ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವೆಂಕಟಾಚಲಪತಿ ನಿನ್ನ ಪಾದವೆ ಎನಗೆ ಗತಿ ಪ. ಧರ್ಮ ತತ್ವವನರಿಯೆ ಬಹು ದುಷ್ಕರ್ಮವ ನಾ ತೊರೆಯೆ ಭರ್ಮದಾಸೆ ಮರೆಯೆ ಆ ದೇವ ಶರ್ಮವ ನಿಜ ದೊರೆಯೆ 1 ಅಮಿತ ಪಾಪಿ ನಾನು ಸಂಸೃತಿ ದುರಿತ ನೀನು ನಮಿಪೆ ನಿನ್ನಡಿಗಳನು ಕಮಲಾ- ರ್ಕ ಮಿತ್ರನೆ ಸಲಹೆನ್ನು 2 ಸುತರ ಕುಚರಿತಗಳ ಮಾತಾ ಪಿತರುಗಳೆಣಿಸುವರೆ ಯೋನ: ಪಿತರು ಎಂಬ ಸಂಶ್ರುತಿ ಗೀತಾರ್ಥವ ವಿತತವ ಮಾಡುವರೆ 3 ಎನ್ನಪರಾಧಗಳನೆಣಿಸಲು ಷಣ್ಮುಖಗಳ ವಡದು ಬಿನ್ನಹ ಮಾಡುವೆ ನಿನ್ನ ದಾಸನೆಂ- ದೆನ್ನ ಪೊರೆಯೊ ದೊರೆಯೆ 4 ಪನ್ನಗಾಚಲವಾಸ ಬಹು ಕಾ- ರುಣ್ಯ ಸಾಗರೇಶ ಇನ್ನುಪೇಕ್ಷಿಸದೆ ಎನ್ನ ಪಾಲಿಸು ಪ್ರ- ಸನ್ನ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ