ಸುರಪನಾಲಯದಂತೆ ಮಂತ್ರಾಲಯ
ಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ ಪ
ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವ
ಭೌಮ ಸುಧೀಯೀಂದ್ರಸುತ ರಾಘವೇಂದ್ರ
ಆಮಯಾಧಿಪ ಖಳತಮಿಶ್ರ ಓಡಿಸುವ ಚಿಂ
ತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ 1
ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯಾಶ್ರಿ
ತರ ಮನೋರಥಗಳನು ಪೂರೈಸುವಾ
ಧರಣಿಸುರಾಖ್ಯ ಷಟ್ಟದಗಳಿಗೆ ಸತ್ಯದಾ
ಪರಿಮಳದಿ ತೃಪ್ತಿಬಡಿಸುವ ಮರುತನಂತೆ 2
ವಾರಾಹಿ ಎಂಬ ನಂದನ ವನದಿ ಜನರತಿ ವಿ
ಹಾರ ಮಾಳ್ಪರು ಸ್ನಾನಪಾನದಿಂದಾ
ಶ್ರೀ ರಾಘವೇಂದ್ರನಿಲ್ಲಿಪ್ಪ ಕಾರಣ ಪರಮ
ಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು 3