279ಹನುಮ ಭೀಮಾನಂದ ಮುನಿರಾಯ ಎನ್ನದು
ಸಲಹೆಂದು ಬಿನ್ನೈಪೆವಿ
ಜ್ಞಾನ ರೂಪ ವಿಜಿತಾತ್ಮ 1
280ತ್ರಿದಶವಿಂಶತಿ ರೂಪ ಸುದತಿಯಿಂದೊಡಗೊಡಿ ಪದುಮಜಾಂಡದೊಳು ಸರ್ವತ್ರ | ಸರ್ವತ್ರ ಭಕುತರಾ
ಬದಿಗನಾಗಿದ್ದು ಸಲಹುವಿ 2
281ಕೋಟಿತ್ರಯ ಸ್ವರೂಪಿ ದಾಟಿಸು ಭವಾಬ್ಧಿಯ ನಿ
ಭಯಹಾರಿ ರಣದೊಳು ಕಿ
ರೀಟಿಯ ಕಾಯ್ದಿ ಧ್ವಜನಾಗಿ 3
282ಪ್ರಾಣನಾಯಕ ನಿನ್ನ ಕಾಣ ಬೇಕೆಂದೆನುತ
ಸಾನುರಾಗದಲಿ ನಮಿಸುವೆ | ನಮಿಸುವೆನು ಮೂಜಗ
ಪರಮೇಷ್ಟಿ 4
283ಚತುರವಿಂಶತಿ ತತ್ವ ಪತಿಗಳೊಳಗೆ ಗರುವ
ನತಿಸುವೆನು ನಿನ್ನ ಚರಣಕ್ಕೆ | ಚರಣಕಮಲವ ತೋರಿ
ಕೃತ ಕೃತ್ಯನೆನಿಸೊ ಕೃಪೆಯಿಂದ 5
284ಮೂರೇಳು ಸಾವಿರದ ಆರ್ನೂರು ಮಂತ್ರವ
ಈರೇಳು ಜಗದಿ ಜನರೊಳು | ಜನರೊಳು ಮಾಡಿ ಉ
ದ್ಧಾರ ಗೈಸುವಿಯೊ ಸುಜನರ 6
285ಪವಮಾನರಾಯ ನೀ ತ್ರಿವಿಧ ಜೀವರೊಳಿದ್ದು
ವಿವಿಧ ವ್ಯಾಪಾರ ನೀ ಮಾಡಿ | ನೀ ಮಾಡಿ ಮಾಡಿಸಿ
ಅವರವರ ಗತಿಯ ಕೊಡುತಿಪ್ಪ 7
286 ಮಿಶ್ರ ಜೀವ ರೊಳಿದ್ದು ಮಿಶ್ರಜ್ಞಾನವನಿತ್ತು
ಮಿಶ್ರ ಸಾಧನವ ನೀ ಮಾಡಿ | ನೀ ಮಾಡಿ ಮಾಡಿಸಿ
ಮಿಶ್ರಗತಿಗಳನೆ ಕೊಡುತಿಪ್ಪೆ 8
287ಅನಿಲದೇವನೆ ದೈತ್ಯದನುಜ ರಾಕ್ಷ ಸರೊಳಿದ್ದು
ಅನುಚಿತ ಕುಕರ್ಮ ನೀ ಮಾಡಿ | ನೀ ಮಾಡಿ ಮೋಹಿಸಿ
ದಣಿಸುವಿಯೊ ಅವರ ದಿವಿಜೇಶ 9
288ಕಾಲನಿಯಮಕನೆ ಕಾಲತ್ರಯಾದಿಗಳಲ್ಲಿ
ಕಾಲ ಕರ್ಮ ಅನುಸಾರ | ಅನುಸಾರವಿತ್ತು
ಪಾಲಿಸುವಿ ಜಗವ ಪವಮಾನ10
289ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ
ಶ್ರೀಕಂಠ ಮುಖ್ಯ ಸುರರಿಗೆ | ಸುರರಿಗಿಲ್ಲವು ಭಾರ
ತೀಕಾಂತ ನಿನಗೆ ಬಹದೆಂತೊ 11
290 ಕಲ್ಯಾದಿ ದೈತ್ಯಕುಲದಲ್ಲಣ ದಯಾಸಾಂದ್ರ
ಬಲ್ಲಿದನು ಜಗಕೆ ಭಯದೂರ | ಭಯದೂರ ಭಕ್ತರ
ನೆಲ್ಲ ಕಾಲದಲ್ಲಿ ಸಲಹಯ್ಯ 12
291ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ
ದ್ಧಾರ ಮಾಡದಿರೆ ಭಕುತರ | ಭಕುತರನು ಕಾವ
ರಿನ್ನಾರು ಲೋಕದಲಿ ಜಯವಂತ 13
292ತ್ರಿಜಗದ್ಗುರುವರೇಣ್ಯ ಋಜುಗಣಾಧಿಪ ಪಾದಾಂ
ಬುಜ ಯುಗ್ಮಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಮನ್ಮನದಿ
ನಿಜರೂಪ ತೋರಿ ಸಂತೈಸೊ 14
293ಅನಿಲದೇವನೆ ನಿನ್ನ ಜನುಮ ಜನುಮಗಳಲ್ಲಿ
ಎಂದೆಂದು ವಿಷಯ ಚಿಂ
ತನೆಯ ಕೊಡದೆನ್ನ ಸಲಹೆಂದು 15
294ತಾರತಮ್ಯ ಜ್ಞಾನ ವೈರಾಗ್ಯಭಕ್ತಿ
ಧಾರಡ್ಯವಾಗಿ ಇರಲೆಂದು | ಇರಲೆಂದು ಬಿನ್ನೈಪೆ
ಭಾರತೀರಮಣ ನಿನಗಾನು 16
295 ಮರಣ ಜನನಗಳು ಬಂದರೆ ಬರಲಿ ಪ್ರದ್ವೇಷ
ಗುರು ಹಿರಿಯರಲ್ಲಿ ಹರಿಯಲ್ಲಿ | ಹರಿಯಲ್ಲಿ ಕೊಡದೆ ಉ
ದ್ಧರಿಸಬೇಕೆನ್ನ ಪರಮಾಪ್ತ 17
296ವಿಷಯದಾಸೆಗಳ ಬಿಡಿಸಿ ಅಸುನಾಥ ಎನ್ನ ಪಾ
ಲಿಸಬೇಕು ಮನವ ನಿನ್ನಲ್ಲಿ | ನಿನ್ನಲ್ಲಿ ನಿಲಿಸಿ ಸಂ
ತಸದಿ ಕಾಯೆನ್ನ ಮರುದೀಶ 18
297 ವಾಯು ಹನುಮದ್ಭೀಮರಾಯ ಮಧ್ವರ ಸ್ತೋತ್ರ
ಬಾಯೊಳುಳ್ಳವಗೆ ಜನ್ಮಾದಿ | ಜನ್ಮಾದಿ ರೋಗಭಯ
ವೀಯನೆಂದೆಂದು ಭಗವಂತ 19
298ಮಾತರಿಶ್ವನೆ ಎನ್ನ ಮಾತುಗಳ ಲಾಲಿಸಿ ಜಗ
ನ್ನಾಥ ವಿಠಲನ್ನ ಮನದಲ್ಲಿ | ಮನದಲ್ಲಿ ತೋರಿ ಭವ
ಭೀತಿಯನು ಬಿಡಿಸೊ ಭವ್ಯಾತ್ಮ 20
299 ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಆ
ಜನ್ಮ ಕೃತ ಪಾಪ ಪರಿಹಾರ | ಪರಿಹಾರವಾಗಿ ಸ
ದ್ಬೊಮ್ಮಪದವಿಯಲಿ ಸುಖಿಸುವಿ 21
300ಮೂರೇಳು ಸಾವಿರದ ಆರುನೂರು ಹಂಸ
ಮೂರು ಮಂತ್ರಗಳ ಜನರೊಳು | ಜನರೊಳು ಮಾಡ್ವ ಸ
ಮೀರನ ಅಡಿಗೆ ಶರಣೆಂಬೆ 22
301ಅಂಜಿದವರಿಗೆ ವಜ್ರಪಂಜರನೆನಿಪ ಪ್ರ
ಭಂಜನ ಪ್ರಭುವೆ ಪ್ರತಿದಿನ | ಪ್ರತಿದಿನ ನಮ್ಮ ಭಯ
ಭಂಜಿಸಿ ಕಾಯೊ ಬಹುರೂಪ 23
302ಭವಿಷ್ಯದ್ವಿಧಾತನೆ ತವ ಚರಣ ಸೇವಿಪೆನು
ಶ್ರವಣ ಮನನಾದಿ ಭಕುತಿಯ | ಭಕುತಿ ನಿನ್ನಲ್ಲಿ ಮಾ
ಧವನಲ್ಲಿ ಕೊಟ್ಟು ಸಲಹಯ್ಯ24
303ಕಲಿಮುಖ್ಯ ದೈತ್ಯರುಪಟಳವ ಪರಿಹರಿಸಿ ಮ
ಸಿಂಧು ನಿ
ನ್ನೊಲುಮೆಯೊಂದಿ ಹರಿಕಾಯ್ವ 25
304 ಭಾರತೀ ರಮಣ ಮದ್ಭಾರ ನಿನ್ನದು ಎನ್ನ
ಪಾರ ದೋಷಗಳ ಎಣಿಸದೆ | ಎಣಿಸದೆ ಸಂತೈಸೊ
ಸಿಂಧು ಎಂದೆಂದು 26
305ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕ
ವಿಂಶತಿ ಸಹಸ್ರದಾರ್ನೂರು | ಆರ್ನೂರು ಹಗಲಿರುಳು
ಶ್ವಾಸ ಜಪಮಾಡಿ ಹರಿಗೀವಿ 27
306ತಾಸಿಗೊಂಭೈ ನೂರು ಶ್ವಾಸಜಪಗಳ ಮಾಡಿ
ಬೇಸರದೆ ನಮ್ಮ ಸಲಹುವಿ | ಸಲಹುವಿ ಶ್ರೀ ಭಾರ
ತೀಶ ನಿನ್ನಡಿಗೆ ಶರಣೆಂಬೆ 28
307ಬಲದೇವ ನೀನೆ ಬೆಂಬಲವಾಗಿ ಇರಲು ದು
ರ್ಬಲ ಕಾಲಕರ್ಮ ಕೆಡಿಸೋದೆ | ಕೆಡಿಸೋದೆ ನಿನ್ನ ಹಂ
ಬಲು ಉಳ್ಳ ಜನರ ಜಗದೊಳು 29
308ಹಾಲಾಹಲವನುಂಡು ಪಾಲಿಸಿದೆ ಜಗವ ಕರು
ಣಾಳು ಪವಮಾನ ವಿಜ್ಞಾನ | ವಿಜ್ಞಾನ ಭಕುತಿ ಶ್ರೀ
ಲೋಲನಲಿ ಕೊಟ್ಟು ಸಲಹಯ್ಯ 30
309ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖ
ಪೊರೆದಂತೆ ಪೊರೆಯೆನ್ನ
ನೀನಿಂತು ಕ್ಷಣದಿ ಕೃಪೆಯಿಂದ 31
310ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ
ಸುಖವೀಯೊ ಭಾವಿ ಲೋ
ಕಪಿತಾಮಹನೆ ಎನಗೆ ದಯವಾಗೊ 32
311 ಬುದ್ಧಿ ಬಲ ಕೀರ್ತಿ ಪರಿಶುದ್ದ ಭಕ್ತಿಜ್ಞಾನ
ಸದ್ಧೈರ್ಯಾಜಾಡ್ಯ ಆಯುಷ್ಯ | ಆಯುಷ್ಯ ವಿತ್ತಭಿ