ಶ್ರೀ ವಧುರಮಣನ ಚರಿತಾಮೃತವನು ಸೇವಿಸಬಾರದೆ ಜಿವ್ಹೆ|
ಆವಾಗು ವಿಷಯಾಸಕ್ತಿಲಿ ಬಾಳುವ ದಾವರಸಜ್ಞದ ಗುಣವೇ ಪ
ಆರತಿಯಿಂದಲಿ ಷಡರಸದನ್ನದ ಸಾರಾಯಕ ಮರುಳಾದೆ ನೀ|
ನರೆರಧರಕ್ಕೊಲಿದೇ ಸುಧಾರಸವೆಂದು ಬಗೆದೇ|
ಧಾರಣಿ ಕಳ್ಳಿಯ ಹಾಲೆಂದೆನಿಸಲು ಗೋರಸದ್ಹಂಬಲ ಮರೆದೆ 1
ಜ್ಞಾನವ ಸಾಧಿಸಿ ಬಹು ಸಾಯಾಸದಿ ನಾನು ಶಾಸ್ತ್ರವ ನೋಡಿ|
ಮಾನದ ಕಾಂಕ್ಷಿಯ ಕೂಡಿ|
ಪರಿ ಕುಣಿದಾಡುವ ಹೀನ ಮನುಜರಾ ಪಾಡಿ2
ಸ್ಮರಿಸಲು ಶ್ರೀಹರಿಯಾ ಲೋಹ|
ಪರಸವ ಮುಟ್ಟಿದ ಪರಿಯಾ ಧನ್ಯರು ತಮನೆನಿಸುವನರಿಯಾ|
ಗುರುವ್ಕ ಮಹಿತಪಿ ನಂದನು ಸಾರಿದ ಮೊರೆ ಹೋಗು|
ಮೂಜಗ ಧೊರಿಯಾ 3