ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರ ನಂಬುಗೆ ಜಗದೆನಗಿಲ್ಲ ಹರಿಯೆ ಕಾರುಣ್ಯನಿಧಿ ನೀನೆ ಗತಿಯೆನಗೆ ಪೊರೆಯೈ ಪ ತಿಂಡಿಗ್ಹಾಕುವತನಕ ಹೆಂಡತಿಯು ನುಡಿಯುವಳು ಗಂಡನೇ ಗತಿಯೆಂದು ಮಂಡೆಯನು ಬಾಗಿ ತಿಂಡಿತಪ್ಪಿದ ಕ್ಷಣದಿ ಕಂಡಕಂಡತೆ ಕೂಗಿ ಬಂಡುಮಾಡುವಳಿಹ್ಯದಿ ಷಂಡನೆಂದಭವ 1 ಬಂಧುಬಾಂಧವರೆಲ್ಲ ಸಂದುಬಿಡಿದಡಿಗಡಿಗೆ ವಂದಿಸಿ ನುಡಿಯುವರು ತಿಂದುಡುವನತಕ ಸಂಧಿಸಲು ಬಡತನವು ವಂದಿಸಿದವರೆ ಮನ ಬಂದಂತೆ ನಿಂದಿಪರು ಕುಂದ್ಹೊರಿಸಿ ದೇವ 2 ಭೂಮಿಯ ಜನರೆಲ್ಲ ಕ್ಷೇಮ ನೀ ಕೊಟ್ಟಿರಲು ತಾಮಸವ ಬಿಟ್ಟು ಬಲು ಪ್ರೇಮ ಬಳಸುವರು ಸ್ವಾಮಿ ಶ್ರೀರಾಮ ನಿಮ್ಮ ಪ್ರೇಮ ತುಸು ತಪ್ಪಿದರೆ ಭೂಮಿಯೊಳಗಿನ ಕೇಡು ನಾ ಸ್ಮರಿಸಲಾರೆ 3
--------------
ರಾಮದಾಸರು
ಇಂದು ಕಂಡೇ ಪ ಪಾದ ಭಜನೆ ಮಾಡುವದೊಂದೆ ಅ.ಪ. ಪುಟ್ಟಿದಾರಾಭ್ಯ ಬಹುದಿಟ್ಟನಾಗಿಯೆ ಬಾಳು ಅಟ್ಟಿಮೆರೆಯುವ ಬಯಕೆ ವಿಟ್ಟು ಮನದಲಿ ಬಹಳ ಕಷ್ಟಪಟ್ಟೆನು ಘಳಿಸೆ ವಿತ್ತರಾಶಿಯ ವಿಪ್ರ ಶ್ರೇಷ್ಟಧರ್ಮವ ಬಿಟ್ಟು ವ್ಯರ್ಥ ವಿದ್ಯೆಯ ನೋದಿನೋದಿ ಅಷ್ಟಕರ್ತನು ಬಯಕೆ ಬಟ್ಟಬಯಲನು ಗೈದು ಕೊಟ್ಟು ಜ್ಞಾನದ ಕಣ್ಣು ನೆಟ್ಟನೆ ನೊಡೆನಲು ಬಟ್ಟು ಸುಖವನೆ ಮೆಲ್ವ ಜಟ್ಟಿ ಜಗದಲಿ ಕಾಣೆ ಭವ ಸುಖಕೆ 1 ಹೆಂಡತಿಯ ಸುಖವೆಂದೆ ಕೆಂಡಬಡತನ ಸೋಕೆ ಗಂಡು ಬಯಕೆಗಳೆಲ್ಲ ಉಂಡುದಣಿಯಲಿಲ್ಲ ಮಂಡೆ ಚಚ್ಚುತ ನಿತ್ಯ ತುಂಡು ಆದಳು ಅವಳು ಬೆಂಡು ಆದೆನುನಾನು ಹಿಂಡು ಬಳಗಗಳೆಲ್ಲ ಉಂಡು ದಣಿದರು ನಗೆಯ ಹಿಂಡಿ ಪರಜನ ಪ್ರಾಣ ಉಂಡು ಬದುಕಿಹೆ ಸ್ವಾಮಿ ಮುಂಡೆ ಗಿಂತಲು ಹೀನ ಷಂಡನಾಗಿಹೆ ಸ್ವಾಮಿ ಪಾಂಡುರಂಗನೆ ನಿನ್ನ ತೊಂಡನಾದರೆ ಧನ್ಯ 2 ವಿತ್ತ ಗಂಟು ಇಲ್ಲದಮೇಲೆ ಗಂಟುಮೋರೆಯ ನೇಮ ಒಂಟಿಗನೆ ಜೀವನಿಹ ನೆಂಟ ಬಿಂಬನೆ ಒಬ್ಬ ಭಂಟನೆಂದರೆ ಪಿಡಿವ ಶುಂಠ ಬಿಟ್ಟವ ಸತ್ಯ ಕಂಟಕವು ವಿಷಯತತಿ ಕಜ್ಜಿತಿನಸಿನ ತೆರದಿ ಎಷ್ಟು ಸೇವಿಸಲಷ್ಟು ತಂಟೆನೀಡುವವೇನೆ ಕುಂಠವಾದರು ಕರುಣ ಅಂಟಿಮನಸಿಗೆ ಭಾಧೆ ಉಂಟುಮಾಡುವವು ವೈಕುಂಠ ನಾಯಕಕಾಯೊ 3 ಬಾಡಿಗೆಯ ಮನೆಯಂತೆ ಗಾತ್ರವಿದು ಜೀವನಿಗೆ ಹೂಡಿಹನು ಭವಯಾತ್ರೆ ಓಡಿಹೊಹುದು ತಾನೆ ಆಗಿ ಮುಗಿಯಲು ಆಟ ಪ್ರೌಡ ಹರಿಪುರ ದಾರಿ ನೋಡಿಕೊಂಡವ ಜಾಣ ಕೇಡು ಮತ್ತಗೆ ಸಿದ್ಧ ಮಾಡುತಲಿ ವಿಧಿಗಳನು ದೂಡುತಲಿನಿಜೀವ ಕೂಡುತಲಿ ಸಜ್ಜನರ ಹಾಡುತಲಿ ಹರಿಗಾನ ಜೋಡಿಸುತ ಹರಿಭಕ್ತಿ ಬೇಡದಲೆ ಏನೊಂದು ಬಾಡದಿರೆ ದುಃಖ ಬರೆ ನೋಡುವನು ನಿಜ ಸುಖವ 4 ಹೆಂಡತಿಯು ಸುಗುಣಿ ಇರೆ ಗಂಡನಿಹ ದುರ್ಮಾರ್ಗ ಗಂಡ ಮೃದು ತರವೆನ್ನೆ ಹೆಂಡತಿಯು ಕರ್ಕಸಿಯು ಕುಂಡಲಿಯ ಸಿರಿಯೆನ್ನೆ ಮಂಡೆಯಲಿ ಮೆದುಳಿಲ್ಲ ಹೆಂಡ ಕುಡುಕರು ಸುತರು ಉಂಡುಸುಖಿಸೆ ರೋಗ ಮುಂಡೆಯರ ಚಲುವಿಕೆಯು ಶಂಡಸಹ ಸಂಸಾರ ಭಂಡ ಮಕ್ಕಳ ಬಾಳು ಪುಂಡಜನ ಸಹವಾಸ ಕಂಡು ಸಹಿಸದ ನೆಂಟ ಉಂಡು ದೂರುವ ಬಳಗ ದಂಡವಲ್ಲವೆ ಮತ್ತೆ ಕೊಂಡು ಮಾಡುವದೇನು 5 ಭವ ನಿಜಗುಣವೆ ಕ್ಲೇಶದಾಯಕ ವಿರಲು ಲೇಸು ದೊರಕುವದುಂಟೇ ಏಸು ಕಾಲವು ಕಳಿಯೆ ಏಸು ಕಡಿಯಲು ನೀರ ಸೂಸುವುದೆ ನವನೀತ ಹೇಸಿಗೆಯ ದುರ್ಗಂಧ ನಾಶವಾಗುವುದುಂಟೇ ಕ್ಲೇಶ ತೊಲಗದು ಎಂದು ದಾಶರಥಿಯ ಮನಮುಟ್ಟಿ ದಾಸ ನಾಗದ ತನಕ ಭಾಸವಾಗದು ಜ್ಞಾನ ಶ್ರೀಶ ಕಾಣಿಸ ತನ್ನ ದೋಷಿಯಾಗದೆ ಹರಿಗೆ ಮೀಸಲೆನ್ನಿರಿ ಎಲ್ಲ 6 ನಂಬಿ ಮತಿಮತ ತತ್ವ ವಿಷಯ ಹಂಬಲವಳಿದು ಡಿಂಬಗತ ಹರಿ ಬಿಂಬ ಧ್ಯಾನ ಮಾರ್ಗವ ಕಂಡು ಅಂಬುಜಾಕ್ಷ ನಮ್ಮ “ಶ್ರೀ ಕೃಷ್ಣವಿಠಲ”ನ್ನ ತುಂಬಿ ಹೃದಯದದಿ ಸತತ ಪರಮ ಸಂಭ್ರಮದಿಂದ ತಂಬೂರಿ ಮೀಟುತ್ತ ಗೆಜ್ಜೆ ಸಹ ಕುಣಿಕುಣಿದು ಅಂಬಕದಿ ಸುಖ ಬಾಷ್ಪ ಸುರಿಸುತ್ತಹರಿನೆನೆದು ಅಂಬುಜಾಸನ ಸುರಕದಂಬ ಕರುಣವ ಗಳಿಸಿ ಅಂಬೆ ಸಿರಿಪತಿ ಚರಣದಿಂಬು ಬೇಡುವದೊಂದೇ 7
--------------
ಕೃಷ್ಣವಿಠಲದಾಸರು
ಉದಕ ಕಡೆದರೆ ಬೆಣ್ಣಿಲ್ಲಿಹ್ಯದೋ ಪ ಜೀವನ ಬಳಿಗ್ಹೋಗಿ ದೈನ್ಯಬಡುತ ಬಲು ಮಣಿದು ಬೇಡಲಲ್ಲೇನಿಹ್ಯದೋ ಅ.ಪ ಕಾಣದೆ ಬೊಗಳಿದರೇನಾದೋ ಒಣ ಗಾಣಾತರುವವಲಲ್ಲೇನಾದೋ ಕೋಣನ ಬಳಿಗ್ಹೋಗಿ ಸಾನುರಾಗದಿ ಒಳ್ಳೆ ವೀಣೆ ನುಡಿಸಲಲ್ಲೇನಾದೋ 1 ದೀನನ ಕಾಡಲು ಏನಾದೋ ಮಹ ಹೀನನ ಸೇರಿದರೇನಾದೋ ಜ್ಞಾನಬೋಧಾಮೃತ ಜಾಣತನದಿ ಅ ಜ್ಞಾನಿಗೆ ತೋರಿದರೇನಾದೋ 2 ಭಂಡರ ದಂಡಿಸಲೇನಾದೋ ಮಿಂಡೆ ಷಂಡನ ಕೂಡಿದರೇನಾದೋ ಮಂಡೆಬೋಳಿ ಮುಂದೆ ಗೊಂಡೆಮುತ್ತಿನ ಮಹ ದಂಡೆಯ ತಂದಿಡಲೇನಾದೋ 3 ಪಥ ಕೇಳೆಲೇನಾದೋ ಬಲು ದುರುಳ ಧರೆಯಾಳಿದರೇನಾದೋ ಕರುಣವಿಲ್ಲದ ಪರಮ ಪಾಪಿಗಳಿ ಗೆರಗಿ ಬೇಡಲಲ್ಲೇನಾದೋ 4 ಮಾನವ ಇಹ್ಯಮೆಚ್ಚಲಲ್ಲೇನಾದೋ ಮತಿ ಹೀನರ ಜಾಣತ್ವದೇನಾದೋ ಪ್ರಾಣೇಶ ರಾಮನ ಖೂನ ತಿಳಿಯದ ಮಾನವನಾದಲ್ಲೇನಾದೋ 5
--------------
ರಾಮದಾಸರು
ಬಂದಿದೆ ದೂರು ಬರಿದೆ ಪಾಂಡವರಿಗೆ ಪ ಕೊಂದವರಿವರು ಕೌರವರನೆಂಬಪಕೀರ್ತಿ ಅ ಮುನ್ನಿನ ವೈರದಿ ಕಡು ಸ್ನೇಹವ ಮಾಡಿಉನ್ನತ ಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವ ಕೊಂದವನುಘನ್ನಘಾತಕ ಶಕುನಿಯೊ ಪಾಂಡವರೊ 1 ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆಪದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ 2 ಮಗನ ನೆಪದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಲಿಜಗವರಿಯಲು ಕುರುವಂಶಕ್ಕೆ ಕೇಡನುಬಗೆದು ಕೊಂದವನು ದ್ರೋಣನೊ ಪಾಂಡವರೊ3 ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆಕೊಟ್ಟ ಭಾಷೆಗೆ ಐವರ ಕೊಲ್ಲದೆನೆಟ್ಟನೆ ರಣಮುಖದಲಿ ತನ್ನ ಪ್ರಾಣವಬಿಟ್ಟು ಕೊಂದವನು ಕರ್ಣನೊ ಪಾಂಡವರೊ 4 ಮಥನಿಸಿ ಸೂತತನವ ಮಾಡಿ ರಣದೊಳುಅತಿಹೀನಗಳೆಯುತ ರವಿಸುತನರಥದಿಂದಿಳಿದು ಪೋಗಿ ಕೌರವಬಲವನುಹತ ಮಾಡಿದವನು ಶಲ್ಯನೊ ಪಾಂಡವರೊ 5 ಜಲದೊಳು ಮುಳುಗಿ ತಪವ ಮಾಡಿ ಬಲವನುಛಲದಿಂದೆಬ್ಬಿಸಿ ಕಾದುವೆನೆನುತಕಲಿ ಭೀಮಸೇನನ ನುಡಿಗೇಳಿ ಹೊರವಂಟುಕುಲವ ಕೊಂದವನು ಕೌರವನೊ ಪಾಂಡವರೊ6 ಕವುರವ ಪಾಂಡವರಿಗೆ ಭೇದ ಪುಟ್ಟಿಸಿಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿಸವುಶಯವಿಲ್ಲದೆ ಕುರುಬಲವ ಕೊಂದವನುಹಿವುಸಕನಾದಿಕೇಶವನೊ ಪಾಂಡವರೊ 7
--------------
ಕನಕದಾಸ
ಭಂಡನೆಂದು ಎನ್ನ ನೀ ತಿಳಿಯೋ ಅಖಿಲಾಂಡನಾಯಕ ಪ ತಂಡ ತಂಡದಿ ಒದಗಿ ಬರುತಿಹ ಗಂಡ ಸಂತತಿ ನಾ ಕಂಡು ಬೆದರುವ ಷಂಡನಲ್ಲವೊ ಪುಂಡರೀಕ ಲೋಚನನೇ ದೊಡ್ಡ 1 ಮಂದ ಮಾನವರಿಂದ ನುಡಿಸುವ ನಿಂದೆ ವಚನಗಳಿಂದ ಮನ ನೊಂದರೂ ಗೋವಿಂದ ನಿನ್ನನು ಬಂಧುವೆಂದು ನಂದದಿ ಪೊಗಳುವ 2 ದ್ವೇಷಿ ಜನಗಳೂ ರೋಷದಿಂದಲಿ ಶೋಷಿಸಿದರೂ ನೀ ಕಮ ಲೇಶ ಎನ್ನನು ಪೋಷಿಸುವನೆಂದು ಘೋಷಿಸುವೆನೋ ಶೇಷಶಯನನೇ 3 ಹೀನ ಮಾನವರಿಂದ ನೀ ಅವಮಾನ ನೀಡಿದರೂ ವರ ಜಾನಕೀಶನೆ ನೀನು ಎನ್ನಯ ಮಾನರಕ್ಷಕನೆಂದು ಅರಿಯುವ 4 ಸಣ್ಣ ಮಾನವರಿಂದ ಎನ್ನಯ ಸಕಲ ವೈಭವವು ದೊಡ್ಡ ಸೊನ್ನೆಯಾದರು ನಿನ್ನ ಪಾದಗ ಳನ್ನು ಬಿಡೆನೊ ಪ್ರಸನ್ನ ಮೂರುತಿ 5
--------------
ವಿದ್ಯಾಪ್ರಸನ್ನತೀರ್ಥರು
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು
ಶ್ರೀರುಕ್ಮಿಣೀರಮಣ ತಾನುಡಿಸಿದಂತೆ ನಾಂ ಧಾರುಣಿಪ ಜನಮೇಜಯಂಗೆ ಮುನಿ ಪೇಳಿಸಿದ ಹದಿನೆಂಟುಪದ್ಯಗಳೊಳಾಲಿಸುವುದು ದನುಜದಿವಿಜರೀ ಭುವಿಯೊಳವತಿರಿಸಿದರುಸುಯೋ ಧನಪಾಂಡುತನಯರಂ ಸೈರಿಸದೆಭೇದಮಂ ಕಟ್ಟಿಸಿಯರಗಿನಮನೆಯೊಳವರನಿಡಲು | ವನಜಲೋಚನನ ಕೃಪೆಯಿಮದದಂದಾಟಿಕಾ ನನದಲಿ ಹಿಡಿಂಬಬಕರಂ ಮುರಿದುದೃಪದರಾ ಪುತ್ರರಪಡೆದರಾದಿಪರ್ವದಲ್ಲಿ 1 ರಾಜಸೂಯಾಭಿಧಾನದ ಯಾಗಕಾರಣದೊ ಳಾಜರಾಸಂಧಾದಿಗಳ ಕೊಲಿಸಿನೃಪಧರ್ಮ ಜೂಜಿನಲಿಸೋಲಿಸಲು ಪಂಚಪಾಂಡವರಂ ಸ ರೋಜಾಕ್ಷಿ ದ್ರೌಪದಿಯ ಭಂಗಪಡಿಸಲ್ಕೆಪಂ- ಸಭಾಪರ್ವದಲಿ 2 ಅಡವಿಯೊಳು ವಾಸವಾಗಿರಲು ಪಾಂಡುಸುತರ್ಗೆ ಪೊಡವಿ ಸುರರರುಹಿಸಲ್ ಸತ್ಕಥೆಗಳಾಲಿಸುತ ಘೋಷಯೊಳಹಿತನ ಬಿಡಿಸಿದಂ ಗಂಧರ್ವಪತಿಯಿಂದ ಪಾರ್ಥನೀ ರಡಿಸಿ ನಾಲ್ವರುಮೂರ್ಛೆಪೊಂದಲ್ಕೆಯಕ್ಷಂಗೆ ಅರಣ್ಯಪರ್ವದೊಳಗೆ 3 ಬಂದುಮಾತ್ಸ್ಯಾಲಯದಲಜ್ಞಾತವಾಸದೊಳ ಗಂದುಪಾಂಡವರಿರಲ್ ಕೀಚಕಾಧಮನು ಸೈ- ಭೀಮಗಂಧರ್ವ ವ್ಯಾಜದಿಂದ ಕೊಂದವಾರ್ತೆಯ ಕುರುಪಕೇಳಿ ಸೇನೆಸಹಿತ ಪಾರ್ಥಗೆ ವಿರಾಟಪರ್ವದಲ್ಲಿ 4 ದೇವಕೃಷ್ಣಸಂಧಿಗೆ ತರಲ್ ಕುರುಪದು ರ್ಭಾವದೊಳಗಿರಲದಂ ತಿಳಿದುವಿದುರನ ಮನೆಯೊ ಕೌರವಸಭೆಗೆಪೋಗಿ ಈವುದೈದೂರುಗಳ ಪಾಂಡವರಿಗೆನೆ ಭೇದ ಭಾವದಿ ಸುಯೋಧನಂಸೂಜ್ಯಾಗ್ರಭೂಮಿಯಂ ತಾ ನೀವುದಿಲ್ಲವೆನೆ ಯುದ್ಧನಿಶ್ಚಯಗೈದನುದ್ಯೋಗಪರ್ವದಲಿ 5 ಕುರುಪತಿಯು ಗಂಗಾಸುತಗೆ ಪಟ್ಟಗಟ್ಟಿದಂ ಎರೆಡುಬಲಮಂ ಸೇರಿಯಿರಲರ್ಜುನಂ ತನ್ನ ವರಕೊಲ್ವದೆಂತೆನಲ್ ಹರಿವಿಶ್ವರೂಪಮಂ ತೋರಿತತ್ವವತಿಳಿಸಲು ತರುವಾಯ ಹತ್ತುದಿನಕಾದುತಿರಲಾಗಭೀ ಷ್ಮರಿಗೆಷಂಡನನೆವದಿ ಶಸ್ತ್ರಸಂನ್ಯಾಸ ವಾ ಭೀಷ್ಮಪರ್ವದಿಕಥೆಯಿದು 6 ಗುರುಗಳಿಗೆ ಪಟ್ಟಾಭಿಷೇಕವಾಯಿತುದ್ರೋಣ ದೊರೆಯಹಿಡಿತಹೆನೆಂದು ತಪ್ಪೆಸಂಶಪ್ತಕರ ನರನೊಡನೆ ಕಾದಿದರು ಪಾರ್ಥಸುತಪೊಕ್ಕುಪದ್ಮವ್ಯೂಹ- -ದೊಳುಮಡಿಯಲು ನರಪ್ರತಿಜ್ಞೆಯಗೈದು ಸೈಂಧವನ ವಧಿಸಿದನ ಸುರ ಘಟೋತ್ಕಚ ರಾತ್ರಿಯುದ್ಧದೋಳ್ ಸಂದನಾ ದಿನದಲಿದ್ರೋಣಪರ್ವದೊಳಗೆ 7 ಕುರುಸೈನ್ಯಬತ್ತಿರುವ ಶರಧಿಯೋಲಾಯ್ತು ದಿನ ಕರಸುತಗೆ ಪಟ್ಟವಂಗಟ್ಟಿ ದುರ್ಯೋಧನಂ ಹರನುತ್ರಿಪುರವ ಗೆದ್ದಕಥೆಯವಿಸ್ತರಿಸಿ ಸಾರಥಿಯ ಮಾಡಲು ಶಲ್ಯನ ನರನವಿಕ್ರಮಪೊಗಳಿ ಕರ್ಣನಬಲವನುಧಿ ಕ್ಕರಿಸೆಮಾದ್ರೇಶ್ವರಂ ಕರ್ಣನತಿ ಖಾತಿಯಿಂ ದೆರಡುದಿನ ಕಾದಿಯರ್ಜುನನಿಂದ ಮಡಿದ ಸೂತಜ ಕರ್ಣಪರ್ವದಲಿ 8 ಸೂತಜನಮರಣದಲಿ ಶಲ್ಯಗಾಯಿತು ಪಟ್ಟ ಶಕುನಿಯಂಸಹದೇವಸಂಹರಿಸಲು ಪಾತಕಿ ಸುಯೋದನಂ ಕೊಳನಪೊಕ್ಕಿರಲು ಯಮ ಜಾತಾದಿಗಳು ಪೋಗಿ ನುಡಿಸಲ್ಕೆಜಲ ಪೊರಟು ಕುರುಪನು ಶಲ್ಯಪರ್ವದೊಳಗೆ 9 ಗುರುಜಂಗೆ ಬೆಸಸಿದಂ ಕುರುರಾಯ ಪಾಂಡವರ ಶಿರವತಹುದೆನುತಲಶ್ವತ್ಥಾಮಪಾಳಯದಿ ಜೀವಬಿಡಲು ನರಭೀಮಸೇನರಾವಾರ್ತೆಯಂ ಕೇಳುತಲೆ ತರುಬಿ ಹಿಡಿದೆಳೆ ತಂದು ದ್ರೌಣಿಯಂ ಶಿಕ್ಷಿಸಲ್ ಸುಪ್ತಪರ್ವದಲಿ 10 ರಣದಿ ಮಡಿದಿರುವ ನೃಪರರಸಿಯರ್ ಅಂಧಭೂ ಪನು ಸತಿಯುಸಹಿತಲೈತರುತಿರಲ್ ಕಳನೊಳಗೆ ತಮ್ಮಪತಿಗಳನಪ್ಪಲು ಪೆಣಗಳೊಟ್ಟೈಸಿ ಸಂಸ್ಕಾರಕ್ರಿಯೆಗಳವಿದು ರನುಗೈದನನ್ನೆಗಂ ಧೃತರಾಷ್ಟ್ರನರಸಿ ಕೃ ಸ್ತ್ರೀಪರ್ವದಲಿ 11 ತನಗೆ ಕರ್ಣಸಹೋದರನೆಂಬ ವಾರ್ತೆಯಮ ಜನು ಕೇಳಿ ಶೋಕದಿವಿರಕ್ತಿಯಿಂದಿರೆ ಸಕಲ ಘನಬಂಧುವಧೆ ಮಹಾದೋಷವೆಂತೆಂದು ಭೀ ಷ್ಮನ ಕೇಳಲರುಹಿದಂ ರಾಜನೀತಿಯ ಧರ್ಮ ವನು ಕಷ್ಟಕಾಳಧರ್ಮವ ಮೋಕ್ಷಧರ್ಮವೆಂಬಿದುಶಾಂತಿಪರ್ವದಲಿ 12 ಅತಿಶಯ ದಾನಧರ್ಮದ ಲಕ್ಷಣಗಳಂ ನಿ ಯತಮಾದ ವರ್ಣಾಶ್ರಮಾಚಾರಕ್ರಮದಸಂ ತತಿಗಳಂ ಶಿವವಿಷ್ಣುಗಳಮಹಿಮೆ ಬ್ರಹ್ಮಸಾಕ್ಷಾತ್ಕಾರಸದ್ಬೋಧೆಯ ಕಥೆಗಳರುಹಿಸಿ ನದೀಸುತಧರ್ಮಜನ ಮನೋ ಪತಿ ಕೃಷ್ಣನಂ ಧ್ಯಾನಿಸುತ ಮುಕ್ತನಾದನಿದು- -ಮಾನುಶಾಸನ ಪರ್ವದಿ 13 ಗುರುಸುತನ ಬ್ರಹ್ಮಾಸ್ತ್ರಮಂಚಕ್ರದಿಂದಸಂ ಹರಿಸಿ ಕೃಷ್ಣಂಕಾಯ್ದನುತ್ತರೆಯಗರ್ಭಮಂ ನೇಮದಿಂದ ಪರಿಪರಿಸುವಸ್ತುಗಳನೆಲ್ಲ ತಂದುಯೈ ವರು ಮಹಾಸಂತಸದಿಹರಿ ಸಹಾಯದಿ ಮಾಡಿ ಸಂಪೂಜಿಸಿದರಶ್ವಮೇಧಕಪರ್ವದಿ 14 ಅಂಧಭೂಪತಿ ಕೌರವಸ್ತ್ರೀಯರುಂ ಕುಂತಿ ಗಾಂಧಾರಿ ಸಹಿತಬರೆ ತೆರಳಿದಂತಪಗೈಯ್ಯೆ ಮುವ್ವರುಪವಾಸದೊಳಿರೆ ಬಂದುದಾಕಾಳ್ಗಿಚ್ಚಿನೋಲ್ ಮಹಾಜ್ವಾಲೆಯೋಳ್ ಪೊಂದಿದರ್ ವಿದುರಧರಾತ್ಮಜನಕೂಡಿದಂ ಬಂದುಯಮಜನುಪುರದಿ ಶ್ರಾದ್ಧಗಳಮಾಡ್ದನಾಶ್ರಮ- -ವಾಸಪರ್ವದೊಳಗೆ 15 ವರುಷಗಳು ಷಟತ್ರೀಂತಿಯು ರಾಜ್ಯವಾಳುತಿರೆ ಬರುಬರುತಲುತ್ಪಾತಗಳುಪುಟ್ಟಿದವು ಯಾದ ಮಡಿದರೆಂಬವಾರ್ತೆಯನು ಕೇಳಿ ನರನು ನಡೆತಂದು ಶೋಕದೊಳುಳಿದವರನುತಾ ಕರದೊಯಿದು ವಜ್ರಾಖ್ಯನಂ ಯಿಂದ್ರಪ್ರಸ್ಥದೋಳ್ ಮುಸಲಪರ್ವದಕಥೆಯಿದು 16 ನರನಮೊಮ್ಮಗೆ ಪಟ್ಟವಂಗಟ್ಟಿಯೈವರುಂ ತೆರಳಿದರ್ಪಾಂಡವರ್ ಸತಿಸಹಿತಬರುತ ಹಿಮ ನಕುಲನುಂ ಸುರಪಸುತನು ವರಭೀಮಸೇನನುಂ ಬಿದ್ದರಾನೃಪತಿಯೋ ರ್ವರನುಕಾಣದೆಯೊಬ್ಬನೇಪೋಗುತಿರೆ ಕಷ್ಟ ಪ್ರಸ್ಥಾನಪರ್ವದೊಳಗೆ 17 ಮ್ಮಂದಿರೆಲ್ಲೆನಲವಂ ಸುರನದಿಯತೋರಲ್ಕೆ ತನ್ನವರೆಲ್ಲರ ನೋಡುತ ಪೊಂದಿದಂ ಯಮನೊಡನೆ ಪವನನೋಳ್ ಭೀಮನರ ನಿಂದನಂ ಯಮಳರಶ್ವಿನಿಯರೊಳ್ಕಲಿಮುಖ್ಯ ಸಂದೋಹದೋಳ್ ಸುಯೋಧನ ಪ್ರಮುಖರೊಂದಿದರ್ ಸ್ವರ್ಗಾರೋಹಣಪರ್ವದಿ 18 ಈಮಹಭಾರತ ಶತಸಹಸ್ರಗ್ರಂಥವನು ಹಾ ಮುನಿ ಪರಾಶರಾತ್ಮಜಪೇಳ್ದನದುವೆ ಗುರು ಸಂಕ್ಷೇಪಭಾರತವನು ಪ್ರೇಮದಿಂದಾಲಿಸುವ ಸಜ್ಜನರಿಗನುದಿನಂ ಕಾಮಿತಾರ್ಥವನಿಹಪರಂಗಳೊಳ್ಸುಖವಗುರು ರಾಮವಿಠ್ಠಲಕೊಡುವಭಾಗ್ಯವಲ್ಲೀನಗರ- -ನಿಲಯನರಹರಿಕರುಣದಿ 19
--------------
ಗುರುರಾಮವಿಠಲ