ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೋಸಗೊಳ್ಳದಂತೆ ಕಾಯೊ ಶ್ರೀಶ ಕರುಣಾಳೊ ಆಶಾಮಗ್ನಮನವ ಹೃಷೀಕೇಶ ನಿನ್ನ ಪದದಲ್ಲಿರಿಸು ಪ. ಹಾದಿ ಬೀದಿಯಲ್ಲಿ ತಿರುಗಿ ಬಾಧೆಗೊಂಡು ಬಳಲಿ ಕಡೆಗೆ ಬೂದಿಯ ಮೇಲೊರಗಿ ಶಾಂತವಾದ ಶ್ವಾನವದು ಕಾದುಕೊಂಡು ಬಾಗಿಲಲ್ಲಿ ಕಾದಲುದರ ತುಂಬುವುದಕೆ ಸಾದರ ಕೊಂಡನ್ಯದಿ ರಸಾಸ್ವಾದನ ಗೈವಂತಾಗಿಹುದು 1 ಕರ್ಣಧಾರರಹಿತ ನಾವೆ ಅರ್ಣವದಿ ಭ್ರಮಿಸುವಂತೆ ದುರ್ನಿವಾರ ಮನಸಿನಿಂದ ಶೀರ್ಣನಾದೆನು ಸ್ವರ್ಣಗರ್ಭಪಾಲಕನು ಪರ್ಣವರವಾಹನ ಹೃದಯಾ- ಕರ್ಣಿಕಾದರಲ್ಲಿ ನಿಂತು ನಿರ್ಣಯವ ತಿಳಿಸು ಬೇಗ 2 ಆಸೆಗೊಂಡು ದುರ್ವಿಷಯದಿ ಬೇಸರದೆ ಭ್ರಾಂತಿಯಿಂದ ದೋಷ ದುರಿತಂಗಳಿಗವಕಾಶನಾದೆನು ದಾಸನೆಂಬ ದೃಷ್ಟಿಯಿಂದ ಕ್ಲೇಶವೆಲ್ಲ ಓಡಿಸಯ್ಯ ಶೇಷಗಿರಿವರ ಶಿಖರಾವಾಸ ನೀನೆ ಶರಣ ಜೀಯಾ 3
--------------
ತುಪಾಕಿ ವೆಂಕಟರಮಣಾಚಾರ್ಯ