಲಿ ನೋಡೊ ಮಹದೇವ 8
334 ಪಾರ್ವತಿರಮಣ ಶುಕ ದೂರ್ವಾಸ ರೂಪದಲ್ಲಿ
ಉರ್ವಿಯೊಳಗುಳ್ಳ ಭಕುತರ | ಭಕುತರ ಸಲಹು ಸುರ
ಸಾರ್ವಭೌಮತ್ವ ವೈದಿದೆ 9
335 ಭಾಗಿಥಿಧರನೆ ಭಾಗವತ ಜನರ ಹೃ
ದ್ರೋಗ ಪರಿಹರಿಸಿ ನಿನ್ನಲ್ಲಿ | ನಿನ್ನಲ್ಲಿ ಭಕ್ತಿ ಚೆ
ನ್ನಾಗಿ ಕೊಡು ಎನಗೆ ಮರೆಯಾದೆ 10
336 ಮೃಡದೇವ ಎನ್ನ ಕೈಪಿಡಿಯೊ ನಿನ್ನವನೆಂದು
ಬಡವ ನಿನ್ನಡಿಗೆ ಬಿನ್ನೈಪೆ | ಬಿನ್ನೈಪೆನೆನ್ನ ಮನ
ದೃಢವಾಗಿ ಇರಲಿ ಹರಿಯಲ್ಲಿ 11
337 ವ್ಯೋಮ ಕೇಶನೆ ತ್ರಿಗುಣನಾಮ ದೇವೋತ್ತಮ ಉ
ವಿರುಪಾಕ್ಷ ಮಮ ಗುರು
ಸ್ವಾಮಿ ಎಮಗೆ ದಯವಾಗೊ 12
338 ಅಷ್ಟ ಪ್ರಕೃತಿಗನೆ ಸರ್ವೇಷ್ಟ ದಾಯಕನೆ ಪರ
ಮೇಷ್ಟಿ ಸಂಭವನೆ ಪಂಮಾಪ್ತ | ಪರಮಾಪ್ತ ಎನ್ನದಯ
ದೃಷ್ಟಿಯಿಂದ ನೋಡಿ ಸಲಹಯ್ಯ 13
339ಪಂಚಾಸ್ಯ ದೈತ್ಯಕುಲ ವಂಚಕನೆ ಭಾವಿ ವಿ
ರಿಂಚಿ ಶೇಷನಲಿ ಜನಿಸಿದೆ | ಜನಿಸಿದೆ ಲೋಕತ್ರಯದಿ
ಸಂಚಾರ ಮಾಳ್ಪೆ ಸಲಹಯ್ಯ 14
340 ಉಗ್ರತಪ ನಾ ನಿನ್ನನುಗ್ರಹದಿ ಜನಿಸಿದೆ ಪ
ಸಂತೈಸಿ ಇಂದ್ರಿಯವ
ನಿಗ್ರಹಿಪ ಶಕ್ತಿ ಕರುಣೀಸೊ 15
341 ಲೋಚನತ್ರಯ ನಿನ್ನ ಯಾಚಿಸುವೆ ಸಂತತವು
ಗುಣರೂಪ ಕ್ರಿಯೆಗಳಾ
ಲೋಚನೆಯ ಕೊಟ್ಟು ಸಲಹಯ್ಯ16
342ಮಾತಂಗ ಷಣ್ಮುಖರ ತಾತ ಸಂತತ ಜಗ
ನ್ನಾಥ ವಿಠ್ಠಲನ ಮಹಿಮೆಯ | ಮಹಿಮೆಯನು ತಿಳಿಸು
ಪ್ರೀತಿಯಿಂದಲೆಮಗೆ ಅಮರೇಶ 17
343 ಭೂತನಾಥನ ಗುಣ ಪ್ರಭಾತ ಕಾಲದಲೆದ್ದು
ಪ್ರೀತಿಪೂರ್ವಕದಿ ಪಠಿಸುವ | ಪಠಿಸುವರ ಜಗ
ನ್ನಾಥವಿಠಲನು ಸಲಹುವ 18