ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಗಿಲನು ತೆಗಿಸಿ ದರುಶನವ ಕರುಣಿಸಿದೆಯೋ ಭೋಗ ನರಸಿಂಹಸ್ವಾಮಿ ಪ. ನಾಗಶಯನನೆ ದೇವ ಕರಿಗಿರಿ ನಿಲಯ ಹರಿ ಯೋಗಿ ಶ್ರೀಗುರು ಹೃದಯ ನಿಲಯ ಅ.ಪ. ಸಿರಿಯನ್ನೆ ತೊಡೆಯ ಮೇಲೆರಿಸಿಕೊಂಡು ನಗುತ ಪರಿಪರೀ ಸೇವೆಯನು ಭಕ್ತರಿಂ ಕೊಳುತ ಪರಮಾತ್ಮ ಪಂಚಾಮೃತದ ಅಭಿಷೇಕವನು ಎರೆಯುತಿರೆ ಕಂಡು ನಾ ಹರುಷಪಟ್ಟೆನೊ ಸ್ವಾಮಿ 1 ಸುರನದಿಯ ಜಲ ತಂದು ನಿನಗಭಿಷೇಕವನೆ ಎರೆದು ಪರಿಪರಿಯ ಪೂಜೆ ಅಲಂಕಾರವನೆ ಮಾಡಿ ತರತರದ ಷಡ್ರಸವ ಭೋಜನವಗೈಸುತಲಿ ವರ ಮಂಗಳಾರತಿಯನೆತ್ತಿದುದ ಕಂಡೆ 2 ಘನ್ನ ಮಹಿಮೆನೆ ಸ್ವಾಮಿ ಎನ್ನ ಬಿನ್ನಪ ಕೇಳಿ ಮನ್ನಿಸಿ ದರುಶನವ ಇನ್ನು ಕರುಣಿಸಿದೆ ನಿನ್ನ ಸಮರಿನ್ಯಾರೊ ಪನ್ನಗಶಯನನೆ ಧನ್ಯರೋ ನಿನ್ನ ಪದವ ನಂಬಿದವರು3 ಶಾಂತರೂಪವ ಧರಿಸಿ ಶಾಂತ ಮೂರುತಿ ಎನಿಸಿ ಅಂತರಂಗದಿ ನಿನ್ನ ಧ್ಯಾನಿಸುವರ ಸಂತೋಷಪಡಿಸುತಲಿ ಕಾಯ್ವ ಕಮಲಾಕಾಂತ ಅಂತರಂಗವ ತಿಳಿದು ಸಂತೈಸೊ ಎನ್ನ 4 ಪಾಪಿ ದೈತ್ಯನ ಕೊಂದು ಕೋಪಿಸದೆ ಭಕ್ತನೊಳು ಕಾಪಾಡಿದೆಯೊ ಪರಮಪ್ರೇಮದಿಂದ ಗೋಪಾಲಕೃಷ್ಣವಿಠ್ಠಲನೆ ಅದರಂದದಲಿ ಕಾಪಾಡೊ ಭಕ್ತರನು ಹೃದಯದಲಿ ನೆಲಸಿ 5
--------------
ಅಂಬಾಬಾಯಿ
ಭಾರ ನಮ್ಮಪ್ಪನಿಗೀ ಸಂಸಾರ ಉಪ್ಪಿನ ಹೇರಂತಿದು ಬಹುಕ್ಷಾರ ಕೈ- ತಪ್ಪಿದರೆ ಬಾರದು ಸಣ್ಣ ಚೂರಾ ಪ. ಅಗಳಿನಾಶೆಗೆ ಪೋಗಿ ನಿಗಳ ಕಂಠಗೆ ಸಿಲುಕಿ ನೆಗೆದು ಬೀಳ್ವ ಮಚ್ಛ್ಯಗಳಂದದಿ ಬಹು ಹಗರಣಗೊಳ್ಳುತ ಮರುಳಾಗಿಹೆನು 1 ಬಾಲಬುದ್ಧಿಯೊಳೆರಡು ಶಾಲೆ ಕೊಂಡರೆ ಪರರ ಮೇಲೊಡ್ಡುತ ಬಹು ಸಾಲಗಾರನೋಲೆ ಕೋಳುಗೊಂಬನು ಪಂಚಗೋಲ ಸುಖತಿಯಲಿ 2 ಪುಣ್ಯಕರ್ಮವ ಮಾಡಿ ತನ್ನದೆಂದರೆ ನಿಲದು ದಾನವರೊಯ್ವರು ಘನಪಾತಕಗಳು ಬೆನ್ನ ಬಿಡವು ಮಕ್ಷಿಕಾನ್ನದಂತಿಹವು 3 ಕರ್ಮಶಾಸ್ತ್ರವ ಗಹನ ಮರ್ಮವ ತಾಳದ ನರನಾ ನಿರ್ಮಲ ಮಾಡಲು ಚವರ್i ತೊಳಿಯೆ ದು- ಷ್ಕರ್ಮ ಕಲುಷವನು ನಿರ್ಮೂಲಗೊಳಿಸದೆ 4 ಹೇಸಿಕೆ ಜೊಲ್ಲಿನ ಮುಸುಡಾ ಹಾಸಿಕೆಯಿಂದೆತ್ತುತಲಿ ದೂಷಿಸುತನ್ಯರ ಮೀಸೆಯ ತಿರುಹುತ ಲೇಸಗಾಣದೆ ಬಹು ಮೋಸಗೊಂಡಿಹೆನು 5 ಹಸ್ತಪಾದಾದಿಗಳ ಮೃತ್ತಿಕೆಯಿಂದಲಿ ತೊಳೆವ ತತ್ವ ನೋಡಲು ಕಣ್ಣು ಕತ್ತಲೆ ಬರುವುದು ಕತ್ತೆಗೆ ಷಡ್ರಸವೆತ್ತಲು ದೊರೆಯದು 6 ಸ್ನಾನದ ರೀತಿಯನಿನ್ನೇನೆಂದು ವರ್ಣಿಪೆನು ಮಾನವರಿದಿರು ನಿಧಾನದಿ ನಡೆವುದು ಮಾನಸ ವೈಶಿಕಧಾನಿಯಾಗಿಹುದು 7 ಮಡಿಯೆಂದು ಕೂತಿರಲು ಮಡದಿ ಹತ್ತಿರ ಬರಲು ಒಡವೆಯ ನೋಡುತ ಅಡಿಗೆಯ ಪಣ್ಕೆಯ ನುಡಿಯಲ್ಲದೆ ಜಪಗೊಡವೆಯೇನಿರದು 8 ಪಾಕ ಪೂರಣವಾಗೆ ಈಗ ಸಾಕೆಂಬೆ ಹರಿಪೂಜೆ ಶಾಕಾದಿಗಳು ವಿವೇಕವಾಗದಿರೆ ಭೀಕರಿಸುತ ಅವಿವೇಕನಾಗುವೆನು 9 ತದನಂತರದಿ ಪರರ ಕದನವನೆಬ್ಬಿಸುತಲಿ ಒದಗುತ ನಾನಾ ವಿಧದಲಿ ಎನ್ನಯ ವದನ ತುಂಬುವ ಮಾರ್ಗದಿ ದಿನ ಕಳೆವೆನು 10 ಇಂತು ದಿವಾಯುಷವನ್ನು ಸಂತರಿಸುತ ನಿಶೆಯೊಳ್ ಕಂತು ಕಲಾಪದ ಭ್ರಾಂತಿಗೊಂಡು ಮರ ದಂತೆ ಬೀಳಲು ನಿಮಿಷಾಂತರ ದೊರೆಯದು 11 ಪಾರಾವಾರದಕಿಂತ ಘೋರವಾಗಿರುವೀ ಸಂ- ಸಾರದಿ ಸಿಲುಕಿದರ್ಯಾರು ಕಾವರಿಲ್ಲ ಶ್ರೀರಮಾಪತಿ ಚರಣಾರವಿಂದವೆ ಗತಿ 12 ಈ ವಿಧ ದುಷ್ಕøತದಿಂದ ಕಾವನು ನೀ ಗೋವಿಂದ ಪಾವನಾತ್ಮಕ ಶೇಷಾವತಾರ ಗಿರಿ ಭವ ನಾವ ಮುಕುಂದ 13
--------------
ತುಪಾಕಿ ವೆಂಕಟರಮಣಾಚಾರ್ಯ
ಭೂಮಂಡಲಕೆ ಮಿಗಿಲೆನಿಸಿದ ತಾಯಿಕಂಡು ಬಂದೆನೆ ಪಾಂಡವರ ಭಾಗ್ಯವ ಪ. ಸಂಭ್ರಮದಿರಾಯನು ತುಂಬಿಸಿದ ಮನೆಯೊಳಗೆ ಉಂಬೊ ಪದಾರ್ಥ ಕೋಟಿ ಫಲಕದಳಿ ತಿಂಬೊ ಪದಾರ್ಥ ಕೋಟಿಷಡ್ರಸವೆಂಬೊ ಪದಾರ್ಥ ಕೋಟಿಈ ತೂಗಿಕೊಂಬ ಮಣಿಮಂಚ ಕೋಟಿ ತಾಯಿ1 ವಿತ್ತ ಕೋಟಿಯು ರಾಶಿ ರಾಯನಚಿತ್ತ ಸಂತೋಷ ರಾಶಿ 2 ಏಸುಮುನಿ ಬಳಗ ದಾಸರು ದಾಸಿಯರು ಬೀಸಿ ತೊಟ್ಟಿಲವ ತೂಗÀುವರುಮಕ್ಕಳನ ಸೋಸಿಲೆ ಕರೆದೊಯ್ಯುವರುಮಂಚದಲಿ ಹಾಸಿಗೆ ಹಾಸುವರು ರಾಯಗೆ ಈ ಬಗೆ ಸೇವಕರು ತಾಯೆ 3 ಎಲ್ಲ ಮನೆಯೊಳಗೆ ಮಲ್ಲಿಗೆ ಸಂಪಿಗೆ ಅಲ್ಲೆ ಕ್ಯಾದಿಗೆದವನವುಬುಕ್ಕಿಟ್ಟು ಅಲ್ಲಲ್ಲೆ ಶ್ರೀಗಂಧವುಎಲಿ ಅಡಕಿ ಅಲ್ಲಲ್ಲಿ ತಬಕಿಹೋದುರಾಯಗೆ ಈ ಬಗೆ ಸೇವಕರು ತಾಯೆ 4 ಆನೆಗಳು ಕಟ್ಯಾವ ಕುದರಿಯ ಸಾಲು ರಥಗಳು ಇಟ್ಟಾವ ಬಿಲ್ಲುಗಳು ಪಲ್ಲಕ್ಕಿ ಧಿಟ್ಟಾದ ವಯಿರಗಳು ರಮೆ ಅರಸಗಿಷ್ಟು ಉಪಚಾರಗಳು ತಾಯೆ 5
--------------
ಗಲಗಲಿಅವ್ವನವರು