ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೈ ಸೈ ಸದ್ಗುರುವಿನ ದಯದಿಂದೆಲ್ಲಾ ಮೈ ಮರೆತೆನೆ |ಐ ಅದು ಏನು ಕಾರಣ ಮೈ ಮರೆದು ಮತ್ತುಳಿದೆನೆ | ಕೈ ಕೈ ತಲೆ ಮೇಲಿಡಲು ವೈರಾಗ್ಯ ಪಡೆದೆನೆ |ಥೈ ಥೈಯಂತ ಕುಣಿಸಿ ತನ್ನಂತೆ ತಾ ಮಾಡಿದನೆ ¥ ನಾನೂ ನೀನೆಂಬುದು ಮರೆಸಿ ತಾನೇ ತಾನಾದನೆ |ಮಾನ ಅಪಮಾನ ಎರಡೂ ಪಾನ ಮಾಡಿದನೆ |ಜ್ಞಾನ ಮಾರ್ಗವ ತೋರಿ ಧ್ಯಾನ ಹೇಳಿದನೆ |ಖೂನ ತೋರಿಸಿ ವಿನೋದ ಮಾಡಿದನೆ 1 ನಾದ ಶಬ್ದದಿ ಮನಲುಬ್ಧ ಮಾಡಿದನೆ |ವಾದಿ ದುರ್ವಾದಿಗೂಡ ಕಾದಿ ಗೆಲಿಸಿದನೆ |ಭೇದಾಭೇದವ ಅರಿಯದ ಹಾದೀ ತೋರಿದನೆ |ಈದ ಹುಲಿಯಂಥ ಮನಸು ಸಾದ ಮಾಡಿದನೆ 2 ಭೃಕುಟಿ ಮಧ್ಯದಿ ವಸ್ತು ಪ್ರಕಟ ಮಾಡಿದನೆ | ಆಸನ ದ್ವಾರ ಕವಾಟವ ಬಲಿಸಿ ಶ್ವಾಶಗಳೆಲ್ಲಾ ನಿಲಿಸಿದನೆ | ನಾಸಿಕಾಗ್ರದ ಕೊನೆಯ ಮೇಲೆ ಭಾನು ಪ್ರಕಾಶವ ತೋರಿದನೆ | ಈಶನು ದತ್ತ ಮಹೇಶ ದಿಗಂಬರ ಘೋಷದೊಳಗೆ ಮನವೀಸಿದನೆ 3
--------------
ಭೀಮಾಶಂಕರ