ಗಣೇಶ ಪ್ರಾರ್ಥನೆ
ಕರಿವರದನೆ ನಿನ್ನ ವರಗಳ ಬೇಡುವೆ
ವರ ಮತಿ ಪಾಲಿಸೆನ್ನ ಕಾಪಾಡು ಪ.
ಅಂಬಾಸುತ ನಿನ್ನ ನಂಬಿದವರಿಗಿನ್ನು
ಸಂಭ್ರಮ ದೊರಕದಿಹುದೆ
ಪಾದ ಶ್ವೇತಾಂಬರೆ ಮೊಮ್ಮಗನೆ
ಕಂಬುಕಂಠಸುತನೆ ಸಂಭ್ರಮದಲಿ ಬಾ 1
ಕಾಲ್ಗೆಜ್ಜೆ ಪೈಝಣ ಘಲ್ಲುಘಿಲ್ಲೆನುತಲಿ
ನಿಷ್ಕಾಮದನೆ ಬಾ ನಗುತ
ಪ್ರೇಮದ ಪಾರ್ವತಿ ಸುತ ನೀನಲ್ಲವೆ
ಕಾಮಿಸಿ ನಿನ ಪದ ಭ್ರಮಿಸಿ ಪ್ರಾರ್ಧಿಸುವೆ 2
ಕಾಯಿಸಿ ಹಾಲುತುಪ್ಪ ಸಕ್ಕರೆಯೀವೆನೊ
ಮೂಷಕವಾಹನನೆ
ಸೋಸಿಲಿ ಚಿಗುಳಿ ತಂಬಿಟ್ಟು ತೆಂಗಿನಕಾಯಿ
ಶ್ರೀಶ ಶ್ರೀಶ್ರೀನಿವಾಸ ಭಕ್ತನಿಗರ್ಪಿಸುವೆ 3