ಕೈವಲ್ಯ ಇದೇವೆ ದೇವಾಲ್ಯ
ತ್ರಾಹಿ ತ್ರಾಹಿ ತ್ರಾಹಿ ಎಂದು ನೋಡಿಮನದ ವೈಶಾಲ್ಯ ಧ್ರುವ
ಮಹಾಮಹಿಮೆ ದೋರುವ ಇದೆ ದೇವದ್ವಾರ
ಸೋಹ್ಯದೋರಿ ಕುಡುತಿಹ ಪುಣ್ಯ ಸಹಕಾರ
ಬಾಹ್ಯಾಂತ್ರ ಭಾಸುತಿಹ ಸದ್ಗುರು ಸಹಕಾರ
ದೇಹ ಅಭಿಮಾನ ಬಿಟ್ಟು ಮಾಡಿ ಜಯ ಜಯಕಾರ 1
ಮಾರ್ಗ ಸುಪಥವಿದೆ ನೋಡಿ ಸಾಕ್ಷಾತ್ಕಾರ
ವರ್ಗ ಷಡ್ವೆರಿಗಳ ಮಾಡಿ ಬ್ಯಾಗೆ ದೂರ
ದೀರ್ಘದಂಡ ಹಾಕಿ ಗುರುವಿಗೆ ನಮಸ್ಕಾರ
ಸ್ವರ್ಗ ಸುಖಗೊಳ್ಳಲಿಕೆ ಇದೇವೆ ಸಹಕಾರ 2
ಸ್ವರ್ಗ ಭೂಕೈಲಾಸ ವೈಕುಂಠವಿದೆ ನೋಡೆವೈ
ಪಾದ ಪದ್ಮಕೂಡಿ
ಯೋಗ ಇದೆ ಸುಗಮ ಸಾಧನವ ಮಾಡಿ
ಸುಙÁ್ಞನ ಸೂರೆಗೊಂಡು ಮಹಿಪತಿ ನಿಜಗೂಡಿ 3