ರಥವನೇರಿದ ರಥಗಾತ್ರ ಪಾಣಿ |
ರಥಪತಿ ದಶರಥ ಸುತ ದಶರಥ ನೃಪ ಭಾಗೀ |
ರಥಿ ವಿನುತಾ ಸು | ರಥನಯ್ಯ ಮನೋರಥ ದೇವ ಪ
ಕರಿ ಭಯಂಕ
ಹರ ಹರಿಣಾಂಕಾ |
ಕಿರಣಶತ ಧಿಕ್ಕರಿಸುವ ದೇವಾ ||
ವರಮಣಿ ಭಕ್ತ ವರದಾಯುದಧಿ ತುರಗವು |
ಪರತರ ತಮ ತರರಸ |
ಪರಮ ಮಂಗಳ ಪುರುಷ ಪ್ರಧಾನಂ |
ಪ್ರವಿಷ್ಠ ಭಾ |
ಸುರ ಕೀರ್ತಿಹರ ನಿರುತ ಪ್ರದರು ಸುರಪತಿ 1
ಮಣಿಪ್ರಚುರ ಮುತ್ತಿನ ಮುಕುಟ ಸು |
ಫಣಿ ಕಸ್ತೂರಿ ಕಂಕಣ ಕೇಯೂರ ಕಾಂ|
ಕೌಸ್ತುಭ ಸೂರ್ಯನಗೆಲ್ಲ್ಲೆ |
ವನಮಾಲೆ ಹರಿಮಣಿ ಪದಕ ಪಾ |
ವನ ಪೀತಾಂಬರ ಮಿನಗುವ ಕಾಂಚಿ |
ಝಣ ಝಣ ಮಹಾ |
ಧ್ವನಿ ಚರಣ ಭೂಷಣವಾಗಿಯೂ ಮಾ |
ನಿನಿ ಕೂಡಾ 2
ಎತ್ತಿದ ಶ್ವೇತಾತಪತ್ರ ಚಾಮೀಕರ |
ವಿತ್ತ ನಭ ತುಳುಕುತ್ತಲಿರೆ ಧ್ವಜ |
ಮಾತ್ರ ಬಂದಾಗಿ ತೂಗುತ್ತಿರಲು |
ಸುತ್ತಲು ಊದುವ ತುತ್ತುರಿ ಶಂಖ |
ವತ್ತಿ ಬಾರಿಸುವ ಮತ್ತೆ ವಾದ್ಯಗಳು |
ತುತ್ತಿಸುವ ಮುನಿ |
ಉತ್ತಮ ಜನ ಬಾ |
ಗುತ್ತ ವಡನೆ ಬರುತಿರಲು 3
ವಸು ರುದ್ರಾದಿತ್ಯ ವಸುಜನರ ಪಾ |
ಲಿಸುವೆನೆಂದು ದರಶನವು ಸರಸಿಜಗದಾಧರಿಸಿಕೊಂಡು ಅಷ್ಟ
ರಸ ನಾಮಕ ಹರುಷದಿಂದ |
ನಸುನಗುತ ನೀಕ್ಷಿಸಿಕೊಳುಂತ ಆ |
ಲಸ ಮಾಡದೆ ರಂ |
ಜಿಸುವ ಲೀಲಾಮಾನಸ ವಿಗ್ರಹ ಮೆ |
ಚ್ಚಿಸಿದ ಜನರ |
ವಶವಾಗಿಪ್ಪ ರಾಕ್ಷಸ ರಿಪು 4
ವನಧಿ ಚಿನ್ಮಯ ಉ |
ಭಯಾ ಭಯ ಹಾರೆ | ಪಯೋವಾರಿ ನಿಧಿ |
ಶಯನ ಚತುರ್ಬೀದಿಯಲಿ ತಿರುಗಿ |
ಪ್ರೀಯದಿಂದಲಿ ಸ |
ತ್ಕ್ರಿಯವಂತ ಜಯ ಜಯ ಪ್ರದಾ |
ಸಾರಥಿ ನಿ |
ರಯ ವಿದೂರ ವಿಜಯವಿಠ್ಠಲ ಸಾ |
ಹಾಯವಾಗುವ ಗಿರಿಯ ವೆಂಕಟರಾಯ ಬಂದಾ 5