ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ತಾಯೆ ವರವ ಧೃಡವಾಗಿರುವ ಕೊಡು ತಾಯೆ ವರವಾ ಪ. ಕೊಡೆ ವರ ತಡಮಾಡದೆ ಧೃಡ ಭಕ್ತಿ ಎಂಬ ಮಾಂಗಲ್ಯ ಭಾಗ್ಯ ಧೃಡವಾಗಿರುವಂತೆ ಅ.ಪ. ಪರಿಪರಿ ಧ್ಯಾನಿಸೆನ್ನ ಮನಮಂದಿರವೆಂಬ ವರಗೃಹದಲಿ ಯೆನ್ನಯ ಭಕ್ತಿಮಂಟಪದಿ ಹರದಿ ಲಕುಮಿ ನಿನ್ನ ಪೂಜಿಸಿ ನಮಿಸಲು ವರ ಅಘ್ರ್ಯಪಾದ್ಯ ಆಚಮನವಿತ್ತು ನಲಿವೆ 1 ನವವಿಧ ಭಕ್ತಿಯೆಂಬ ನವರತ್ನ ಮಂಟಪದಿ ನವವಧು ಹರಿಗೆ ನೀನೆಂದು ಕುಳ್ಳಿರಿಸಿ ನವವಿಧ ಪಂಚಾಮೃತ ಸ್ನಾನಗೈಸಿ ನವನೀತಚೋರ ನಿನಗೆ ವಸ್ತ್ರಾಭರಣವನಿಟ್ಟು ನವವಿಧ ಭಕುತಿಲಿ ಪೂಜಿಪೆ 2 ಜಾಜಿ ಮಲ್ಲಿಗೆ ರೋಜ ಸಂಪಿಗೆ ರಾಜಿಪಲಕ್ಷ್ಮಿಗೆ ಮಲ್ಲಿಗೆ ದಂಡೆ ಮುಡಿಸಿ ಜಡೆಗೆ ಕಮಲ ಕೆಂಪಿನ ತಿರುಪಿನ ಹೂವ ತಿರುಗಿಸಿ 3 ಅರಿಶಿನ ಕುಂಕುಮ ಪರಿಮಳ ಗಂಧದಿ ವರಮಹಾಲಕ್ಷ್ಮಿಗೆ ಪೂಜಿಸುವೆ ವರಲಕ್ಷ್ಮಿಗೆ ಪರಿಪರಿ ಪುಷ್ಪ ಅಷ್ಟೋತ್ತರಗಳಿಂದರ್ಚಿಸೆ ಕೊಡು ವರ ದೃಢಭಕ್ತಿಯೆಂದು ಬೇಡುವೆ 4 ಷಡ್ರಾಸಾನ್ನ ಪಾಯಸ ಭಕ್ಷ್ಯಗಳ ಷಡ್ವಿಧ ದದಿಘೃತ ಪಾಲು ಸಕ್ಕರೆ ಬಗೆಬಗೆ ಉಂಡೆಗಳ ಷಡ್ವಿದ ಫಲಗಳನರ್ಪಿಸಿ ಧೂಪ ದೀಪದಿ ವರ ಅಷ್ಟ ಮಂಗಳಾರತಿ ಬೆಳಗಿ ಪಾಡುತ ನಮಿಸುವೆ 5
--------------
ಸರಸ್ವತಿ ಬಾಯಿ