ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು
ಕೊಡು ತಾಯೆ ವರವ ಧೃಡವಾಗಿರುವ ಕೊಡು ತಾಯೆ ವರವಾ ಪ. ಕೊಡೆ ವರ ತಡಮಾಡದೆ ಧೃಡ ಭಕ್ತಿ ಎಂಬ ಮಾಂಗಲ್ಯ ಭಾಗ್ಯ ಧೃಡವಾಗಿರುವಂತೆ ಅ.ಪ. ಪರಿಪರಿ ಧ್ಯಾನಿಸೆನ್ನ ಮನಮಂದಿರವೆಂಬ ವರಗೃಹದಲಿ ಯೆನ್ನಯ ಭಕ್ತಿಮಂಟಪದಿ ಹರದಿ ಲಕುಮಿ ನಿನ್ನ ಪೂಜಿಸಿ ನಮಿಸಲು ವರ ಅಘ್ರ್ಯಪಾದ್ಯ ಆಚಮನವಿತ್ತು ನಲಿವೆ 1 ನವವಿಧ ಭಕ್ತಿಯೆಂಬ ನವರತ್ನ ಮಂಟಪದಿ ನವವಧು ಹರಿಗೆ ನೀನೆಂದು ಕುಳ್ಳಿರಿಸಿ ನವವಿಧ ಪಂಚಾಮೃತ ಸ್ನಾನಗೈಸಿ ನವನೀತಚೋರ ನಿನಗೆ ವಸ್ತ್ರಾಭರಣವನಿಟ್ಟು ನವವಿಧ ಭಕುತಿಲಿ ಪೂಜಿಪೆ 2 ಜಾಜಿ ಮಲ್ಲಿಗೆ ರೋಜ ಸಂಪಿಗೆ ರಾಜಿಪಲಕ್ಷ್ಮಿಗೆ ಮಲ್ಲಿಗೆ ದಂಡೆ ಮುಡಿಸಿ ಜಡೆಗೆ ಕಮಲ ಕೆಂಪಿನ ತಿರುಪಿನ ಹೂವ ತಿರುಗಿಸಿ 3 ಅರಿಶಿನ ಕುಂಕುಮ ಪರಿಮಳ ಗಂಧದಿ ವರಮಹಾಲಕ್ಷ್ಮಿಗೆ ಪೂಜಿಸುವೆ ವರಲಕ್ಷ್ಮಿಗೆ ಪರಿಪರಿ ಪುಷ್ಪ ಅಷ್ಟೋತ್ತರಗಳಿಂದರ್ಚಿಸೆ ಕೊಡು ವರ ದೃಢಭಕ್ತಿಯೆಂದು ಬೇಡುವೆ 4 ಷಡ್ರಾಸಾನ್ನ ಪಾಯಸ ಭಕ್ಷ್ಯಗಳ ಷಡ್ವಿಧ ದದಿಘೃತ ಪಾಲು ಸಕ್ಕರೆ ಬಗೆಬಗೆ ಉಂಡೆಗಳ ಷಡ್ವಿದ ಫಲಗಳನರ್ಪಿಸಿ ಧೂಪ ದೀಪದಿ ವರ ಅಷ್ಟ ಮಂಗಳಾರತಿ ಬೆಳಗಿ ಪಾಡುತ ನಮಿಸುವೆ 5
--------------
ಸರಸ್ವತಿ ಬಾಯಿ
ತೊಳೆಯಲಿ ಬೇಕಿದನು ಮನುಜಪ ಭವಕೂಪದಿ ಬಿದ್ದು ತೊಳಲಿ ಬಳಲಿ ಬಳಲಿ ಮಲಿನವಾಗಿಹ ಮನ ಹರಿಧ್ಯಾನ ಜಲದಲಿ ಅ.ಪ ಕಾಮಕ್ರೋಧದಿಂದ ಜನಿಸಿದ ಲೋಭಮೋಹ ಲೋಭದಿಂದ ಮದಮತ್ಸರ ಷಡ್ವಿಧ ತಾಪಗಳಿಂದ ಹದಗೆಟ್ಟಿರೆ ಮನ ಮುದದಿ ಹರಿಧ್ಯಾನದಿ 1 ದುರ್ಜನ ಸಂಗದೊಳು ಸೇರುತ ಮನ ವರ್ಜಿಸಿ ಹರಿ ಚರಿತ ಅರ್ಜುನ ಸಖ ಸರ್ವೇಶನ ನಾಮವು ಲಜ್ಜೆಯಿಲ್ಲದೆ ಸ್ಮರಿಸುತ ನಲಿಯಲು ಮನ 2 ಜನನ ಮರಣ ಕ್ಲೇಶದಿ ದು:ಖದಿ ಮನ ಮರಳಿ ಮರಳಿ ಪಾಪದಿ ಎಣಿಕೆ ಇಲ್ಲದ ದೋಷದೊಳಗೆ ಮುಸುಕಿದ ಮನ ನಿತ್ಯ 3 ಇಂದಿರೇಶನ ಧ್ಯಾನವ ಮಾಡಲು ಮನ ವೃಂದವ ಕೂಡಿ ಮಂದೋರದ್ಧರ ಗೋ_ ವಿಂದನೆನ್ನಲು ಮನ 4 ನಿಚ್ಚ ಭಕುತಿಯಿಂದ ಶ್ರೀ ಹರಿಪಾದ ಅರ್ಜಿಸಿಮುದದಿಂದ ರುಕ್ಮಿಣಿಯರಸನ ಸತ್ಯಸಂಕಲ್ಪನ ಮೆಚ್ಚಿಸಿ ಮುಕುತಿಯ ನೈದಲು ಈಮನ 5 ಮಧ್ವಮತದಿ ಜನಿಸಿ ನಿರಂತರ ಮಧ್ವರಾಯರ ಭಜಿಸಿ ಸದ್ವೈಷ್ಣವರ ಸಂಗದೊಳಾಡುತ ಲಜ್ಜೆತೊರೆದು ಕಾಲಗೆಜ್ಜೆ ಕಟ್ಟಲುಮನ6 ಕಂಬು ಚಕ್ರಧಾರಿ ಶ್ರೀ ಶೌರಿ ನಂಬುವರಾಧಾರಿ ಶಂಬರಾರಿಪಿತ ನಂಬಿದೆ ನಿನ ಪಾದ ಶಂಭುವಂದಿತ ಪಾಲಿಸಿಂದು ಸ್ಮರಿಸಲು ಮನ 7 ತೊಳೆದು ತೊಳೆದು ವಿಷಯ ವಾಸನೆಯನ್ನು ಹಲವು ವಿಧದಿ ತೊಳೆದು ಕಲುಷದೂರನ ನಾಮ ಸ್ಮರಣೆಯ ಮಾಡಲು ಮರುತ ಮತದ ಸಂಗ ದೊರೆವುದು ತವಕದಿ8 ಕಳವಳಿಸದೆ ಮನವು ನಿಶ್ಚಲದಲಿ ಥಳ ಥಳ ಥಳ ಹೊಳೆಯೆ ಕಮಲನಾಭ ವಿಠ್ಠಲವಲಿದು ಪಾಲಿಸುವನುಹಲವು ಬಗೆಯಲಿ ಹಂಬಲಿಸದೆ ಮನ 9
--------------
ನಿಡಗುರುಕಿ ಜೀವೂಬಾಯಿ
ಫಲವಿದು ಬಾಳ್ದ್ದುದಕೆ ಪÀ ಸಿರಿ ನಿಲಯನ ಗುಣಗಳ ತಿಳಿದು ಭಜಿಸುವುದೆ ಅ.ಪ. ಸ್ವೋಚಿತ ಕರ್ಮಗಳಾಚರಿಸುತ ಬಹು ನೀಚರಲ್ಲಿಗೆ ಪೋಗಿ ಯೊಚಿಸದೆ ಖೇಚರವಾಹ ಚರಾಚರ ಬಂಧಕ ಮೋಚಕನಹುದೆಂದ್ಯೋಚಿಸುತಿಪ್ಪುದೆ 1 ನಿಚ್ಚ ಸುಭಕುತಿಯಲಚ್ಯುತನಂಘ್ರಿಗ ತುಚ್ಚ ವಿಷಯಗಳ ಇಚ್ಛಿಸದೆ ಯ ದೃಚ್ಛಾಲಾಭದಿಂ ಪ್ರೋಚ್ಚನಾಗುವುದೆ 2 ಮನೋವಾಕ್ಕಾಯದನುಭವಿಸುವ ದಿನ ದಿನದಿ ವಿಷಯ ಸಾಧನಗಳಿಗೂ ಅನಿಶಾಂತರ್ಗತ ವನರುಹದಳ ಲೋ ಚನಗರ್ಪಿಸಿ ದಾಸನು ನಾನೆಂಬುದೇ 3 ವಾಸವ ಮುಖ ವಿಬುಧಾಸುರ ನಿಚಯಕೆ ಈ ಸಮಸ್ತ ಜಗಕೀಶ ಕೇಶವಾ ನೀಶ ಜೀವರೆಂಬ ಸುಜ್ಞಾನವೆ 4 ಪಂಚ ಭೇದಯುತ ಪ್ರಪಂಚವು ಸತ್ಯ ವಿ ಭವ ಮುಖ ಬಲಿ ವಂಚಕಗೆ ಸಂಚಲ ಪ್ರತಿಮೆ ಅಚಂಚಲ ಪ್ರಕೃತಿಯು ಸಂಚಿಂತಿಸಿ ಮುದ ಲಾಂಭಿತನಹುದೆ 5 ಪಂಚ ಋತುಗಳಲಿ ಪಂಚಾಗ್ನಿಗಳಲಿ ಪಂಚ ಪಂಚರೂಪವ ತಿಳಿದು ಪಂಚ ಸುಸಂಸ್ಕಾರಾಂಚಿತನಾಗಿ ದ್ವಿ ಪಂಚ ಕರಣದಲಿ ಪಂಚಕನರಿವುದೆ 6 ಹೃದಯದಿ ರೂಪವು ವದನದಿ ನಾಮವು ಉದರದಿ ನೈವೇದ್ಯವು ಶಿರದಿ ಪದ ಜಲ ನಿರ್ಮಾಲ್ಯವನೆ ಧರಿಸಿ ಕೋ ಸದನ ಹೆಗ್ಗದವ ಕಾಯುವುದೆ 7 ಪಾತ್ರರ ಸಂಗಡ ಯಾತ್ರೆ ಚರಿಸುತ ವಿ ಧಾತೃ ಪಿತನ ಗುಣ ಸ್ತೋತ್ರಗಳಾ ಶ್ರೋತ್ರದಿ ಸವಿದು ವಿಚಿತ್ರಾನಂದದಿ ಗಾತ್ರವ ಮರೆದು ಪರತ್ರವ ಪಡೆವುದೆ 8 ಹಂಸ ಮೊದಲು ಹದಿನೆಂಟು ರೂಪಗಳ ಸಂಸ್ಥಾನವ ತಿಳಿದನುದಿನದಿ ಸಂಸೇವಿಸುವ ಮಹಾಪುರುಷರ ಪದ ಪಾಂಸುವ ಧರಿಸಿ ಅಸಂಶಯನಪ್ಪುದೆ 9 ವರ ಗಾಯಿತ್ರೀ ನಾಮಕ ಹರಿಗೀ ರೆರಡಂಘ್ರಿಗಳ ವಿವರವ ತಿಳಿದು ತರುವಾಯದಿ ಷಡ್ವಿಧ ರೂಪವ ಸಾ ಅನುದಿನ ಧ್ಯಾನಿಸುತಿಪ್ಪುದೆ 10 ಬಿಗಿದ ಕಂಠದಿಂ ದೃಗ್ಭಾಷ್ಪಗಳಿಂ ನಗೆ ಮೊಗದಿಂ ರೋಮಗಳೊಗೆದು ಮಿಗೆ ಸಂತೋಷದಿಂ ನೆಗೆದಾಡುತ ನಾ ಲ್ಮೊಗನಯ್ಯನ ಗುಣ ಪೊಗಳಿ ಹಿಗ್ಗುವುದೆ 11 ಗೃಹಕರ್ಮವ ಬ್ಯಾಸರದಲೆ ಪರಮೋ ತ್ಸಹದಲಿ ಮಾಡುತ ಮೂಜಗದ ಮಹಿತನ ಸೇವೆ ಇದೆ ಎನುತಲಿ ಮೋದದಿ ಅಹರಹರ್ಮನದಿ ಸಮರ್ಪಿಸುತಿಪ್ಪುದೆ12 ಕ್ಲೇಶಾನಂದಗಳೀಶಾಧೀನ ಸ ಮಾಸಮ ಬ್ರಹ್ಮ ಸದಾಶಿವರೂ ಈಶಿತವ್ಯರು ಪರೇಶನಲ್ಲದೆ ಶ್ವಾಸ ಬಿಡುವ ಶಕ್ತಿ ಲೇಸಿಲ್ಲೆಂಬುದೆ 13 ಏಕೋತ್ತರ ಪಂಚಾಶದ್ವರ್ಣಗ ಳೇಕಾತ್ಮನ ನಾಮಂಗಳಿವು ಸಾಕಲ್ಯದಿಯಿವರರಿಯರೆಂಬುದೆ 14 ಒಂದು ರೂಪದೊಳನಂತ ರೂಪವು ಪೊಂದಿಪ್ಪವು ಗುಣಗಳಾ ಸಹಿತ ಇಂದು ಮುಂದೆಂದಿಗು ಗೋ ವಿಂದಗೆ ಸರಿಮಿಗಿಲಿಲ್ಲೆಂತೆಂಬುದೆ 15 ಮೇದಿನಿ ಪರಮಾಣಂಬು ಕಣಂಗಳ ನೈದಬಹುದು ಪರಿಗಣನೆಯನು ಮಾಧವನಾನಂದಾದಿ ಗುಣಂಗಳ ನಾದಿ ಕಾಲದಲಿ ಅಗಣಿತವೆಂಬುದೆ 16 ಹರಿಕಥೆ ಪರಮಾದರದಲಿ ಕೇಳುತ ಮರೆದು ತನುವ ಸುಖ ಸುರಿವುತಲೀ ಉರುಗಾಯನ ಸಂದರುಶನ ಹಾರೈ ಸಿರುಳು ಹಗಲು ಜರಿ ಜರಿದು ಬಾಳ್ವುದೆ 17 ಆ ಪರಮಾತ್ಮಗೆ ರೂಪದ್ವಯವು ಪ ರಾಪರ ತತ್ತ್ವ ಗಳಿದರೊಳಗೆ ಸ್ತ್ರಿ ಪುಂ ಭೇದದಿ ಈ ಪದ್ಮಜಾಂಡವ ವ್ಯಾಪಿಸಿಹನೆಂದೀಪರಿ ತಿಳಿವುದೆ 18 ವಿಷಯೇಂದ್ರಿಯಗಳಲಿ ತದಭಿಮಾನಿ ಸುಮ ನಸರೊಳು ನಿಂದು ನಿಯಾಮಿಸುತಾ ವಾಸುದೇವ ತಾ ವಿಷಯಂಗಳ ಭೋಗಿಸುವನೆಂದರಿವುದೆ 19 ಮೂಜಗದೊಳಗಿಹ ಭೂ ಜಲ ಖೇಚರ ಈ ಜೀವರೊಳೊ ಮಹೌಜಸನ ಪೂಜಿಸುತನುದಿನ ರಾಜಿಸುತಿಪ್ಪುದೆ 20 ಗುಣಕಾಲಾಹ್ವಯ ಆಗಮಾರ್ಣವ ಕುಂ ಭಿಣಿ ಪರಮಾಣ್ವಾಂಬುಧಿಗಳಲಿ ವನಗಿರಿ ನದಿ ಮೊದಲಾದದರೊಳಗಿಂ ಧನಗತ ಪಾವಕನಂತಿಹನೆಂಬುದೆ 21 ಅನಳಾಂಗಾರನೊಳಿದ್ದೋಪಾದಿಯ ಲನಿರುದ್ಧನು ಚೇತನರೊಳಗೆ ಕ್ಷಣ ಬಿಟ್ಟಗಲದೆ ಏಕೋ ನಾರಾ ಯಣ ಶ್ರುತಿ ಪ್ರತಿಪಾದ್ಯನು ಇಹನೆಂಬುದೆ 22 ಪಕ್ಷಗಳಕ್ಷಿಗಳಗಲದಲಿಪ್ಪಂ ತ್ಯಕ್ಷರ ಪುರುಷನಪೇಕ್ಷೆಯಲಿ ಕುಕ್ಷಿಯೊಳಬ್ಜಜ ತ್ರ್ಯಕ್ಷಾದ್ಯಮರರ ಈಕ್ಷಿಸಿ ಕರುಣದಿ ರಕ್ಷಿಪನೆಂಬುದೆ 23 ಕಾರಣ ಕಾರ್ಯಾಂತರ್ಗತ ಅಂಶವ ತಾರಾವೇಶಾಹಿತ ಸಹಜಾ ಪ್ರೇರಕ ಪ್ರೇರ್ಯಾಂಹ್ವಯ ಸರ್ವತ್ರ ವಿ ಕಾರವಿಲ್ಲದಲೆ ತೋರುವನೆಂಬುದೆ 24 ಸ್ತುತಿಸುತ ಲಕ್ಷ್ಮೀ ಪತಿಗುಣವ ಕೃತಿಪತಿ ಸೃಷ್ಟಿ ಸ್ಥಿತಿಲಯ ಕಾರಣ ಇತರ ಸರ್ವ ದೇವತೆಗಳಿಗಿನಿತಿಲ್ಲೆಂಬುದೆ25 ಪವನ ಮತಾನುಗರವ ನಾನಹುದೆಂ ದವನಿಯೊಳಗೆ ಸತ್ಕವಿ ಜನರ ಭವನಂಗಳಲಿ ಸಂಚರಿಸುತ ಸುಕಥಾ ಶ್ರವಣವ ಮಾಡುತ ಪ್ರವರನಾಗುವುದೆ26 ಪನ್ನಗಾಚಲ ಸನ್ನಿವಾಸ ಪಾ ವನ್ನಚರಿತ ಸದ್ಗುಣಭರಿತಾ ಜನ್ಯಜನಕ ಲಾವಣ್ಯೇಕನಿಧಿ ಜ ಗನ್ನಾಥವಿಠಲಾನಾನ್ಯಪನೆಂಬುದೆ 27
--------------
ಜಗನ್ನಾಥದಾಸರು