ಮರ್ಯಾದಿ ಗುಣ ವಳ್ಹದೋ |
ಗುರುವರ್ಯರ ಸೇವೆಲಿ ಬಾಳ್ವೆನೆಂಬನಿಗೆ ಪ
ಅರಸುವಲಿದು ಅತಿ ಪ್ರೀತಿ ಮಾಡಿದರೇನು ?
ಕರಗಳ ಮುಗಿದು ನಿಂದಿರಬೇಕು ಚರನು 1
ಹಿಂಗದೆ ಭಕುತಿಗೆ ಬೆಜ್ಜರ ವಿಡಿದರ |
ಬಂಗಾರಕ ಸುವಾಸನೆಯು ಬಂದಂತೆ 2
ಕುದುರೆಗೆ ಉತ್ತತ್ತಿ ತುಸು ಕೊಟ್ಟರಾರೋಗ್ಯ |
ಅದೇ ವಿಶೇಷ ಕೊಡಲು ವಿಪರೀತವೋ 3
ಯೋಗ್ಯವಲ್ಲದ ಅಲಂಕಾರಿಸಿಕೊಂಡರೆ ತನ್ನ |
ಶ್ಲಾಘ್ಯವೇ ಜಗದೊಳು ಉಪಹಾಸ್ಯ ಮೂಲಾ 4
ತರಳತನವ ಬಿಟ್ಟೆಚರದಲಿ ನಡಿಬೇಕು |
ಗುರು ಮಹಿಪತಿಸುತ ಪ್ರಭು ನೊಲುವಂತೆ 5