ದೇವರ ಪೂಜೆಯ ಮಾಡಿರೋ ಮಾಡಿ ಬಿಟ್ಟರು ಬಿಡಿ
ಭೂದೇವರ ಪೂಜೆ ಮಿಗಿಲು ಬಿಡಬೇಡ ಪ
ಉಂಬೋ ದೇವರ ನೋಡಿ ಕರೆತಂದೊಯ್ಯನೆ
ಶಂಭು ಶ್ರೀಹರಿ ಎಂದು ಮನತಂದು ಕರು
ಪಾದ ತೊಳೆದು1
ಮಾತನಾಡುವ ದೇವನಿವನೆಂದು ಸಂಪ್ರೀತಿಯಿಂದಲೆ
ಈತ ಶಿವನೆಂದು ಜಾತಿ ಶ್ರೀ ಗಂಧ ಪುಷ್ಪವ ತಂದುಮನ
ವೊತು ಪೂಜೆಯನು ಮಾಡಿರೋ ಎಂದು 2
ಎಡೆಮಾಡಿ ಷಡುರಸಾನ್ನವ ನಂದು ಉಣ
ಬಡಿಸೆ ನಾರಿಯರಟ್ಟುದನುತಂದು
ಕಡುಬು ಕಜ್ಜಾಯ ಘೃತವನಂದು ಜಗ
ದೊಡೆಯ ನುಂಡನು ಸಾಕು ಬೇಕೆಂದು 3
ಹಸ್ತವ ತೊಳೆದ ಮೇಲ್ವೀಳ್ಯವ ಕೊಟ್ಟು
ಮತ್ತೇನಾ ಪೋಪೆನೆಂದರೆ ಪೊಡಮಟ್ಟು
ಚಿತ್ತೈಸಿ ಮರಳಿಬರಬೇಕು ದಯವಿಟ್ಟು ಎಂದು 4
ಪ್ರತಿಮೆಗಿಕ್ಕಿದರಲ್ಲೆ ಇಹುದು ಮತ್ತೆ
ಕ್ಷತಿಗೆ ಹಾಕಲುಬೇಕು ಬೇಡೆನ್ನಾದಿಹುದು
ಅತಿಥಿಗಿಕ್ಕಲು ಸಾಕು ಬೇಕೆನ್ನುತಿಹನು ಲಕ್ಷ್ಮೀ
ಪತಿಗಿದು ಪೂಜೆ ಸಂಪೂರ್ಣವಾಗಿ 5