ಬೋಧ ನುಡಿಗಳು |
ಹೀನ ಮನುಜರಿಗ್ಯಾತಕೆ |
ಪಾದ ಕಮಲಧ್ಯಾನವುಳ್ಳ ಸುಜನರಿಗಲ್ಲದೇ ಪ
ಕಾಣದವಗ ಕನ್ನಡಿ ಅದ್ಯಾತಕೆ |
ರಾಣಿ ಯಾತಕೆ ಷಂಡಗೆ |
ಗೋಣಿಗ್ಯಾತಕೆ ಗವಸಣಿಕೆ ಗೀ |
ರ್ವಾಣಗಳೇಕೆ ಗೊರವಗ 1
ಶ್ವಾನಗ್ಯಾತಕ ಇಕ್ಷುದಂಡವು |
ಈ ನರಿಗೆ ಊರ್ಯಾತಕೆ |
ದೀನಗ್ಯಾತಕೆ ಧರ್ಮವಾರ್ತೆಯು |
ವಾನರಕ ಸರ ಮುತ್ತು ಯಾತಕೆ 2
ಬುತ್ತಿಗಳ್ಳರಿಗ್ಯಾಕೆ ವೃತಗಳು |
ಕತ್ತಿಗ್ಯಾತಕೆ ಕಸ್ತೂರಿ |
ಕರ್ತ ಮಹಿಪತಿ ನಂದನುಸುರಿದ |
ಚಿತ್ತ ಶುದ್ಧಿಯ ಪಡಿಯದವರಿಗೆ 3