ನಾಕೇಶ ವಿನುತೆ | ರ
ತ್ನಾಕರನ ತಾಯೆ ಪ
ಗೋಕುಲದೊಳಿದ್ದು | ಆಕಳ ಕಾಯ್ದಗೆ
ಲೋಕಪಾವನೆ ಸಿರಿಯೆ ಅ.ಪ
ನೀರೊಳಗೆ ಇದ್ದು ನಗಭಾರ ಬೆನ್ನಲಿಪೊತ್ತು
ಬೇರು ಮೆಲ್ಲುವನಿಗೆ |
ಚೀರಿ ಕಂಭದಿ ಬಂದು | ಘೋರ ರೂಪದಿ ಬಲಿ
ದ್ವಾರ ಕಾಯ್ದವಗೆ |
ವೀರ ನೆನಿಸಿ ಪೆತ್ತ | ನಾರಿಯ ಶಿರವ ಸಂ
ಹಾರಮಾಡಿದವಗೆ |
ಭೂರುಹಚರ ಪರಿವಾರ ದೊಳಗಿದ್ದು ದಧಿ
ಚೋರನೆನಿಸಿದವಗೆ 1
ಸಂದೇಹವಿಲ್ಲದೆ ವಸನ ತ್ಯಜಿಸುತ
ಬಂದು ನಿಂದವನಿಗೆ |
ಇಂದಿರಾಧವ ನಿನ್ನ ಹಿಂದೆ ಬಂದವನ
ಅಂದು ಕೊಂಡವನಿಗೆ |
ಕುಂದರದನೆ ನಿನ್ನ ಪೊಂದದೆ ಛಂದದಿ
ಕಂದರ ಪಡೆದವಗೆ 2
ಜಾತಿಯನರಿಯದೆ ಶಬರಿಯ ಎಂಜಲ
ಪ್ರೀತಿಲಿ ಉಂಡವಗೆ
ಶ್ವೇತವಾಹನಜಗೆ ತಾ ಸೂತನೆಂದೆನಿಸುತ
ಖ್ಯಾತಿ ಪಡೆದವಗೆ
ನೀತಿ ಇಲ್ಲದೆಯ ಮಾತೆಯ ಅನುಜನ
ಘಾತಿಸಿದಾತನಿಗೆ ||
ವಾತಾಶನವರ ತಲ್ಪದೊಳು ಮಲಗಿದ
ಶಾಮಸುಂದರ ಧೊರೆಗೆ 3