ವೃಂದಾವನಕೈತಂದನು ಆ-ನಂದದಿಂ ಕ್ಷೀರಾಬ್ಧಿಯಿಂದ ಶ್ರೀಕೃಷ್ಣನು ಪ
ತೆತ್ತೀಸರೂಪಿ ದೇವತೆಗಳೋಲೈಸಲುಮುತ್ತಿನ ಚಾಮರಗಳನಿಕ್ಕಲುಮುತ್ತೈದೆಯರೆಲ್ಲಾ ಧವಳವ ಪಾಡಲುಅರ್ಥಿಯಿಂದಿಂದಿರೆ ಸಹಿತ ಶ್ರೀಕೃಷ್ಣನು 1
ದ್ವಾರಾವತಿಯಿದ್ದು ಕ್ಷೀರಸಾಗರವಿದ್ದುಸಾರತರ ಶ್ವೇತದ್ವೀಪವಿರ್ದುಶ್ರೀ ವೃಂದಾವನ ಸುಖಮಂದಿರವೆನುತಲಿಕ್ಷೀರಸಾಗರವಾಸಿಯಾದ ಶ್ರೀಕೃಷ್ಣನು 2
ನಂದಗೋಕುಲವಿದ್ದು ಮಂದರಗಿರಿಯಿದ್ದುಚಂದವಾದ ವೈಕುಂಠಲೋಕವಿದ್ದುವೃಂದಾವನಪತಿಸುಖ ಗೃಹವೆನುತಲಿಇಂದಿರಾದೇವಿಯಿಂ ಸಹಿತ ಶ್ರೀಕೃಷ್ಣನು3
ಸುರದುಂದುಭಿ ದಂಧಣರೆಂದು ಮೊಳಗಲುಸುರರು ಹೂವಿನ ಮಳೆಯನು ಕರೆಯತರುಣ ತುಲಸಿಮಾಲೆಯಲುಗಲಿಂದಿರೆ ಸಹಗರುಡನ ಹೆಗಲಿನಿಂದಿಳಿದು ಶ್ರೀಕೃಷ್ಣನು4
ಉರದ ಕೌಸ್ತುಭರತ್ನ ಥಳಥಳಥಳಿಸಲುಕೊರಳ ವೈಜಯಂತಿಯ ಸರವಲುಗೆಸರಸಿಜ ಭವಮುಖ್ಯ ಸುರರೋಲೈಸಲುಪರಮ ಸಂಭ್ರಮದಿಂದ ಶ್ರೀಕೃಷ್ಣರಾಯನು5