ಸರ್ವಾಂತರ್ಯಾಮಿ ನಿನಗೆ ಪ
ದೇವತಿರ್ಯಗ್ ಮನುಷ್ಯಾದಿ ಜಂತುಗಳಲ್ಲಿ
ದಿವಿಭುವಿ ಪಾತಾಳದೊಳ ಹೊರಗಿರುವಗೆ ಅ.ಪ
ಪ್ರಾಣ ಪ್ರತಿಷ್ಟೆಗೋಳಕತ್ರಯ ಚಿಂತನೆ
ನೀನೆ ಕರುಣದಿ ಮನ್ಮಾನಸದೊಳು ಪೊಳ-
ದೇನೇನು ಮಾಡಿಸಲದು ನಿನಗರ್ಪಿತ 1
ಅಣುವಿನೊಳಣುವಾಗಿ ಮಹತ್ತಿನೊಳ್ಮಹತ್ತಾಗಿ
ಎಣÉಸಲೆನ್ನಳವೆ ನಿನ್ನಯ ಮಹಾಮಹಿಮೆಯ
ವಿನುತಿಸುವುದು ಕೊನೆಗಾಣದೆ ಶೃತಿ ತತಿ 2
ಶ್ವೇತದ್ವೀಪಾನಂತಾಸನ ವೈಕುಂಠ ಆ-
ಪ್ರೀತಿಯಿಂದಲಿ ನಿನ್ನ ಭಜಿಸುತಿರುವ ಭಕ್ತ-
ವ್ರಾತವ ಸಲಹುವ ಗುರುರಾಮವಿಠಲನೆ 3