ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಪೆ ಮುದದಿಂದಲಿ ನಾನು ವಂದಿಪೆ ಮುದ್ದು ಗಣಪಗೆ ವಂದಿಪೆ ಪ ನಂನಂದನನಾಮ ಮನದೊಳು ಆ- ನಂದದಿ ಭಜಿಸುವ ಚಂದ್ರಶೇಖರಸುತಗೆ ಅ.ಪ. ಆಕಾಶಕಭಿಮಾನಿ ಶ್ರೀಕಂಠವರಪುತ್ರ ರಾಕೇಂದುವದನ ಶ್ರೀಕಾಂತ ನಿಜಭಕ್ತ ಏಕಾಂತದಲಿ ಹರಿ ಆಕಾರತೋರಿಸಿ ನೂಕುತಭವಪಾಶ ಸಾಕು ಸಾಕು ಎಂದು 1 ವರವರದಾಯಕ ಸುರಗಣಪೂಜಿತ ವರಕರಿಮುಖವೇಷ ವರಸರ್ಪಕಟಿಸೂತ್ರ ಸಿರಿಕಾಂತಸೇವೆಗೆ ಬರುವ ವಿಘ್ನಂಗಳೆಲ್ಲ ಭರದಿಂದ ತರಿಯುತ ಕರುಣದಿ ಸಲಹೆಂದು 2 ವೇದವ್ಯಾಸರಶಿಷ್ಯ ಮೋದಕಗಳ ಪ್ರಿಯ ಮದನನಸೋದರ ಮುದವಿದ್ಯೆದಾಯಕ ಮಧ್ವಾಗಮದಲಿ ಅದ್ದುತ ಎಮ್ಮನು ಶುದ್ಧರನು ಮಾಡೋ ಸಿದ್ಧಿ ವಿನಾಯಕನೆಂದು 3 ಏಕದಂತನೆ ವರ ಆಖುವಾಹನ ಭಕ್ತರ ಶೋಕ ಹರಿಸೊ ಬೇಗ ಲೋಕ ವಂದಿತನೆ ರಕ್ತಾಂಬರ ತನು ರಕ್ತಗಂಧಪ್ರಿಯ ವಿ - ರಕ್ತಿನೀಡುತ ಹರಿಭಕ್ತನೆಂದೆನಿಸು ಎಂದು 4 ಪಾಶಾಂಕುಶ ಶಶಿದರ್ಪಭಂಜನ ಶ್ರೀಶನಾಭಿವಾಸ ವಿಶಾಲಕರ್ಣಯುತ ನಾಶಗೈಸುತವಿಷಯ ವಾಸನೆಗಳೆಲ್ಲ ವಿಶ್ವೋಪಾಸಕ ಪ್ರಭು ಶ್ವಾಸಾವೇಶಯುತನೆಂದು 5 ಚಾರುದೇಷ್ಣನೆ ನಿನ್ನ ಚರಣಕ್ಕೆ ಶರಣೆಂಬೆ ಸರಿನೀನು ಧನಪಗೆ ಗುರುಶೇಷಶತರಿಗೆ ತರಿದು ತಾಪತ್ರಯ ವರಜ್ಞಾನ ವೈರಾಗ್ಯ ಹರಿಭಕ್ತಿ ಹರಿ ಧ್ಯಾನ ನಿರುತ ಕೊಡು ಎಂದು 6 ಜಯತೀರ್ಥ ಹೃದಯದಿ ವಾಯುವಿನೊಳಿಪ್ಪ ಸಿರಿ ತಾಂಡವ ಕೃಷ್ಣವಿಠಲ ರಾಯನ ಧ್ಯಾನ ಕಾಯಾ ವಾಚಾ ಮನಸಾ ದಯಮಾಡಿ ಸಲಹೈಯ್ಯ ಜೀಯಾ ಗಣಪನೆಂದು7
--------------
ಕೃಷ್ಣವಿಠಲದಾಸರು