ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವನೆ ಪ್ರಹ್ಲಾದನಿಂದಲಿ ಉಪಾಸ್ಯ ಪವಮಾನ ಪಿತ ಭಕ್ತವರದ ಲಕ್ಷ್ಮೀಶ ಪ. ವಲಯಕಾರದಿ ಶೇಷ ಛತ್ತರಿಯಾಗಿ ಹಲ ಮುಸಲ ಧರಿಸಿ ಎಡದಲಿ ವಾರುಣೀ ಬಲದಲ್ಲಿ ಶಂಬುಕ ವರ್ಣನೆಂಬ ಪುತ್ರನ ಸಹಿತ ನಲಿದು ಸೇರಿಸೆ ಇಂಥ ಆಸನದಿ ಕುಳಿತಾ 1 ಯೋಗಾಸನವನ್ಹಾಕಿ ಎಡತೊಡೆಯ ಮೇಲ್ ಸಿರಿಯು ಆಗಮನುತ ಬಲದ ತೊಡೆಯಲ್ಲಿ ವಾಯು ಭೋಗ ರೂಪನು ಸರ್ವ ಆಭರಣ ಶೃಂಗಾರ ಸಾಗರಾತ್ಮಜೆ ಪತಿಯು ಧರಿಸಿ ಮೆರೆವಂಥಾ2 ಶಿರದಿ ನವರತ್ನ ಮಕುಟವು ಫಣೆಯು ತಿಲಕವೂ ಕರ್ಣ ಕುಂಡಲವೂ ನಾಸಿಕ ಗಲ್ಲ ತೆರದ ಬಾಯ್‍ದಾಡೆಗಳು ದುರುಳರಿಗೆ ಘೋರ ವರಭಕ್ತರಿಗೆ ಅಭಯ 3 ಕಂಠ ಕೌಸ್ತುಭಮಣಿಯು ಶ್ರೀವತ್ಸ ತುಳಸಿ ಸರ ವೈಜಯಂತಿ ಹಾರಾ ಕರ ಶಂಖ ಚಕ್ರವು ಪದ್ಮ ಗದೆ ಅಭಯ ವಂಟಿ ಕರಶಿರಿ ಭುಜದಿ ದ್ವಯ ಯೋಗ ಚಿಹ್ನೆ 4 ಉರ ಉದರ ಶೃಂಗಾರ ಅರವಿಂದ ಪೊಕ್ಕಳಲಿ ಬ್ರಹ್ಮ ಮೆರೆಯೇ ಮಿರುಗುವೋ ಮಕುಟ ಉಟ್ಟಿರುವ ನಡು ಕಿರುಗೆಜ್ಜೆ ಕರಿಸೊಂಡಲಿನ ತೊಡೆಯು ಸುರವರದ ಚರಣಾ5 ಚರಣದಾಭರಣ ಸಾಲ್ಯೆರಳನಖ ಕಾಂತಿಗಳು ಪಾದ ಪದುಮಾ ಮೃಗ ಮುಖವು ನರಮೃಗಾಕೃತಿರೂಪ ತರಳ ಪ್ರಹ್ಲಾದನಲಿ ಕರುಣಾರ್ದ ದೃಷ್ಟಿ 6 ಎಡತೊಡೆಯಲಿ ಸಿರಿಯು ಬಲಕರದಿ ಪದುಮವ ಪಿಡಿದು ಎಡತೊಡೆಯ ಮೇಲೆ ಮದನನ ಕುಳ್ಳಿರಿಸುತಾ ಮದನ ಇರಿಸಿ ಹೂ ಬಾಣವನು ಪಿಡಿದು ರತಿ ಪದುಮ ಕರದಿಂದ ಶೋಭಿಸಲೂ 7 ಹರಿಗೆ ಬಲತೊಡೆಯಲಿದ್ದಂಥ ವಾಯುವು ತನ್ನ ಅರಸಿ ಭಾರತಿಯ ಎಡತೊಡೆಯಲಿಟ್ಟೂ ತರಳ ವಿಷ್ವಕ್ಸೇನನನು ಬಲದ ತೊಡೆಯಲ್ಲಿ ಇರಿಸಿಕೊಂಡತುಲ ಸಂತಸದಿಂದ ಮೆರೆಯೇ 8 ಚತುರ ಹಸ್ತನು ವಾಯು ಎಡಗೈಲಿ ಪಿಡಿದು ಗದೆ ಹಿತದಿ ಬಲಗೈಯ್ಯ ಭಕ್ತರಿಗಭಯ ತೋರ್ವ ಅತಿಭಕ್ತಿಯಿಂದುಭಯಕರ ಅಂಜಲಿಯ ಮಾಡಿ ಪತಿ ಭಿಕ್ಷೆ ಬೇಡುವಾ9 ನಾಭಿಯಲಿ ಬ್ರಹ್ಮ ಉದ್ಭವಿಸಿ ಹಸ್ತದಿ ವೇದ ಶೋಭಿಸಲು ಎಡತೊಡೆಯ ಮೇಲೆ ವಾಣೀ ಆಭರಣ ಶೃಂಗರದಿ ವೀಣೆ ಪುಸ್ತಕ ಧರಿಸಿ ವೈಭವದಿ ದೇವ ಮುನಿ ಎಡೆ ತೊಡೆಯೊಳಿರಲೂ10 ಬ್ರಹ್ಮ ಬಲತೊಡೆಯಲ್ಲಿ ಪಂಚಮುಖ ರುದ್ರನ್ನ ಸುಮ್ಮಾನದಿಂದ ಕುಳ್ಳಿರಿಸಿಕೊಂಡಿರಲೂ ಬ್ರಹ್ಮಸುತ ಕರದಿ ಆಯುಧ ಗೌರಿ ಎಡದಲ್ಲಿ ಷಣ್ಮುಖನ ಬಲ ತೊಡೆಯಲ್ಲಿಟ್ಟು ಮೆರೆಯೇ 11 ಗೌರಿಗಣಪನ ತನ್ನ ತೊಡೆಯೊಳಿಟ್ಟಿರಲು ಈ ರೀತಿಯಿಂದ ಪರಿವಾರ ಸಹಿತಾ ಶೌರಿ ಮೆರೆಯುವ ದಿವ್ಯ ಅದ್ಭುತಾಕೃತಿ ನೃಹರಿ ಪತಿ ಮನದಿ ತೊರೆ ಭಕ್ತರಿಗೆ 12 ಕಾಲನಾಮಕ ಗರುಡ ಬಾಲೆ ಸೌಪರ್ಣಿ ಲೀಲೆಯಿಂದಲಿ ಕೂಡಿ ಸಮ್ಮುಖದಿ ನಿಂದೂ ಓಲಗವ ಕೊಡುತ ಹರಿಗನುಕೂಲನಾಗಿರುವ ಲೀಲ ಮಾನುಷ ಇಂಥ ವೈಭವದಿ ಮೆರೆವಾ13 ಇಂತೆಸೆವ ಹರಿ ಎದುರು ನಿಂತು ಪ್ರಹ್ಲಾದ ಗುಣ ವಂತೆ ಸಾಧ್ವೀ ಸಾಧುಮತಿ ಸತಿಯ ಸಹಿತಾ ಅಂತರಂಗದಿ ಚಿಂತಿಸುತ ಅಂಜಲಿಯ ಕರದಿ ಶಾಂತಮನದಲಿ ಸುಖಿಸಿ ಆನಂದಿಸುವನೂ14 ವರಭಕ್ತ ಪ್ರಹ್ಲಾದ ವರದನ್ನ ಈ ರೂಪ ನರರು ಚಿಂತಿಸಲಳವೆ ಚರಿಪ ಭಕ್ತಿಯಲೀ ಪರಮ ಉತ್ಸಾರಕರನೊಂದೊಂದು ಅಂಶದಲಿ ವರ ಭಕ್ತರಲಿ ನೆಲಸೆ ಚಿಂತನೆಗೆ ನಿಲುವಾ 15 ಪರಿವಾರ ಆಭರಣ ಆಯುಧಗಳಿಂ ಮೆರೆವ ನರಹರಿಯ ಈ ರೂಪ ನಿರುತ ಸ್ಮರಿಸೇ ಗುರುವರದ ಕರಿಗಿರೀ ಯೋಗ ಭೋಗಾ ನೃಹರಿ ಕರುಣಿಸುವ ಮುಕ್ತಿ ಗೋಪಾಲಕೃಷ್ಣವಿಠಲಾ16
--------------
ಅಂಬಾಬಾಯಿ
ಜನರ ಪಾಲಿಸುವ ಷಣ್ಮುಖನ ನಾಮಾ ಪ ಪರಕೆ ಪರತತ್ವವಾಗಿಹ ದಿವ್ಯನಾಮ 1 ತಾರಕ ಬ್ರಹ್ಮವಾಗಿಹ ದಿವ್ಯನಾಮ 2 ಶಂಭುಪುತ್ರನೆ ನಿನ್ನ ದಿವ್ಯನಾಮ 3 ನಿಚ್ಚ ಸಚ್ಚಿದಾನಂದ ಚಿನ್ಮಯ ನಿನ್ನ ನಾಮ 4 ಅನುದಿನ ಅಘ ಕಳೆವ ನಾಮ ||5||
--------------
ಬೆಳ್ಳೆ ದಾಸಪ್ಪಯ್ಯ
ಪಾರ್ವತಿದೇವಿ ಗಿರಿಜೆ ನೀ ಒಲಿಯುವರೇ ಪರಶಿವನು ತಕ್ಕ ವರನೆಂದು ಮೆರೆಯುವರೆ ಪ ಪರಮ ವೈಷ್ಣವ ಭಕ್ತಾಗ್ರಣಿಯಾದ ಶಿವನಿಗೆ ಇರುತಿಹ ಕೊರತೆಗಳರಿಯದೆ ಗರುವದಲಿ ಅ.ಪ ಮನ್ಮಥನ ವೈರಿಗೆ ವಾಸಕೆ ಯೋಗ್ಯ ಮನೆಯಿಲ್ಲದಿರುವಾತಗೆ ಮನೆಯು ಮಶಾಣವೆನ್ನುತ ಪೇಳುತಿಹರಿನ್ನು ಸುಮನಸರೊಡಯನೆ ಸಖನಂತೆ ಇದು ಕೇಳು ಮನಸಿನ ಅಭಿಮಾನಿ ಶಿವನು ಘನತರದ ವಿಷಪಾನಗೈದನು ಮನದಿ ಶ್ರೀ ರಘುವರನ ಸ್ಮರಿಸುತ ವೃಷಭ ವಾಹನವೇರಿ ಚರಿಪಗೆ 1 ರುಂಡಮಾಲೆಯ ಧರಿಸಿದ ಕೊರಳೊಳಗೆ ಸರ್ಪ ದಂಡೆ ಅಲಂಕರಿಸಿರುವ ಮಂಡೆಯೊಳಗೆ ಚಲುವ ಗಂಗೆಯ ಧರಿಸಿಹ ಚಂದ್ರಶೇಖರ ಶಿವನೆಂದು ಕರೆಸಿಕೊಂಬ ಕೆಂಡಗಣ್ಣಿನ ಕ್ರೂರರೂಪನ ಕಂಡು ಹರುಷದಿ ಹಿಗ್ಗಿ ನಲಿಯುವಿ ಮಂಡೆಯಲಿ ಕೆಂಜಡೆಯ ಸುತ್ತಿಹ ಹಿಂಡು ವಿಷ ಸರ್ಪಗಳಲಂಕೃತನಿಗೆ 2 ಕರಿಚರ್ಮಾಂಬರನುಡುವ ಕೈಯಲ್ಲಿ ಕಪಾಲ ತಿರಿದುಂಡು ಹರುಷಿಸುವ ಪರಿ ದೈತ್ಯ ಪಿಶಾಚಯಕ್ಷರ ಕೂಡಿ ಚರಿಸುತ್ತ ಕುಣಿಯುತ್ತ ಗೊರವನಂತಿರುತಿಹ ಪರಮ ವೈರಾಗ್ಯವನು ಧರಿಸಿ ಫಣೆಯ ಗಣ್ಣನು ಬಳಿದು ಭಸುಮವ ಚರಿಸುವನು ರುಷಿವರರ ತೆರದಲಿ ಎಣಿಸಿ ಮಣಿಗಳ ಒಲಿಸಿ ಹರಿಯನು 3 ರಾಮಮಂತ್ರವ ಜಪಿಸಿ ರಮಣಿಗೆ ದಿವ್ಯ ರಾಮಚರಿತೆಯ ಬೋಧಿಸಿ ಕಾಮಹರನು ಕೈಲಾಸಪತಿಯು ಮತ್ತೆ ಕಾಮದೇವನು ಎಂಬ ನಾಮಸ್ಮರಿಸುವ ಆ ಮಹಾಗಣಪತಿಯು ಪುತ್ರನು ವೀರಭಕ್ತನು ಸುತನು ಶಿವನಿಗೆ ಪ್ರೇಮದಲಿ ಷಣ್ಮುಖನು ಸುತನೆಂ- ದೀ ಮಹಾಮಹಿಮೆಗಳು ತಿಳಿಯದೆ4 ಸುಂದರಾಂಗಿ ನಿನ್ನಯ ಚಲುವಿಕೆಗೆ ತಕ್ಕ ಚಂದದ ವರನೇ ಕೇಳು ಮಂದರೋದ್ಧರ ಶ್ರೀ ಮುಕುಂದನ ಭಜಿಸಲು ಚಂದದ ವರಗಳ ಕುಂದದೆ ಕರುಣಿಪ ಕಂದುಗೊರಳನು ಶಿವನು ಕಮಲ ನಾಭ ವಿಠ್ಠಲನ ಭಜಿಪ ಸಂತತ ಮಂದಗಮನೆಯ ಇಂದುಧರನಿಗೆ ಚಂದದಲಿ ವನಮಾಲೆ ಹಾಕುತ 5
--------------
ನಿಡಗುರುಕಿ ಜೀವೂಬಾಯಿ
ಶರಣು ಶರಣು ಪ ಪರಿಹರಿಸು ಕರುಣಾಳು ಬಿನ್ನಪವ ಕೇಳು ಅ.ಪ. ವಾಸವಾದ್ಯಮರನುತ ವನಜಸಂಭವನ ಸುತ ನೀ ಸಲಹೊ ಕೈಲಾಸವಾಸ ಈಶ ಕ್ಲೇಶ ಮೋದಾದಿ ಸಮ ತಿಳಿದು ಅಶ್ವತ್ಥಾಮ ಶ್ರೀಶುಕ ದುರ್ವಾಸ ಸ್ಫಟಿಕ ಸಮಭಾಸ 1 ವೈಕಾರಿಕಾದಿ ತ್ರೈರೂಪ ನಿನ್ನಯ ಕೋಪ ಶೋಕಕೊಡುವುದು ದೈತ್ಯಜನಕೆ ನಿತ್ಯ ಲೌಕಿಕಗಳೆಲ್ಲ ವೈದಿಕವಾಗಲೆನಗೆ ಮೈ ನಾಕಿ ಹೃತ್ಕುಮುದೇಂದು ಭಕ್ತಜನ ಬಂಧು 2 ಪವಮಾನತನಯ ನಿನ್ನವರಲ್ಲಿ ಕೊಡು ವಿನಯ ದಿವಸ ಸವನಗಳಲ್ಲಿ ಎನ್ನಿರುವ ನೀ ಬಲ್ಲಿ ಪವನ ದ್ವಿತಿಯರೂಪ ಸತತ ಎನ್ನಯಪಾಪ ಅವಲೋಕಿಸದಲೆನ್ನ ಸಲಹೊ ಸುರಮಾನ್ಯ 3 ಶೇಷನಂದನ ಶೇಷಭೂಷಣನೆ ನಿಶೇಷ ದೋಷರಹಿತನ ತೋರು ಕರುಣವನು ಬೀರು ಶ್ರೀ ಷಣ್ಮುಖನ ತಂದೆ ಸತತ ನೀ ಗತಿಯೆಂದೆ ಶೋಷಿಸು ಭವಾಮಯವ ಬೇಡುವೆನು ದಯವ4 ಗರ್ಗ ಮುನಿಕರಪದುಮ ಪೂಜ್ಯ ಚರಣಾಬ್ಜ ಮಮ ದುರ್ಗುಣಗಳೆಣಿಸದಲೆ ಜಗದೆ ಮೇಲೆ ನಿರ್ಗತಾಶನ ಜಗನ್ನಾಥ ವಿಠಲನ ಸ ನ್ಮಾರ್ಗವನೆ ತೋರು ಈ ದೇಹ ನಿನ ತೇರು 5
--------------
ಜಗನ್ನಾಥದಾಸರು
ಹರನ ಪಟ್ಟದ ರಾಣಿ ಪರಮ ಕಲ್ಯಾಣಿಕರುಣದಲಿ ಕರ್ಣೇರದು ನೋಡು ಪನ್ನಗವೇಣಿ ಪಮತಿಪ್ರೇರಕಳು ನೀನು ಪತಿಯ ಮನದ ಅಭಿಮಾನಿಸುತರು ಷಣ್ಮುಖನು ಗಜಮುಖ ಈರ್ವರುಪತಿಯು ನೆತ್ತಿಯಮೇಲೆ ಗಂಗೆಯನ್ನು ಹೊತ್ತಿಹನುಅತಿ 'ಚಿತ್ರವು ನಿನ್ನ ಸಂಸಾರಸೊಬಗು 1ತಂದೆಯ ಅಪಮಾನಹೊಂದಿ ಸ'ಸದೆ ಯಜ್ಞಕುಂಡದೊಳಗೆ ಹಾರಿ ನೀ ದೇಹಬಿಟ್ಟೆಗಂಡನಿಗೆ ಈ ಸುದ್ದಿ ಮುಟ್ಟಿದಾಕ್ಷಣ ನಿನ್ನತಂದೆಯ ರುಂಡವನು ಚೆಂಡಾಡಿದನು ಶಿವನು 2ಶಿವಶಂಕರನು ಅವನು ಬನಶಂಕರಿಯು ನೀನುಭಸಿತ ಭೂತನವನು ಶಶಿಮುಖಿಯು ನೀನುರಾಮಭಕ್ತನು ಅವನು ಪೇಮಪುತ್ಪಳಿ ನೀನುಕಮಲಾಕ್ಷಿ ಭೂಪತಿ 'ಠ್ಠಲಗೆ ಅತಿಪ್ರಿಯರು ನೀವು 3ಶ್ರೀ ದತ್ತಾತ್ರೇಯ
--------------
ಭೂಪತಿ ವಿಠಲರು
ತಾಯಿ ಸೌಪರ್ಣೀದೇವೀ ನೀ |ಕಾಯದೆ ಜರಿಯಲನ್ಯರಾ ||ನಾನೆಲ್ಲೀ ಕಾಣೆನೆ ಧರೆಯೊಳು |ಮನಸಿರಲೀ ಶ್ರೀ ಅರಸನಲ್ಲೇವೇ ಕೇಳು ಪಕ್ಷೋಣಿಯೊಳಗೆ ಕ್ರಿಯಸ್ತರ |ಆ ನೆಲ್ಲೀ ನೋಡೆ ನಿನ್ನಂತೆ ||ಆ ನಾಗರಾಜನ ಮಾತೆಯ ಸೇವೆಯೊಳಿದ್ದೆ |ನಾನೆಂತು ಮಾಡಲೆ ಸ್ತುತೀಯಾ1ವಾರುಣೀ ಶ್ರೀ ರೇವತಿ |ಯಾ ರೂಪಿ ನಮಸ್ಕರಿಪೇ ||ನಾರಾಯಣನಾ ತೋರಿಸಮ್ಮಾ ದೋಷಗಳ ನೀ |ವಾರಿಸಿ ರಕ್ಷೀಸಬೇಕಮ್ಮಾ 2ಶ್ರೀಸತಿಪಾರ್ವತೀ ದಕ್ಷ |ಧ್ವಂಸೀ ಶುದ್ಧ ಪತಿವೃತೀ ||ಆ ಷಣ್ಮುಖನ ಜನನೀ | ಕಾಣಿಸು ಶ್ರೀ ಪ್ರಾ-ಣೇಶ ವಿಠ್ಠಲಾನ ಕರೂಣೀ 3
--------------
ಪ್ರಾಣೇಶದಾಸರು
ಪಾರ್ವತಿ ಜಗದ್ಭರಿತೇ ಮಹೇಶ್ವರಿ |ಶರ್ವನಂಗನೆ ಖ್ಯಾತೆ ಪಸರ್ವ ಸ್ವತಂತ್ರೆಶರ್ವಾಣಿಕಾಳಾಹಿವೇಣಿ |ಸರ್ವಜನರ ಮದ | ಗರ್ವ ನಿವಾರಿಣಿ ಅ. ಪಸೃಷ್ಟಿಪಾಲಿನಿ ಗೌರೀ ಸರ್ವೇಶ್ವರಿ |ದುಷ್ಟಮರ್ದನ ಕಾರಿ |ಇಷ್ಟದಾಯಕಿಭವ| ಕಷ್ಟನಿವಾರಿಣಿಶಿಷ್ಟಪಾಲಿನಿ ಬೆಟ್ಟದ ಕಲಿಗೆ ಭವಾನಿಯೆ 1ಅಘನಾಶಿನಿ ದೇವೀ ಕಾತ್ಯಾಯಿನಿ |ಸುಗುಣರ ಸಂಜೀವಿ |ನಗೆಮೊಗವನು ತೋರಿ | ಸುಗುಣನೆಂದಿನಿಸೆನ್ನ |ಅಗಲಬೇಡವೋ ತಾಯೇ ಮುಗಿವೆನು ಕರವಾ 2ಪರಮಪಾವನೆ ನಿನ್ನಾ | ಭಕ್ತಿಯೊಳೀಗಾ |ಸ್ಮರಿಸಲರಿಯೆ ಮುನ್ನಾ |ತರಳಷಣ್ಮುಖನಂತೆ |ಪರಸಿ ರಕ್ಷಿಸೆ ಎನ್ನ | ಭರದಿ ಗೋವಿಂದನದಾಸನಿಗೊಲಿದು ||ಪಾರ್ವತಿ|| 3
--------------
ಗೋವಿಂದದಾಸ
ಶ್ರೀ ಸ್ಕಂಧ ಸ್ತೋತ್ರ85ಸ್ಕಂಧ ದೇವಾ ಸ್ಕಂಧ ದೇವಾಪಾಹಿಪಾಹಿಪಾಹಿಮಾಂ ಸ್ಕಂಧ ದೇವಾಪಇಂದಿರೇಶ ಪ್ರಿಯ ನಮೋ ಶರಣು ಶರಣೆಂಬೆಸುಂದರಾಂಗ ತೇಜೋರೂಪಿ ಸ್ಕಂಧ ನಮಸ್ತೆ ತ್ರಕ್ರೌಶೀಕಸ ವಿಶ್ವಾಮಿತ್ರ ಋಷಿ ಸಂಸ್ತುತ್ಯಈಶ ಶ್ರೀಶ ದೇವ ನಿನ್ನೊಳ್ ಸುಪ್ರಸನ್ನತ 1ಕಾತ್ಯಾಯಿನಿ ಸುತವಹ್ನಿವರ್ಣ ಷಣ್ಮುಖನೀದಾವಾನ್ನಿ ಎನ್ನ ಕಷ್ಟಕಲುಷಕಾನನಕೆ2ವಾಮಸೌಂದರ್ಯೋ ಜ್ವಲನೇ ಧನುಶ್ಶಕ್ತಿ ಧರನೇ ಶರಣುಕಾಮದನೇ ಭಯಹರನೇ ಎನಗೆ ದಯವಾಗೋ 4ಕುಸುಮಭವಪಿತ ಪ್ರಸನ್ನ ಶ್ರೀನಿವಾಸನದಾಸವರಶ್ರೇಷ್ಠನಮೋ ಭರತ ಪ್ರದ್ಯುಮ್ನ 5|| ಶ್ರೀಮಧ್ವಾಂತರ್ಗತ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು