ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಪಾಪಿ ನಾನು ಹರಿ ಹರಿ ಪ ಕರ್ಮ ತಿಂತಿಣಿಗಳ ಬಾಧೆಗಳನು | ಅಂತ್ಯಗಾಣದಾದೆನಯ್ಯ ಅ.ಪ ಪರಹಿತಾರ್ಥ ಮನದೊಳೆಣಿಸದೆ || ನರಕದುಃಖದೊಳು ಗೋಳಿಡಲು | ಬರುವರಾರು ಕಾಣದಿರಲು 1 ಪರ ಇರುತ ಮಾಯಾಬಲೆಯೊಳಗೆ ಬಿದ್ದೆ || ಕರೆದರಾರು ಬಾರದಿನಿತು | ಪರಿಯ ಭವಕಿಲ್ಬಿಷವನುಣುವ 2 ಶ್ವಾನನಂತೆ ನಾನು ತೊಳಲಿದೆ || ತಾನು ತನ್ನದೆಂದಧರ್ಮ ನಾ | ಏನನೆಂದರು ಕೇಳರಯ್ಯ 3 ಅನ್ಯರೆಂದು ಪರರ ನಿಂದಿಸಿ | ಪುಣ್ಯಹೀನನಾದೆನಯ್ಯ 4 ಸರ್ವವಿಧದಿ ಭಜಿಸಿ ನಿಜ | ಸರ್ವೇಶ ಶ್ರೀನಿವಾಸನೆನದೆ 5
--------------
ಸದಾನಂದರು
ಏನು ಮಾಡಲೀ ಮನ ಮಾತು ಕೇಳದೇನು ಮಾಡಲಿ ಶ್ರೀ ನರಹರಿಯ ನೆನೆಯದೆ ಕಂಡ ಹೀನ ವಿಷಯದಲ್ಲಿ ಶ್ವಾನನಂತೆ ಪೋಪರೇನು ಪ ಸಾಧು ಸಜ್ಜನರ ಬೋಧನೆಯ ಜರಿಸಿ ಮಾಧವನೆ ನಿನ್ನ ಪಾದಕೊಯಿರಿ ಮಾಳ್ಪೊದೇನು 1 ಕಾಯ ಬಾಂಧವರ ಮಾಯಪಾಶಕ್ಹಾಕೆ ತೋಯಜಾಕ್ಷ ಎನ್ನ ಬಾಯ ಬಿಡಿಸೊರೈಯ್ಯ 2 ಗಜ ಸಿಕ್ಕಿಬಿದ್ದು ನೈಜ ದಿಕ್ಕುಕಾಣದಂತೆ ಸಿಕ್ಕೆ ವಿಷಯದಲ್ಲಿ 3 ತಂದು ತಂದು ಗೋವಿಂದ ನಿನ್ನಲಿಡೆ ಸಂದುಗೊಂಡು ಬಿಡಿಸಿಕೊಂಡು ಪೋಪುದೈಯ್ಯ 4 ದೇಹಗೇಹದಲ್ಲಿ ಸ್ನೇಹ ಇಡಿಸಿ ಕೆಡಿಸಿ ಶ್ರೀ ಹಯವದನ ಮೋಹಪಾಶಕ್ಹಾಕೋದೇನು 5 ವಾಕು ಕೇಳೋ ತಂದೆ ಪಾದ ಒಂದೇ ಸಾಕಬೇಕೊ ಇಂದೆ 6 ಹೀನಬುದ್ಧಿಬಿಡಿಸಿ ಜ್ಞಾನ ನಿನ್ನಲಿರಿಸಿ ಗಾನಲೋಲ ಕಾಯೋ ಶ್ರೀ ನರಹರಿಯೆ 7
--------------
ಪ್ರದ್ಯುಮ್ನತೀರ್ಥರು
ದಾರಿ ತೋಚದಲ್ಲಾ ನನಗೆ ಏನು ಪ ನೀರಜಾಕ್ಷ ನಿನ್ನ ನೊಲಿಸುವ ಅ.ಪ ವಿಧಿ ಸಾಧಿಸುತ ವೇದವ್ಯಾಸ ನಿನ್ನ ಪ್ರೀತಿ ಸಾಧಿಸಲು ಮೂಢನಾನು 1 ದಂಡಕಾಲ ಕಳೆದುದಯ್ತು ಮಂಡೆಗೀಗ ಹತ್ತದವು ಫಂಡರೀಶ ಕೃಪೆಯಮಾಡೊ 2 ಹಾಡಿಪಾಡಿ ವಲಿಸಾಲು ರಾಗ ಈ ಭಾವ ತಾಳ ಕಾಣೆ ಕಾಡು ಕೋಣನಂತೆ ಇರ್ಪೆ ನೀಡಿ ಸಲಹೊ ಸರ್ವ ಶಕ್ತಿ 3 ದಾನಧರ್ಮತೀರ್ಥಯಾತ್ರೆ ನಾನು ಮಾಡೆ ಹುಟ್ಟು ಬಡವ ಶ್ವಾನನಂತೆ ತಿರಿದು ಉಂಬೆ ಸಾಧ್ಯವೇನು ನೀನೇ ನುಡಿಯೊ4 ನೆಂಟರಿಷ್ಟರೆಲ್ಲ ಎನ್ನ ಕೈಯ ಬಿಟ್ಟು ಹೋದರೈಯ ಒಂಟಿಯಾಗಿ ಅಲೆದು ಅಲವೆ ಭಂಟನೆನಿಸಿ ಕಾಯಬೇಕೊ 5 ದಾಸನಾಗಿ ಬಾಳೋದಕ್ಕೆ ಆಶೆಯಿನ್ನು ತೊಲಗಲಿಲ್ಲ ಮೊಸವೇನೆ ಬರಿಯ ವೇಷ ದೋಷದೂರ ಶ್ರೀಶವಲಿಯೊ 6 ಹಿಂದಿನವರ ಕಾಯ್ದಬಗೆಯು ಇಂದಿನವರಿಗೆ ಬರಿಯ ಕಥೆಯು ಮಂದನೆನ್ನ ಈಗ ಪಿಡಿದು ಮುಂದು ಮಾಡೊ ನಿನ್ನ ಖ್ಯಾತಿ7 ಶರಣ ಜನರ ಬಿಡನು ಎಂಬ ಖರೆಯಬಿರುದು ನಿನ್ನದೆಂದು ಹಿರಿಯರಿಂದ ಅರಿತುಬಂದೆ ಪರಮ ಕರುಣಿ ಕೈಯ ಪಿಡಿಯೊ8 ನಿನಗೆ ಯೆನ್ನ ಪೊರೆಯೆ ಕ್ಷಮಿಸಿ ದೋಷ ಪೊರೆಯೊ ಬೇಗ ನಮಿಪೆ ನಂಬಿ ನಿನ್ನನೀಗ 9
--------------
ಕೃಷ್ಣವಿಠಲದಾಸರು
ಮನ್ನಿಸೈ ಹರಿ ಪನ್ನಗೇಂದ್ರಶಯನ ಪ ಘನ್ನವಾದ ಪಾಪವನ್ನು ಮಾಡಿ ಜಗದಿ ನಿನ್ನ ನಾಮ ಮರದೆ ಸನ್ನುತಾಂಗ ಸಲಹೊಅ.ಪ ಜ್ಞಾನ ಶೂನ್ಯವಾಗಿ ನಾನಾ ವಿಷಯಗಳಲಿ ನಾನು ನನ್ನದೆಂಬ ಹೀನ ಮಮತೆಯಿಂದ ದಾನವಾರಿ ನಿನ್ನ ಧ್ಯಾನಿಸದಲೆ ಕಾಲ ಸಾನುರಾಗದಿಂದ ಶ್ವಾನನಂತೆ ಕಳೆದೆ 1 ರೋಗಹರನೆ ಭವದ ರೋಗವೈದ್ಯನೆಂದು ಬಾಗಿ ನಿನ್ನನುತಿಪೆ ನಾಗಾರಿವಾಹನ ಯೋಗಿವಂದ್ಯನೆ ಚನ್ನಾಗಿ ನಿನ್ನ ಸ್ತುತಿಪ ಭಾಗವತರ ಸಂಗ ದೇವ ಪಾಲಿಸಯ್ಯ 2 ರಕ್ಷಿಸೆಮ್ಮ ಬಿಡದೆ ಲಕ್ಷ್ಮಿರಮಣದೇವ ಕುಕ್ಷಿಯೊಳಗೆ ಜಗವ ರಕ್ಷಿಸುತ್ತ ಪೊರೆವ ಸೂಕ್ಷ್ಮ ಸ್ಥೂಲದೊಳು ಪ್ರತ್ಯಕ್ಷನಾದ ಹರಿ ಉ- ಪೇಕ್ಷಿಸದಲೆ ಕಾಯೋ ಪಕ್ಷಿವಾಹನ ದೇವ 3 ಕಡಲೊಡೆಯನೆ ದೇವ ಮೃಡನ ಸಖವೆ ಕಾಯೊ ಅಡಿಗಡಿಗೆ ಸ್ತುತಿಸಿ ಬಿಡದೆ ಮುಗಿವೆ ಕಯ್ಯ ಎಡಬಲದಲಿ ಶ್ರೀ ಭೂಮಡದೇರಿಂದ ಮೆರೆವ ಉಡುಪ ಮುಖನೆ ಕಾಯೋ ಕಡಲೊಡೆಯನೆ ರಂಗ 4 ಕಮಲಪತ್ರದಳಾಕ್ಷ ಕಮಲಜೋದ್ಭವೆ ಪ್ರಿಯ ಕಮಲಸಂಭವ ಜನಕ ಕಮನೀಯ ಸ್ವರೂಪ ಕಮಲನೇತ್ರೆರ ರಸಕಮಲಪುಷ್ಪಮಾಲಾ ಹೃ- ತ್ಕಮಲದೋಳು ಶೋಭಿಪ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ
ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ಪ ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ಅ ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ - ರಿಕ್ತಹಸ್ತದಿಂದ ಮನೆಯ ಸೇರುವೆ - ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ - ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ 1 ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ - ದುರಾಸೆಯನ್ನುಮನಸಿನಲ್ಲಿ ಮಡಗಿಕೊಂಡು ಕುದಿವೆನೊಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ2 ಮಾಧವ - ರಂಗಯ್ಯ ರಂಗ3
--------------
ಕನಕದಾಸ
ನಾ ಮಾಡಿದಕರ್ಮಬಲವಂತವಾದರೆ |ನೀ ಮಾಡುವುದೇನೊ ದೇವಾ ಪಸಾಮಾನ್ಯವಲ್ಲವಿದು ಬ್ರಹ್ಮಬರೆದ ಬರೆಹ |ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ ಅ.ಪಅತಿಥಿಗಳಿಗೆ ಅನ್ನ ಕೊಟ್ಟವನಲ್ಲ -ಪರ -|ಸತಿಯರ ಸಂಗವ ಗಳಿಗೆ ಬಿಟ್ಟವನಲ್ಲ ||ಮತಿಹೀನನಾಗಿ ಮರುಳಾಗಿದ್ದೆನೋ ದೇವ |ಗತಿಯಾವುದೈ ಎನಗೆ ಗರುಡವಾಹನ ಕೃಷ್ಣ1ಅನ್ನಪಾನಂಗಳಿಗೆ ಅಗ್ರಗಣ್ಯನು ಆಗಿ |ಸ್ನಾನ ಸಂಧ್ಯಾದಿ ಕರ್ಮಂಗಳನೀಗಿ||ದಾನವಾಂತಕ ನಿನ್ನ ಧ್ಯಾನವ ಮಾಡದೆ |ಶ್ವಾನನಂತೆ ಮನೆಮನೆ ತಿರುಗುತಲಿದ್ದೆ 2ಇನ್ನಾದರು ನಿನ್ನ ದಾಸ ಸಂಗವನಿತ್ತು |ಮನ್ನಿಸಿ ದಯಮಾಡೊ ಮನ್ಮಥಜನಕ ||ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ |ಪನ್ನಂಗಶಯನ ಶ್ರೀಪುರಂದರವಿಠಲ 3
--------------
ಪುರಂದರದಾಸರು