ಶ್ರೀ ಧ್ರುವಚರಿತ್ರೆ
ಪದ
ಭಜ ಭಜ ಭಜ ಶ್ರೀ ಗಣರಾಜ
ತ್ಯಜ ತ್ಯಜ ತ್ಯಜ ತಾಮಸ ಬೀಜ ಪ
ಶಂಕರ ಪುತ್ರ ಶುಭಂಕರ ವರನಿಜ
ಪಾದ ಸರೋಜ 1
ಲಂಬೋದರ ಪೀತಾಂಬರಧರ ಕರು
ಣಾಂಬುಧಿ ವರ ದೇವ ಮಹೀಜ 2
ಶ್ರೀಶಾನಂತಾಜದ್ರೀಶ ವರಾನ್ವಿತ
ದಾಸ ಸುವೃತ ಮಾನಸ ಪೂಜ 3
ಆರ್ಯಾ
ರಾಜ ಸುಪೂಜಿತ ರಾಜ ರಾಜ ನೃಪ
ರಾಜ್ಯ ಮಾಡುತಾ ಇರುತಿಹನು
ದುರ್ಜನ ಪುರುಷರ ತರ್ಜನ ಮಾಡುವ
ಸಜ್ಜನ ಆತ್ಮಾರಿಂಗ್ಯತಿ ಪ್ರಿಯನು 1
ದೀನ ಬಂಧು ಬಹುದಾನವಂತ ಉ
ಪಾದ ಎಂಬುವ ಹೆಸರು
ಮಾನಿತರೊಳಗತಿ ಮಾನಯುಕ್ತರು
ಮಾನಿನಿಯರು ಇಬ್ಬರು ಇಹರು2
ಸುರಚಿ ಗಣ್ಯಳು ಪಟ್ಟದರಸಿ ಸುನೀತಿಯು
ವಿರಸದಿ ಆರಸಗ ನಿಷ್ಟ್ರಿಯಳು 3
ಮುತ್ತಿನಂಥ ವರಪುತ್ರರಿಬ್ಬರು
ಉತ್ತಮನೆಂಬ ಸುರುಚಿಪುತ್ರಾ
ಉತ್ತಮ ಗಣ್ಯ ಗುಣೋತ್ತಮ ಧ್ರುವನು
ಮತ್ತ ಸುನೀತಿಗೆ ತಾ ಪುತ್ರಾ 4
ಮಂದಿರದೊಳಗೆ ವಸುಂಧರೇಶನು
ಛಂದದಿ ತಾ ಸುಖದಿಂದಿರಲು
ಒಂದಿನದಲಿ ಬಹುಸುಂದರಸಭಿಯಲ್ಯಾ
ನಂದದಿ ಬಂದು ತಾ ಕುಳಿತಿರಲು 5
ಶ್ಲೋಕ
ಕೂಡಿಸಿತಾ ತೊಡಿಯಲ್ಲಿ|
ಮುದ್ದಿಸಿದಾ ಸಭಿಯಲ್ಲಿ | 1
ಛಂದ
ನೋಡಿ ಧ್ರುವನು ತಾ ಹರುಷದಿಂದಲಿ
ಓಡಿ ಬಂದನು ರಾಜ ಸಭಿಯಲಿ
ಕೂಡಬೇಕು ತಾ ಎಂದು ತೊಡಿಯಲಿ
ಇಂದು ಮನದಲಿ 1
ನಾಥ ಭೂಮಿಪಾ ನೋಡಿ ಬಾಲನ
ಪ್ರೀತಿಯಿಂದಲ್ಯೊಂದು ಮಾತನಾಡನು
ತಾತ ಸುತಗೆ ಬಾಯೆಂದು ಕರೆಯನು
ಆತ ಧ್ರುವನು ತಾ ಅನಾಥನಾದನು 2
ಆಗ ಸುರುಚಿ ಬಾಲನ್ನ ನೋಡುತಾ
ಬ್ಯಾಗನುದರದಲ್ಲಿ ಬಹಳ ಗರ್ವಿತಾ
ಯೋಗ್ಯವಲ್ಲ ಕೂಡಲಿಕ್ಕೆ ತೊಡಿಯಲಿ
ಹೀಂಗ ದುಷ್ಟ ಮಾತುಗಳು ಬಾಯಲ್ಲಿ 3
ಪದ
ಬಾರದೊ ಧ್ರುವಾ ನಿನಗೆ ಸಿಂಹಾಸನ ಪದವಿ
ಬಾರದೊ ಧ್ರುವಾ ನಿನಗೆ ಸಾರಸಿಂಹಾಸನವು ಪ
ಏರ ಬೇಕೆಂಬುವಂಥಾ ಘೋರತನವ ಬಿಡು ಅ.ಪ
ಅನ್ಯಳ ಮಗನೊ ನೀ ಯನ್ನಲಿ ಜನಿಸಿಲ್ಲಾ
ಚೆನ್ನಿಗ ಉತ್ತುಮಾಗಿನ್ನ ನೀ ಸರಿಯೇನೋ 1
ಇಂದಿನಾ ಮನೋರಥಾ ಎಂದಿಗಾವುದಲ್ಲಾ
ಕಂದ ಸುನೀತಿಯಾ ಮುಂದ ಕೂಡಾಲಿ ಪೋಗೊ 2
ಇಚ್ಛಿ ಮಾಡಾದಿರೋ ಹೆ ಚಿನ್ನಾ ಶ್ರೀ
ವತ್ಸನಾರಾಧನಿ ಮಾಡಿಲ್ಲಾ 3
ವೀರ ಸಿಂಹಾಸನ ಏರಬೇಕಾದರೆ
ವಾರಿಜನಾಭ ನಾರಾಧನಿ ಮಾಡೊನೀ 4
` ಚೆನ್ನಿಗಾನಂತಾದ್ರೀಶ್ನ ' ನೀ ಪೂಜಿಸಿ
ಯೆನ್ನಲ್ಲಿ ಪುಟ್ಟಾದೆ ಉನ್ನತ ಪದವಿಯು 5
ಶ್ಲೋಕ
ಅತ್ಯಂತ ಘೋರತರ ವಾಕ್ಯಗಳನ್ನು ತಾಳಿ
ಸಂತಪ್ತನಾದ ಮನದಲ್ಲಿ ಸುನೀತಿ ಬಾಲಾ
ಪುತ್ರನ್ನ ನೋಡಿ ಪಿತ ಸುಮ್ಮನೆ ಕೂತನಾಗಾ
ತಾತನ್ನು ಬಿಟ್ಟು ನಡದಾ ಧ್ರುವ ತಾನು ಬ್ಯಾಗಾ 1
ಶ್ವಾಸೋಚ್ಛ್ವಾಸವು ಬಾಯಿಲಿಂದ ಬಿಡುತಾ
ಕಣ್ಣಿಂದ ನೀರ ಹೋಗುತಾ ಸೂಸು ಬಾಹುವ
ದು:ಖದಿಂದ ಮರಗಿತಾ ರೋದನಾ ಮಾಡುತಾ
ಬಂದಾ ತೀವ್ರದಿ ತಾಯಿ ಸನ್ನಿಧಿಯಲ್ಲಿ ಆಳುತಾಗ
ತುಟಿ ಬಿರಿಗಿಸಿ ಬಂದಾ ಕಂದನ ಮುಂದ ಕುಳ್ಳಿರಿಸಿ
ಸತಿ ಕೇಳ್ಯಾಳು ವಿಚಾರಿಸಿ 2
ಪದ
ಕಂದ ನೀ ಬ್ಯಾಗ ಹೇಳೊ ಎಲ್ಲೊ ನಿನಗೆ
ಇಂದು ಬಡಿದವರ್ಯಾರು ನಿನಗೆ ಪ
ಎಂದು ಪೋಗದಲೆ ತನಯ ನೀನು
ಇಂದು ಪೋಗಿದ್ದಿಯೊ ದಾರ ಮನಿಗೆ 1
ಘೋರತರ ದು:ಖವೇನೊ ಈ ಪರಿ
ನೀರ ತುಳಕುವ ಕಣ್ಣುಗಳಿಗೆ 2
ಏನಂತ ಪೇಳಲಿ ಸ್ವಲ್ಪ ಇಲ್ಲಾ
`ಅನಂತಾದ್ರೀಶನ ' ದಯವು ನಮಗೆ 3
ಪದ
ತನಯನ ಕೇಳಲು ಹೀಂಗೆ
ಪೌರಜನರು ನುಡದರಲ್ಯಾಗೆ
ಅರುಚಿನುಡಿಗಳ ಲ್ಹ್ಯಾಂಗೆ ಆ
ಸುರುಚಿ ನುಡಿದಳ್ಹಾಂಗೆ 1
ಕೇಳಿದಳೀ ಪರಿವಾಣಿ ಮನ
ಪನ್ನಗ ವೇಣಿ
ಸಾಗರ ಬಿದ್ದಳು ತರುಣಿ ತಾ
ಕೂಗುತ ಕೋಕಿಲವಾಣಿ 2
ಒಡಲೊಳು ಕಿಚ್ಚುರದಂತೆ ಬಹು
ಮಿಡುಕೊಳು ತಾಮನದಂತೆ
ನಡುಗುತ ಹಿಮ ಹೊಡದಂತೆ ತಾ
ನುಡು(ಡಿ)ವಳು ಕರುಣಾದಂತೆ 3
ಏನು ಮಾಡಲಿ ಇನ್ನಯ್ಯೋ
ಬಹು ದೀನಳಾದೆ ನಯ್ಯಯ್ಯೊ
ಮಾನದ ಪತಿಯೆನ ಕಾಯೊ ಗುರು
ಮಾನಸ ದು:ಖವ ತಿಳಿಯೋ4
ಶರಣು ಕೇಳು ದೇವೇಶಾಯನ್ನೊಳು
ಕರುಣಾಬಾರದೆ ಲೇಶಾ
ಚರಣಕೆರಗುವೆನು ಶ್ರೀಶಾ
ಮರಣ ಕುಡಾ`ನಂತದ್ರೀಶ' 5
ಛಂದ
ನಾರಿ ಸುರುಚಿಯಾ ಮಾತು ಮರಿಯದೆ
ಘೊರ ದು:ಖದಾಪಾರ ತಿಳಿಯದೆ
ನೀರ ಧಾರಿಯ ಕಣ್ಣಲ್ಯುದುರುತಾ
ಧೈರ್ಯ ಭಾವ ತಾ ಬಿಟ್ಟಳು ಸರುತಾ 1
ಸುಂದರಾಂಗಿಯು ನೊಂದು ಮನದೊಳು
ಕಂದಧ್ರುವನ ತಾ ಮುಂದ ನುಡದಳು
ಬಂದ ತಾಪವ ಸಹಿಸಬೇಕಯ್ಯಾ
ಇಂದು ಮನಸಿನಾ ಕೋಪ ತಾಳಯ್ಯಾ 2
ಕೇಳು ಬಾಲನೆ ರಾಜಯನ್ನನು
ಭಾಳ ತುಚ್ಛವ ಮಾಡುತಿಹನು
ಭಾಳ ಲಜ್ಜದಿ ಸುನೀತಿ ಭಾರ್ಯಳೆಂದು
ಹೇಳಲಿಕ್ಕೆ ನಾಚುತಿಹನು 3
ಯನಗ ಪುತ್ರ ನೀನಾದ ಕಾರಣಾ
ನಿನಗ ಮಾಡುವಾ ಅರಸು ನಿರ್ಘೃಣಾ
ಕನಸಿಲಿಲ್ಲವೊ ಯನಗ ಹಿತಕರು ತನಯ
ವೈಯಲಿಲ್ಲವೊ ಯನ್ನದೇವರು 4
ಮಿಥ್ಯವಲ್ಲವೊ ಸುರುಚಿ ನುಡಿಗಳು ಸತ್ಯ
ವಾದ ಮಾತುಗಳು ನುಡಿದಳು
ಪಥ್ಯವೆ ಸರಿ ಪರಮ ನಿನಗಿವೆ
ಪೊತ್ತುಗಳಿಯದೆ ಪೋಗರಣ್ಯಕೆ 5
ಗುರ್ವನುಗ್ರಹ ಶಿರಸಿ ಗ್ರಹಿಸೈಯ್ಯಾ
ಶರ್ವಸಖಗ ನೀ ಪೂಜಿಮಾಡಯ್ಯಾ
ಪೂರ್ವದಲ್ಲಿ ನಿನ್ನ ಮುತ್ಯ ಮಾಡಿದಾ
ಸಾರ್ವಭೌಮ ಆಧಿಪತ್ಯ ಏರಿದಾ 6
ಇಂದಿರೇಶನಾ ಬ್ರಹ್ಮ ಪೂಜಿಸಿ
ಮುಂದ ಏರಿದಾ ಸತ್ಯಲೋಕ ನೇಮಿಸಿ
ಕಂದ ಭಜಿಸು ನೀ ಛಂದದಿ ಧ್ರುವಾ
ಮುಂದ ಕೇಶವಾನಂದ ಸುರಿಸುವಾ 7
ಶ್ಲೋಕ
ಜನನಿಯಾಡಿದ ವಾಕ್ಯವು ಕೇಳಿ ಆಗಾ
ಮನಿ ಆಸಿಯು ಬಿಟ್ಟು ನಡದಾನು ಬ್ಯಾಗಾ
ಘನಾರಣ್ಯಕೆ ಪೋಗಲು ಶೋಕಸಿಂಧು
ಸಿಂಧು 1
ಆರ್ಯಾ
ಇಂದಿರೇಶನಾ ಸುಂದರ ಗುಣಗಳ
ಬಂದಾಕ್ಷಣಹೀಗೇಂದು ನುಡದನು
ಕಂದಗ ಮುನಿ ಆ ಸಮಯದಲಿ 1
ನಿಲ್ಲೆಲೊ ಬಾಲಕ ಬಲ್ಲಿದರಣ್ಯದಿ
ನಿಲ್ಲದೆ ಪೋಗುತಿ ಎಲ್ಲಿಗೆ ನೀ
ಯೆಲ್ಲಿಂದ ಬಂದಿ ನೀ ಫುಲ್ಲಲೋಚನ
ಯೆಲ್ಲ ಬಳಗ ಬಿಟ್ಟಿಲ್ಲಿಗೆ ನೀ 2
ಕಂದ ಬಿಟ್ಟ ನೀ ಬಂದ ಕಾರಣಾ
ಇಂದು ತಾಯಿ ತಂದೆಗಳೆಲ್ಲ
ಸುಂದರಾನನಾ ಛಂದದಿ ನುಡಿನೀ
ಮಂದಿರ ವೃತ್ತಾಂತಗಳೆಲ್ಲಾ 3
ಶ್ರೇಷ್ಠನಾರದ ನೀ ಅಷ್ಟುಲೋಕವಾ
ದೃಷ್ಟಿಲಿ ನೋಡುವಿ ಇಷ್ಟರಿಯಾ
ಕೆಟ್ಟ ಮಾತು ಆದುಷ್ಟ ಮಳಾಯಿಯು
ಎಷ್ಟು ನುಡದಳೊ ಯನಗÀಯ್ಯಾ4
ಏನು ಪೇಳಲಿ ನಾನು ಮುನೀಶ್ವರ
ಮಾನ ಗೇಡಿ ಮಾಡಿದಳೆನ್ನಾ
ಮಾನ ಹೋಗಿ ಅಪಮಾನಿತನಾಗಿ
ಕಾನನ ಶೇರಿದೆ ನಾ ಮುನ್ನ 5
ಮಾನಪಮಾನಗಳೆನಾದರೂ ಸರಿ
ಧ್ಯಾನಕ ತರಬಾರದು ನೀನು
ನಾನಾ ಲೀಲಿಯಾ ಮಾಡುವ
ಬಾಲಕಗೇನು ಚಿಂತೆ ಕೇಳರೆ(ಳುವೆ?) ನಾನು 6
ಶಾಂತನಾಗು ಗುಣವಂತ ಬಾಲ ನಿ
ನ್ನಂತರಂಗ ಚಿಂತಿಯು ಬಲ್ಲೆ
ಚಿಂತಿಸಿ ಬಂದ್ಯೋ ನೀ ಸತತ ಸುಖ
ಭಗವಂತನನೆ ಬ(ರ?) ಬೇಕಂತಿಲ್ಲೆ 7
ಎಂಥವರಿಗೆ ಭಗವಂತ ದೊರಕ ನಿ
ನ್ನಂಥ ಬಾಲನಾ ಗತಿಯೇನು
ಕಾಂತನಯನ ಶ್ರೀಕಾಂತ ದೊರಕ ಛೀ
ಭ್ರಾಂತಿ ಬಿಟ್ಟು ತ್ವರ ನಡಿ ನೀನು 8
ಪದ
ನಡಿನಡಿ ನಡಿ ಧ್ರುವಾನೆ ತಿರುಗಿ ಮನಿಗೆ
ನಡಿ ನಡಿ ನಡಿ ದೊಡ್ಡ ಅಡವಿಯು ಸೇರಾದೆ
ಹುಡುಗ ಬುದ್ಧಿಯನು ಬಿಡು ತಡಮಾಡದೆ ಪ
ಅಂಬಕಗಳಿಗೆ ತಾನು ತೋರಾನು ಪೀ
ತಾಂಬರಧರ ದೇವಾನು
ಅಂಬುಜನಾಭನ ನಂಬಿ
ಭಜಿಸುವಂಥ ಹಂಬಲ ಬಿಟ್ಟು
ವಿಳಂಬನ ಮಾಡದೆ 1
ಕಾಲಾವಲ್ಲವೋ ಬ್ಯಾಡಯ್ಯ
ವಿಗ(ಹಿ?)ತವಾದ ಕಾಲಕೆ ತಪ ಮಾಡಯ್ಯ
ಕಾಲಕಾಲಕೆ ಸ್ತನ ಪಾಲನುಂಬುವ ಸಣ್ಣ
ಬಾಲ ಈ ವಚನ ಬಿಟ್ಟು ಕಾಲಗಳಿಯದೆ 2
ದೇಶದೇಶವ ತಿರುಗಿ ಬಹಳ
ಕಾಸೋಸಿ ಇಂದಲೆ ಮರುಗಿ
ಕ್ಲೇಶಾದಿ `ಅನಂತಾದ್ರೀಶ' ದೊರಕ
ಘಾಸಿ ನೀ ಆಗದೆ 3
ಆರ್ಯಾ
ಮುನಿಯ ವಚನ ನೃಪತನಯ ಕೇಳಿ
ಬಹುವಿನಯದಿಂದಲಿ ಹೀಗೆಂದಾ
ಘನದು:ಖದಿ ಯನ್ನ ಮನಿಗೆ ಪೋಗಲಿಕ್ಕೆ
ಮನಸುವಲ್ಲದು ವಲ್ಲೆಂದಾ 1
ಪದ
ಮನಿಗೊಲ್ಲೆ ವಲ್ಲೆ ಮುನಿರಾಯಾಪ
ಬಹುತಲ್ಲಣಗೊಳು ತಿಹ(ಹೆ?)ನೈಯ್ಯಾ ಅ.ಪ
ಶೋಣೀತ ವಸ್ತ್ರನೆ ಪಾಣಿವಿನಾದಿತ
ವೀಣಾಧರ ಕೇಳಯ್ಯ 1
ದುಷ್ಟಮಳಾಯಿಯ ಕೆಟ್ಟಮಾತು
ಒಂದಿಷ್ಟು ಸಹಿಸಲಾರೈಯ್ಯ 2
ದೀನದಯಾಳುವೆ ಮಾನಗಳಿದು ಮು
ನ್ನೇನು ಉಳಸಲಿಲ್ಲೈಯ್ಯ 3