ಉತ್ತಮರಸಂಗಯೆನಗಿತ್ತು ಸಲಹೋ ಪ
ಚಿತ್ತಜಜನಕ ಸರ್ವೋತ್ತಮ ಮುಕುಂದಅ.ಪ.
ತಿರುತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆಪರಿಪರಿಯ ಪಾಪಗಳ ಮಾಡಲಾರೆಮರಣ ಜನನಗಳೆರಡು ಪರಿಹರವÀÀ ಮಾಡಯ್ಯ 1
ಏನ ಪೇಳಲಿ ದೇವ ನಾ ಮಾಡಿದ ಕರ್ಮನಾನಾ ವಿಚಿತ್ರವೈ ಶ್ರೀನಿವಾಸಹೀನಜನರೊಳಗಾಟ ಶ್ವಾನಾದಿಗಳ ಕೂಟಜ್ಞಾನವಂತನ ಮಾಡೊ ಜಾನಕೀರಮಣ 2
ನಿನ್ನ ನಂಬಿದ ಮೇಲೆ ಇನ್ನು ಭಯವ್ಯಾತಕೆಪನ್ನಗಾಧಿಪಶಯನÀ ಮನ್ನಿಸಯ್ಯಮುನ್ನ ಭಕುತರನೆಲ್ಲ ಚೆನ್ನಾಗಿ ಪಾಲಿಸಿದಎನ್ನೊಡೆಯ ರಂಗವಿಠಲ ಎನ್ನದೊರೆಯೇ 3