ಶ್ರೀ ವಿಷ್ಣು ತೀರ್ಥರು (ಮಾದನೂರು)
ಶ್ರೀ ವಿಷ್ಣು ತೀರ್ಥರೆ ನಮೋ ಪ
ತಾಮರಸ ಭ್ರಮರರೆಂದನಿಸೂವಲೌಕಿಕ ಸುವೈದಿಕ ಸುಶಬ್ದ ಜಾತವಸಾರ್ವಭೌಮ ಹರಿಗನ್ವಯಿಪರಂ ಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ ಅ.ಪ.
ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿಅವಸಿತರು ಬಾಲ ಆಚಾರ್ಯ ಭಾಗೀರ್ಥಿ ಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂ ಸೇವಿಸಲು ಬಹು ಭಕುತಿಲಿ |ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |ಕಾಲದೊಳಗುಪನಯ ನವಂ ಮಾಡಿ ಸರ್ವ ವೇದ ವೇಂದಾಗ ಪಾರಂಗತರು ಐಜಿ ಆಚಾರ್ಯರಲಿ ಬಿಡಲು 1
ಕುಶಲತೆಯು ಮತ್ತೆ ಸೌಶೀಲ್ಯ ಗುಣನಿಧಿ ಎನಿಪಶಿಷ್ಯನಿಗೆ ಸಚ್ಛಾಸ್ತ್ರ ಪಾರಂಗತನು ಎನಿಸಿಒಸೆದು ದ್ವಿತಿಯಾಶ್ರಮಕೆ ಚೋದಿಸಿ ಕಳುಹಲವ ಗೃಹಧರ್ಮ ಸ್ವೀಕರಿಸುತ |ಎಸೆವ ಕೀರ್ತಿಲಿ ಮೆರೆದು ಶಿಷ್ಯರಿಗೆ ಶಾಸ್ತ್ರ ಬೋ-ಧಿಸುತಲಿರಲು ಸತ್ಸಂತಾನವಂತರಾಗುತಎಸೆವ ಹಂಸತೂಲಿಕ ತಲ್ಪದೊಳು ಪವಡಿಸಿರೆ ಅಪರಾಹ್ನ ರೋಗಾರ್ತರು 2
ಪತಿ ಪುರಂದರ ಸುದಾಸಾರ್ಯ ನುಡಿದುದನುಅಂತೆ ಮಂಚ ಬಾರದು ಮಡದಿ ಬಾರಳು ಎಂಬಪಿಂತಿನ್ವಚನವ ಕೇಳಿ ಚಿಂತಿಸುತ್ತಿರೆ ತಮಗೆ ಜಾತಿ ಸ್ಮøತಿ ಒದಗುತಿರಲು 3
ಘನವಾದ ಐಶ್ವರ್ಯ ಸತಿಸುತರು ಬಂಧುಗಳತೃಣಕೆ ಸಮ ತಿಳಿಯುತ್ತ ಜಯ ಗುರೂ ಹೃದ್ಗತವಅನು ಸರಿಸೆ ಅಜ್ಞಾತ ಬಗೆಯಲಿರುತಿಹನೆಂದು ವೈರಾಗ್ಯವನೆ ಪೊಂದುತ ||ಮನೆಯಿಂದ ಹೊರ ಹೊರಟು ಅನತಿ ದೂರವಸಾಗೆಘನ ಸರ್ಪ ರೂಪದಿಂ ತೋರಿ ಕೊಳೆ ಜಯತೀರ್ಥ ಮುನಿವರ್ಯ ಹೃದ್ಗತವ ತಿಳಿದು ವಸುಮತಿ ವ್ಯರ್ಥ ಸಂಚರಣೆ ಸಂತ್ಯಜಿಸುತ 4
ಶೃತಿ ಸ್ಮøತಿಗೆ ಸಮ್ಮತವು ದಶಮತಿಯ ಸಮಯವೆನುತತಿ ಹಿತದಿ ಪ್ರವಚನೆಗೆ ಪ್ರೇರಿಸಿಹ ಗುರುಮತವ ಸತ್ಕರಿಸಿ ಕಾರುಣ್ಯ ಕೊಂಡಾಡಿ ಸಾಧಿಸಲು ತೃತಿಯಾಶ್ರಮವನು ||ಹಿತದಿ ಕೈಕೊಂಡು ಮಲವ ತಾನಪಹರಿಪಸರಿತೃತಟದಲಿ ಇರುವ ಮನುವಳ್ಳಿ ಪಳ್ಳಿಯಲಿ ನೆಲಿಸುತಲಿ ವಿಹಿತ ಕರ್ಮಾಚರಿಸಿ ಸಿರಿಮತ್ಸು ಮಧ್ವ ವಿಜಯವ ಪಠಿಸುತಿಹರು 5
ಸಂಚಿತ ಸಿರಿ ವಿಷ್ಣುತೀರ್ಥರೆಂಬಂಕಿತದಿ ಮೆರೆಯುತಿಹರು 6
ಭಾಗವತ ಸಾರದುದ್ಧಾರವನುಮುಂತಾದ ಮುಕುತಿ ಸತ್ಪಂಥಗಳ ಬೋಧಿಪಗ್ರಂಥಗಳ ರಚಿಸಿ ಸುಜನೋದ್ಧಾರವನೆ ಗೈದು ಶೋಭಿಸುವರವನಿಯಲ್ಲಿ 7
ಲಕ್ಷುಮಿಯು ನರೆಯಣರನುಗ್ರಹವನೇ ಪಡೆದುದಕ್ಷಿಣದಿ ಬದರಿಕಾಶ್ರಮವೆನುತಿರೆ ಮೆರೆವತ್ರಕ್ಷ್ಯ ಮೋದೇಶ್ವರ ಪುರದಲಿ ನೆಲಿಸಿ ನೂರೆಂಟು ಸಲ ಸುಧೆ ಪ್ರವಚಿಸುತಲಿ ||ಕುಕ್ಷಿಯೊಳಗುಳ್ಳ ಸು ಕ್ಷೇತ್ರಗಳ ಸಂಚರಿಸಿ ಲಕ್ಷಿಸುತ || ಯೋಗ್ಯ ಜನಕುಪದೇಶ ಚರಿಸಲುಸ್ವಕ್ಷೇತ್ರಕೇ ಮರಳಿ ಕುಶಸರಿತು ತೀರದಲಿ ಪರ್ಣ ಶಾಲೆಯಲಿ ವಸಿಸಿ 8
ಕಾಲ ತಾ ತಿಳೀಯುತ್ತ ಶಿಷ್ಯಜನಕರಿವಿತ್ತು ಶಾಲಿವಾನ ಸಹಸ್ರ ಷಟ್ಯತೊತ್ತರವಷ್ಟಸಪ್ತತಿಯು ಮಾಘಾಸಿತ ಪಕ್ಷ ತ್ರಯೋದಶಿ ಸುಮೂಹೂರ್ತದಿ ||ಸುರರು ಭೂಸುರರೆಲ್ಲ ಜಯಘೋಷ ಗೈಯ್ಯುತಿರೆವರ ಮಹಾತ್ಮರು ಆಗ ಹೊಗಲು ವೃಂದಾವನವಪರಿಜನರು ಮುಳುಗಿದರು ದುಃಖ ಆನಂದ ಸಾಗರದಲದನೇನೆಂಬನು 9
ಅವತಾರಮಾರಭ್ಯ ಐದು ದಶ ವರ್ಷಗಳುಅವನಿಜನ ದೃಗ್ವಿಷಯರೀ ಮಹಾತ್ಮರು ತಾವುಅವಧೂತ ವೇಷದಿಂ ಭವನ ಪಾವನವೆನಿಸಿ ಪಿಂತೆ ಶುಕಮುನಿಯಂದದಿ ||ಪವನ ಮತ ಶರನಿಧಿಗೆ ಶಶಿಯು ಇಪ್ಪತ್ತೆಂಟುಪವಿತರ ಸುಲಕ್ಷಣ ಸುತನುವಿಂದುರೆ ಮೆರೆದುಅವನಿಸುರ ಶಿಕ್ಷಣ ಸದುಪದೇಶನುಷ್ಠಾನದಿಂ ಗೈದ ಕೀರ್ತಿಯುತರು 10
ಇವರ ನಾಮಸ್ಮರಣೆ ಕಲಿಮಲದ ಅಪಹರಣೆಇವರ ಸೇವೆಯ ಫಲವು ಸರ್ವಾಮಯ ಹರವುಇವರುನುಗ್ರಹವಿರಲು ವಾದಿನಿಗ್ರಹವಹುದು ಇದಕೆ ಸಂಶಯ ಸಲ್ಲದು ||ಇವರಿಹರು ಸುರತರುವಿನಂದದಲಿ ಶರಣರಿಗೆಇವರೆ ಚಿಂತಾಮಣಿಯು ಸರ್ವ ಭಯ ಹರಿಸುವರು ಇವರ ಗುಣಕೊಂಡಾಡಿ ಇವರೊಲಿಮೆ ಅರ್ಜಿಸಲು ಸರ್ವಕಾಮವು ಲಭ್ಯವು 11
ಸರ್ವಕ್ಷೇತ್ರಾಧಿಕದಿ ಭೂವರಹ ನಿಲ್ಲಿರುವಸರ್ವಭಯ ನಾಶನಕೆ ನರಹರಿಯು ಅರಿರೂಪಸರ್ವಭಕ್ತರ ಭೀಷ್ಟ ವರ್ಷಣಕೆ ಗೋಪಾಲಕೃಷ್ಣರೂಪದಿ ಇರುವನು ||ಇವರ ವೃಂದಾವನದೊಳೀ ಪರೀ ಹರಿರೂಪಪವನ ರೂಪಗಳಿಹವು ಶಿರದೊಳಗೆ ಜಯ ಮುನಿಯುಸರ್ವಋಷಿ ದೇವತೆಗಳಿಹರು ವೃಕ್ಷರೂಪದಿ ಈ ಪವಿತರ ಕ್ಷೇತ್ರದಿ 12
ಭಾಗವತ ನಿಷ್ಠಾತರೆ ||ನಮೊ ನಮೋ ಭಕ್ತಜನ ಕಾಮಧುಕ್ ಭವ್ಯಾತ್ಮನಮೋ ಶ್ರೀ ಮದಾನಂದ ಮುನಿಚರಣ ಮಧುಪರೆನಮೊ ಗುರೂ ಗೋವಿಂದ ವಿಠಲ ಪಾದಾಶ್ರಿತರೆ ನಮೊ ವಿಷ್ಣುತೀರ್ಥ ಪಾಹಿ ||