ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಮನೋಹರ ನಿನ್ನ ನಾಮವೇ ಯೆನ್ನುಸಿರು ಕ್ಷೇಮ ನಾಡಿಗಳಲ್ಲಿ ತಿರುಗುತಿರಲಿ ಪ ಕಾಮಾದಿ ಷಡ್ವರ್ಗವ್ಯಾಪನೆಯನೋಡಿಸುತ ಪ್ರೇಮದಿಂ ಹೃತ್ಪದ್ಮದಲಿ ತೋರು ಸತತ ಅ.ಪ ಪ್ರಾಪಂಚಿಕರ ಮನವು ವಿಷಯಗಳಿಗೆಳೆವಂತೆ ಪಾಪಹರ ನಿನ್ನೊಳಗೆ ಯನ್ನ ಮನವಿರಲಿ ತಾಪತ್ರಯಂಗಳಿಗೆ ತನಯನನು ಸಿಲುಕಿಸದೆ ಕಾಪಾಡಿಕೋ ಸ್ವಾಮಿ ದಾಸಾನುದಾಸನಂ1 ಕನಸು ಎಚ್ಚರ ನಿದ್ದೆ ಎಂಬವಸ್ಥೆಗಳಲ್ಲಿ ದಿನಕರಪ್ರಭು ಮೂರ್ತಿಯವತಾರ ತೋರಿ ಅನುನಯದಿ ಪದಯುಗವ ಶರಣು ಹೊಂದುವ ಪರಿಯ ಕನಿಕರದಿ ಕರುಣಿಸೈ ಕಮಲನಯನ 2 ಕಫವಾತ ಪಿತ್ಥಗಳ ವಿಕೃತಿಗಳು ಬಾರದೆಲೆ ಅಪರಿಮಿತ ಸುಂದರಾನಂದ ನೀಡಿ ಸಫಲಮಂತ್ರವ ನುಡಿಸಿ ಕೃಪೆಯಿಂದ ಕೈಪಿಡಿದು ಸುಪಥದಿಂ ನದಿದಾಟಿ ಸೇರಿಸಿಕೊ ಅಡಿಗೆ 3 ಹರಿಹರೀ ಹರಿಯೆಂಬೆ ತಾಯಿ ತಂದೆಯೆ ಗುರುವೆ ದೊರೆಯೆನೀ ಸೋದರನು ಸಖನು ಬಂಧೂ ಧರಣೀಧರ ಸರ್ವತ್ರ ಬೆಂಬಿಡದೆ ಸಹಕರಿಸಿ ಪೊರೆವುದೈ ಭವನಾಶ ಹೆಜ್ಜಾಜಿ ಶ್ರೀಶಾ 4
--------------
ಶಾಮಶರ್ಮರು