ಪ್ರಾಣನಾಥನೆ ನಿನ್ನ ತುತಿಯ ಮಾಡಲು ಇನ್ನು
ತ್ರಾಣ ಎನಗುಂಟೆ ಗುರುವೆ ಪ
ದಾನಿ ಸಿರಪತಿಯ ಭಕುತರ ಶಿಖಾಮಣಿಯೆ ಗುಣಶ್ರೇಣಿ
ಎಣೆಗಾಣೆ ಶ್ರುತಿಧಿ ಸ್ಮøತಿಧಿ ಅ.ಪ
ನಿಖಿಳ ಜೀವರಿಗೆ ಮಾನಿ ಪುರುಷ ನೀ
ಸಕಲ ಮಹದಾಭಿಮಾನೀ
ಸುಖರೂಪ ಪುರುಷನಿಗೆ ವಾಯು ಅಗ್ನಿ ಆದಿತ್ಯ
ತ್ವಕುರೂಪ ಪುತ್ರನಾದೀ ಮೋದಿ 1
ಕಮಠರೂಪದಿ ಲೋಕಕಾಧಾರ
ಸಮನೋ ಆಖಣಾಶ್ಮನೆ
ಸುಮನಸರನ್ನ ಪೊರೆವೆ ಬೆರೆವೆ 2
ವಾಸುದೇವವಿಠಲನ್ನ ಸಂತತವು
ಶ್ವಾಸಮಂತ್ರದಿ ಸೇವನ
ಲೇಸಾಗಿ ಮಾಡುವ ಜೀವರೊಳು ನೀನೇವೆ
ದಾಸನ್ನ ಪೊರೆಯೊ ಧೀರ ವೀರ 3