(ಸುಬ್ರಹ್ಮಣ್ಯ ಸ್ತೋತ್ರ)
ಬ್ರಹ್ಮಣ್ಯ ಪುಂಜವನ್ನು ಕಾವಾ ಮೊರೆಯ ಕೋಳೂ ಸು-
ಬ್ರಹ್ಮಣ್ಯಕ್ಷೇತ್ರಪಾಲದೇವಾ ಪ.
ಶ್ರೀಶನ ಕರುಣ ಪೂರ್ಣಪಾತ್ರ ಷಡ್ವಕ್ತಪಾರ್ವ
ತೀಶಸಂಪ್ರೀತಿಕಾರಿಪತ್ರ ಸುರನಿಕರ ಭಯತ್ರ
ಸೂಸುತ ದೇಹದಿ ವಾಸವಾಗಿಹ ತ್ವ-
ಗ್ದೋಷವ ತರಿವ ಮಹಾಸುರ ದಾರಿ1
ಸಾಂಬಾಸನತ್ಕುಮಾರನೆನಿಸಿ ಸಾಂಖ್ಯಾಯೋಗಗಳ
ನಂಬಿದ ಭಕ್ತ ಜನಕೆ ಸಲಿಸಿ ದೈತ್ಯರ ಜವಗೆಡಿಸಿ
ಜಾಂಬವತೀವದನಾಂಬುಜ ವಿಕಸನ
ಕುಂಬುಜನಾಭ ಕುಟುಂಬಾಭರಣೀ 2
ಶೇಷಾದ್ರಿವಾಸಲಕ್ಷ್ಮೀಪತಿಯ ಪೂರ್ಣಾನುಗ್ರಹದಿ
ವಾಸುಕಿಗೊಲಿದು ವಿಪ್ರತತಿಯ ಸಲಹುವ ಭೂಪತಿಯ
ದೋಷವಾರಿ ಧಾರಾತೀರದಲಿ
ನಿವಾಸಗೊಂಡ ನಿನ್ನಾಶ್ರಯ ಕರುಣಿಸು 3