ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿನರಿಯದೆ ಮರುಳಲೋಕ ಒಂದೊಂದು ಪರಿ ಗುರುಮಾಡಿಕೊಂಡುದರ ಹೊರವುತಿದೆ ಧರೆಯೊಳು ಬರಿದೆ ಭ್ರಮೆಗೊಂಡಿಹ್ಯದು ಪರಗತಿಯ ಜರೆದು ಶ್ರೀ ಗುರುಪಾದವನ್ನರಿಯದೆ 1 ಸತ್ವಧಾತುದ ನೆಲೆಯು ತತ್ವ ಮೋಹಲಾದನು ಮತ್ತೈದು ಮುದ್ರೆಗಳ ವ್ಯಾಪಿಸಿಹ ಪ್ರಾಣವನು ಮುದ್ರಿಸಿದಾತ ಪರಮಗುರುವು 2 ಸತ್ವ ರಜ ತಮವು ಮೊದಲಾದ ಗು- ಣತ್ವಗಳು ಪಂಚಭೂತಾತ್ಮದ ವಸ್ತಿ ವಿವರಣಗಳು ವಿಸ್ತಾರಗತಿಗಳನು ವಿಸ್ತರಿಸಿ ತೋರಿಸಿದಾತ ಸಾಕ್ಷಾತ ಗುರುವು 3 ಸ್ವಪ್ನ ಸುಷುಪ್ತಿ ಜಾಗ್ರತಿ ತ್ರಯವಸ್ಥಿತಿಗಳು ಪ್ರಾಣಪ್ರಣಮ್ಯ ಪ್ರವೃತ್ತಿ ನಿವೃತ್ತಿಗಳು ಶಕ್ತಿ ಉನ್ಮನಿಯ ಉದ್ಬವ ಗತಿಯು ತೋರಿಸಿದಾತ ಸಾಕ್ಷಾತ ಗುರುವು 4 ಹತ್ತು ಮತ್ತೆರಡು ಧ್ವನಿ ವತ್ತಿಗ್ಹೇಳೆನಿಸುವದ ರತ್ನ ಮೂರರ ಪ್ರಭೆಯ ದಾಟಿ ಸಂಜೀವನಿಯ ಸತ್ರಾವಿ ಜೀವನ ಕಳಾ ಮೃತವದೋರಿಸಿದಾತ ಸಾಕ್ಷಾತ ಗುರುವು 5 ಒತ್ತಿ ಆಧಾರ ಬಲದೆತ್ತಿ ಕುಂಡಲಣಿಯ ಕೆತ್ತಿ ಸರ್ಪೆತ್ತಿ ಮುಖ ಮಾಡಿ ಊಧ್ರ್ವ ಗತಿಯು ಮತ್ತೆ ಷಡಚಕ್ರಗಳ ಗತಿಗಳನು ದೋರಿದಾತ ಸಾಕ್ಷಾತ ಗುರುವು6 ಪತಿತ ಮಹಿಪತಿಯ ಪಾವನ್ನಗೈಸುತ್ತಮದಿ ಉತ್ಪತ್ತಿ ಸ್ಥಿತಿ ಲಯವು ತಾರಿಸಿ ಸ- ದ್ಗತಿಯು ನಿತ್ತಿಹ್ಯಾನಂದ ಘನ ಸತ್ಯ ಸದ್ಗುರು ಮೂರ್ತಿ ಸಾಕ್ಷಾತ ಪರಮಗುರುವು | 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಡಿ ನೋಡುವ ಮನವೆ ಹರಿಯ ಧ್ರುವ ಬೇಡಿಕೊಂಬುವೆ ಜೀವದ ಧೊರಿಯ ಕೂಡಿಕೊಂಬುವ ಪ್ರಾಣದ ಸಿರಿಯ 1 ಇಡಾಪಿಂಗಳ ಮಧ್ಯ ನಡುವ ಜಾಡೆ ಪಿಡಿದು ಕೂಡಿಕೊಂಬುವ 2 ದೃಢ ಪಿಡಿದು ಷಡಚಕ್ರ ಸೋಪಾನವೇರಿ ಗೂಢವಾಗಿ ಹ್ಯ ನಿಜನೋಡುವ 3 ಬ್ರಹ್ಮಾನಂದ ಸುಖಸಾಮ್ರಾಜ್ಯವಾಗಿಹ್ಯ ನಿರ್ಮನದಲಿ ಬೆರೆದಾಡುವ 4 ಸಹಸ್ರದಳದಲಿ ಹ್ಯ ಮಹಿಪತಿಸ್ವಾಮಿಯ ಸೋಹ್ಯ ತಿಳಿದು ಸುಖದಲಿರುವ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿ ನಿಮ್ಮೊಳು ನಿಜಾನಂದಬೋಧ ಕೂಡಿ ಕರುಣಾಸಿಂಧು ಶ್ರೀಗುರುಪಾದ ಧ್ರುವ ಇಡಾ ಪಿಂಗಳ ಮಧ್ಯ ನೋಡಿ ಈಗ ನಾಡಿ ಸುಷಮ್ಮವಿಡಿದು ಕೂಡಿ ಬ್ಯಾಗ ನೋಡಬಲ್ಲಿದೆ ಬ್ರಹ್ಮಾನಂದ ಭೋಗ ಗೂಢವಿದ್ಯವಿದು ತಾ ರಾಜಯೋಗ ಒಡನೆ ತಿಳಿಯುವದಲ್ಲ ಷಡಚಕ್ರ ಭೇದವಲ್ಲ ಬಡವರಿಗಳವಲ್ಲ ಗೂಢಿನ ಸೊಲ್ಲ 1 ಪಿಡಿದು ಮನಮಾಡಿ ದೃಢನಿಶ್ಚಯ ಬಿಡದೆ ಭೇದಿಸಿನೋಡಿ ಸುಜ್ಞಾನೋದಯ ಇಡದು ತುಂಬ್ಯದೆ ವಸ್ತು ಜ್ಯೋತಿರ್ಮಯ ಪಡೆದುಕೊಳ್ಳಿರೊ ಗುರು ಕರುಣ ದಯ ಮನ ಉನ್ಮನ ಮಾಡಿ ಘನಸುಖದೊಳು ಕೂಡಿ ಅನುದಿನ ನಲಿದಾಡಿ 2 ಮೂರುಗುಣರಹಿತ ಮೂಲರೂಪ ತೋರುತಿಹ್ಯದು ನಿಜ ನಿರ್ವಿಕಲ್ಪ ತರಳ ಮಹಿಪತಿ ಪ್ರಾಣ ಪಾಲಿಪ ಹೊರೆದು ಸಲಹುವ ಗುರುಕಲದೀಪ ಭಾವಿಕರಿಗೆ ಜೀವ ಕಾವ ಕರುಣದೇವ ವಾಸುದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು