ಪ್ರಾಣಾ - ದೇವನೇ | ಸಕಲ ಜಗ | ತ್ರಾಣ ನಾದನೇ ಪ
ರೇಣು ವಂತಿರಿಸೊ ಅ.ಪ.
ಪಂಚ - ರೂಪನೇ | ಪ್ರಾಣಾದಿ | ಪಂಚ ಕಾರ್ಯನೇ |ವಂಚಿಸಿ ದೈತ್ಯರ | ಸಂಚುಗೊಳಿಸಿ - ನಿ-ಷ್ಕಿಂಚಿನ ಜನಪ್ರಿಯ ಸಂಚಿಂತನೆ ಕೊಡು 1
ಹಂಸ ನಾಮವಾ | ಪ್ರತಿದಿನ | ಶಂಸಿಪೆ ಪವನಾ |ಹಂಸ ಮಂತ್ರವೇಕ | ವಿಂಶತಿ ಸಾಸಿರ ಶಂಸಿಸಿ ಷಟ್ಯತ | ಹಂಸನಿಗೀವೆ 2
ವಿಧಿ | ಪೂರ್ವಕ ಸಾಧನನಿರ್ವಹಿಸುವ ತೆರ | ತೋರ್ದನು ನೀನೇ 3
ವಿಶ್ವ-ವ್ಯಾಪಕಾ | ಹರಿಗೆ ಸಾ | ದೃಶ್ಯ ರೂಪಕಾ |ಅಶ್ವರೂಪ ಹರಿ | ವಶ್ಯನೆನಿಸಿ ಬಹುವಿಶ್ವಕಾರ್ಯ ಸ | ರ್ವಸ್ವ ಮಾಳ್ಪೆಯೊ 4
ದೇವ-ಋಷೀ-ಪಿತ | ನೃಪರು-ನರ | ರೈವರೊಳಗಿರುತಾ |ಜೀವರುಗಳ ಸ್ವ | ಭಾವ ವ್ಯಕುತಿಗೈ ದೀವಿರಿಂಚಾಂಡವ | ನೀ ವಹಿಸಿದೆಯೋ 5
ಶುದ್ಧ-ಸತ್ವಾತ್ಮದ | ದೇಹದೊ | ಳಿದ್ದರೂ ಲಿಂಗದ |ಬದ್ಧ ವಿಹೀನನೆ | ದಗ್ದ ಪಟದ ಪರಿಸಿದ್ಧ ಸಾಧನ ಅನ | ವವ್ಯ ನೆನಿಸುವೇ 6
ಹೀನ-ಸತು ಕರ್ಮವಾ | ಪವಮಾನ | ತಾನೇ ಮಾಡುವಾ |ಜ್ಞಾನದಿಂದಲೇ | ನೇನು ಮಾಳ್ಪುದನುಪ್ರಾಣಪಗೊಂಡು ಕು | ಯೋನಿಯ ಕಳೆವ 7
ಕ | ವಾಟ ಅಹಿಪವಿಪ ಲ-ಲಾಟ ನೇತ್ರಗೆ | ಸಾಟಿ ಮೀರ್ದನೇ 8
ವಾಙ್ಮನೋ-ಮಾಯನೇ | ದೇವ | ಸ್ತೋಮ ದೊಳಗಿಹನೇ |ಶ್ರೀ ಮಹಿನುತ ಶ್ರೀ | ರಾಮಚಂದ್ರ ಗುಣಸ್ತೋಮ ಪೊಗಳ ನ | ಮ್ಮಾಮಯ ಹರ9
ಮೂಲೇಶ ಪದವ | ಪಿಡಿದಿಹ | ಪ್ರಾಣನ ಚರಣಾಕಿಲಾಲಜವನು | ಓಲೈಸುತಲಿಹಕಾಲ ಕರ್ಮದಿಹ | ಕೀಳು ಜೀವನ ಪೊರೆ 10
ಭಾವಿ ಬ್ರಹ್ಮನೇ | ಜೀವರ | ಸ್ವಭಾವ - ವರಿತನೇ ಕಾವ ಕಾಲ್ಪ ಗುರು | ಗೋವಿಂದ ವಿಠಲನಪಾವನ ಚರಣವ | ಭಾವದಿ ತೋರೈ 11