ಇದು ಈಗ ಸಮಯ ಸೀತಾರಾಮ ಪ
ಇದು ಈಗ ಸಮಯವು ಪದುಮದಳಾಕ್ಷನೆ
ಸದಯದಿ ನಿಂದೆನ್ನ ಒದಗಿ ಕಾಯ್ವ ಶ್ರೀರಾಮ ಅ.ಪ.
ಖಾಸವು ತುಂಬೆ ಕಂಠದಿ ಶ್ವಾಸವು ನಿಲ್ಲೆ
ಘಾಸಿಯಾಗಲು ಘುರುಘುರುಕೆಂದು ಬÉೂೀರಿಡೆ
ಸಾಸಿರ ಚೇಳು ಕಡಿದಂತಾಗುವಾಗ 1
ಕಾಲವು ಸಲ್ಲೆ ಪಂಚೇಂದ್ರಿಯಂಗಳು ಸಡಿಲೆ ಈ ದೇಹದಿ
ಲಾಲಾ ಮೂತ್ರವು ಮಲ ಜೋಲಿ ಬೀಳುತಲಿರೆ
ಕಾಲನ ದೂತರು ಬಂದು ಬಿಡದೆಳೆಯುತಿರುವಾಗ 2
ನಂದನಾದಿಗಳು ನಿಂದು ಗೋಳಿಡುತಿರೆ ಬಂಧು ಬಳಗಗಳು
ಒಂದನು ನೋಡಿದೆ ಕುಂದುತ್ತ ಚಿತ್ತದಿ ನಿಂದಿರಲು
ತಂದೆ ಧೇನುಪುರಿನಾಥ ಬಂದೆನ್ನ ಕಾಯೊ ಹೋಗುವಾಗ 3