ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನ ಹೇಳಲೆನ್ನ ಬುದ್ಧಿಹೀನತೆಯನಿಂದು ಹರಿಯೆ ಶ್ವಾನಕಿಂತ ನೀಚನಾದೆ ಧ್ಯಾನಿಸದೆ ಮರುಳಾದೆ ಪ. ಪಂಚವಿಂಶತ್ವದಲ್ಲಿ ಮಿಂಚುತ್ತಿರುವ ನಿನ್ನ ರೂಪ ಕಿಂಚಿತ್ತಾದರರಿಯದೆ ಕೀಳ್ಹಂಚಿನೊಳಸಂಚ ನಂಬಿ 1 ಮಾಯಾ ಶಕ್ತಿ ಪಾಶಬಂಧದಲ್ಲಿ ಸಿಲುಕಿ ಲೇಶ ಸ್ವಾತಂತ್ರ್ಯವರಿಯದಾಶೆಯೆಂಬ ಕಡಲೊಳಿಳಿದೆ 2 ಗಣನೆಯಿಲ್ಲದೆನ್ನ ಕೆಟ್ಟ ಗುಣಗಳೊಂದನೆಣಿಸದಿಂದು ಮೂರ್ತಿ ದೋರೊ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ. ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ 1 ದಾನಧರ್ಮ ಜಪತಪ ಮೌನ ಮೊದಲಾದ ಸ- ತ್ಸಾಧನ ಹೀನನಾದರು ನಿನ್ನಾನುರಾಗದಿ ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ 2 ಮನವಚನ ಕಾಯಕಾದನುದಿನ ಕೃತವಾದ ಘನ ಪಾಪಂಗಳಿಗೆ ನಾ ಕೊನೆಗಾಣೆನು ದನುಜಾರಿ ರಾಮ ಅನಿಮಿತ್ತಬಂಧು ಎಂಬ ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ 3 ವೀರವೇದೋದ್ಧಾರ ವರಮಂದರಧರ ನರ ಹರಿಕುಬ್ಜಾಕಾರ ಪೃಥ್ವೀಭಾರವಾರಕ ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ ಹರನಿಂದ ತರಿಸಿದ ತುರಗವೇರಿದ ಧೀರ 4 ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು 5 ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ 6 ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ ದಾಸರ ದಾಸ್ಯವನಿತ್ತು ಪೋಷಿಸೆನ್ನುತ ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು 7
--------------
ತುಪಾಕಿ ವೆಂಕಟರಮಣಾಚಾರ್ಯ