ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಸಾಗರ ದೀನೋದ್ಧಾರಣ ಎನ್ನನು ಕಾಯ್ವ ಪರಿಯ ಚಿಂತಿಸಿ ರಕ್ಷಿಸೊ ಪರಮ ಪಾವನ ನಾಮಸ್ಮರಣೆಯಲ್ಲದೆ ಕರ್ಮ ಚರಣರಹಿತ ಪಾಪಕರನಾಬ್ಧಿಪತಿತನ ಪ. ವರ್ಣಾಶ್ರಮಾಚಾರ ಕರ್ಮಕೃತ್ಯವ ನೀಗಿ ನಿರ್ಮಲಚಿತ್ತದಿ ನಿನ್ನ ಪೂಜಿಸದೆ ವರ್ಮವಿಡಿದು ವರ ದ್ರೋಹ ಚಿಂತೆಗಳಿಂದ ಧರ್ಮಮಾರ್ಗವ ದೂರದಲಿ ತ್ಯಜಿಸಿ ನಿರ್ಮಲಾಂತ:ಕರಣ ನಿಜಕುಲ ಧರ್ಮರತ ಸಜ್ಜನರ ದೂಷಿಸಿ ದುರ್ಮದಾಂಧರ ಸೇರಿ ಕೂಪದ ಕೂರ್ಮನಂದದಿ ಬರಿದೆ ಗರ್ವಿಪೆ 1 ನೇತ್ರ ದರ್ಶನಕೆ ಸಂಸ್ಮರಕೆ ಜಿಹ್ವೆಯ ಗಾತ್ರ ಸೇವೆಗೆ ನೈರ್ಮಲ್ಯಕೆ ಶಿರವ ಶ್ರೋತ್ರವ ಮಾಹಾತ್ಮ ಶ್ರವಣಕೆ ಪಾದಗಳ ಕ್ಷೇತ್ರಯಾತ್ರೆಗೆ ಕರಗಳ ಪೂಜಾವಿಧಿಗೆ ಇತ್ತ ದೊರೆಯನು ಮರೆತು ಇಂದ್ರಿಯ ವೃತ್ತಿಗಳ ಸ್ವೈರಿಣಿಯ ದರುಶನ ಭುಕ್ತಿ ಚುಂಬನ ಧ್ಯಾನ ದುಷ್ಟ ಕಥಾ ಶ್ರವಣಸಲ್ಲಾಪಕಿತ್ತೆನು 2 ಪತಿತ ಪಾವನ ನೀನು ಪತಿತಾಗ್ರೇಸರ ನಾನು ಅತಿಶಯಿತನು ನೀನು ಅತಿನೀಚನು ನಾನು ಗತಿಹೀನ ಜನಕ ಸದ್ಗತಿಯೆಂಬ ಬಿರುದುಳ್ಳ ಮಿತಚಿತ್ರ ಚರಿತಾತ್ಯದ್ಘುತರೂಪ ಗುಣಪೂರ್ಣ ಪಶುಪತಿ ಸುರೇಶ ಪ್ರ- ಭೃತಿ ದಿವಿಜಗಣ ಸುತ ಪದಾಂಬುಜ ಕ್ಷಿತಿಜಲಾಗ್ನಿ ಮರುನ್ನಭೋಹಂ ಕೃತಿ ಮಹ ಸುಖತತಿನಿಯಮಕ 3 ಕರಿರಾಜ ಧ್ರುವಾಕ್ರೂರನರ ವಿಭೀಷಣ ನಾರದರು ಮೊದಲಾಗಿ ನಿನ್ನನುದಿನವು ಸ್ಮರಿಸಿ ಪೂಜಿಸಿ ಮನವೊಲಿಸಿದವರನ್ನು ಪರಿಪಾಲಿಸಿದನೆಂಬೊ ಗರುವದಿಂದ ನಿರುಪಮಾನಂದೈಕ ಸದ್ಗುಣ ಭರಿತರೆಂಬುದ ಹೆಮ್ಮೆಯಿಂದಲಿ ಮರೆತರೆನ್ನನು ಪರಮಕರುಣಾ ಶರಧಿಯೆಂದ್ಹೆಸರಿರುವುದೇತಕೆ 4 ನಾ ನಿನ್ನ ಮರೆತರು ನೀ ಎನ್ನ ಮರೆದರೆ ಹಾನಿಯಾಗದೆ ನಿನ್ನ ಭಕ್ತ ವತ್ಸಲಕೆ ದಾನವಾಂತಕ ಅಕಿಂಚನಾರೆ ಎಂಬ ಪ್ರಮಾಣ ಉನ್ನತ ವಚನವಾಗದೆ ಮಾನನಿಧಿ ಪವಮಾನ ತತ್ವಮತ ಮಾನಿಜನ ಸಂಸ್ತುತ ಪದಾಂಬುಜ ಶ್ರೀನಿವಾಸ ಕೃಪಾನಿಧೆ ಕಮಲಾ ನಿಲಯ ವೆಂಕಟನಿಜಾಲಯ 5 ವೇದವನು ತಂದು ಭೂಧರನ ಬೆನ್ನಲಿ ನೆಗಹಿ ಈ ಧರೆಯ ಸಲಹೆ ಪ್ರಹ್ಲಾದನನು ಕಾಯ್ದೆ ಮೇದಿನಿಯನಳೆದಿ ಕಾರ್ತದಶಾಸ್ಯ ಕಂ ಸಾದಿಗಳ ತರಿದ ಬೌದ್ಧಾದಿ ಕಲ್ಕಿ ಧಾರಣನೆ ಪತಿತ ಪಾವನನೆಂಬ ಪರಮ ಬಿರುದನು ವಹಿಸಿ ಜತನ ಮಾಡುವಿ ಭಕ್ತತತಿಗಳನು ಬಿಡದೆ ಪತಿತ ಶೇಖರನನ್ಯಗತಿಯಾಗಿರುವ ಎನಗೆ ಗತಿಯ ಪಾಲಿಸು ರಮಾಪತಿಯೆನ್ನುಪೇಕ್ಷಿಸದೆ 6 ನಾರದಕ್ರೂರ ನರ ಹೈರಣ್ಯಕಾದಿಗಳು ಪಾದ ನೀರರುಹಗಳನು ಘೋರತರ ಸಂಸಾರಪಾರವಾರವ ದಾಟಿ ಧೀರರೆನಿಸಿದರೆಲ್ಲಪಾರಸನ್ಮಹಿಮ ತರಣಿ ಉದಿಸಿದ ಮೇಲೆ ತಿಮಿರದೊಂದಿರವ್ಯಾಕೆ ಗರಳ ಭಯವ್ಯಾಕೆ ಸಿರಿಸಹಿತ ಶೇಷಾದ್ರಿ ವರ ನಿನ್ನಪಾದ ಸಂ- ದರುಶನವು ದೊರೆತಮ್ಯಾಲರಿಬಾಧೆಯಾಕೆ ಎನಗೆ 7
--------------
ತುಪಾಕಿ ವೆಂಕಟರಮಣಾಚಾರ್ಯ
ತಿಳಿವುದನ್ನಮಯ ಕೋಶಗಳನು ಇಳೆಯೊಳಚ್ಯುತನ ದಾಸರು ನಿತ್ಯದಲಿ ಪ ಮೇದಿನಿ ಸಲಿಲನ್ನಮಯ ವಿಹಾಯಸ ವಾಯು ಮುಖ್ಯಪ್ರಾಣ ಮನೋಮಯಕೆ ಆದುದು ಮನ ಅಹಂಕಾರ ವಿಜ್ಞಾನಮಯ ವೇದ್ಯ ತತ್ತ್ವಾನಂದ ಮಯಕೆ ಅವ್ಯಕ್ತವನು1 ಕೃತಿ ಸಂಕರು ವಾಸುದೇವ ಮಾಯಾ ಘನ ಸುಲಕ್ಷಣ ಲಕ್ಷ್ಮೀ ನಾರಾಯಣರು ಮುಖ್ಯ ರೆನಿಸುವರು ಪಂಚಕೋಶದಲಿ ಎಂದೆಂದೂ 2 ಪ್ರಾಣಾಪಾನ ವ್ಯಾನೋದಾನ ಸಮಾನ ಪಂ ಚಾನಿಲರೂ ಅಲ್ಲಿಹರು ಮತ್ತು ದಾನವಾದಿಗಳಿಹರು ಭೂತ ಮಾತ್ರ ಕರ್ಮ ಜ್ಞಾನೇಂದ್ರಿಯಗಳು ತನ್ನಿಷ್ಟವಾಗಿಹವಲ್ಲಿ 3 ಅಬುಜ ಭವಾಂಡ ಪಿಂಡಾಂಡಕ್ಕೆ ಈ ತತ್ತ್ವ ಒಂಬತ್ತು ಆವರಣವೆಂದೆನಿಪವು ಕಂಬುಪಾಣಿಯ ರೂಪ ಲಕ್ಷ್ಮೀ ರೂಪವು ಪಂಚ ಇಂಬುಗೊಂಡಿಹವು ಚಿಂತಿಪುದು ಭೂಸುರರು 4 ಭೂಶನೇಶ್ವರ ವರುಣ ಸುರನದಿಗಳನ್ನಮಯ ಕೋಶದೊಳಗಿರುತಿಹರು ಪ್ರಾಣಮಯದಿ ಮೇಷವಾಹನ ಪ್ರವಹವಾಯು ಪ್ರಾವಹಿ ಮಹಾ ಕಾಶಾಧಿಪತಿ ಗಣಪರಧಿಪರೆಂದೆನಿಸುವರು 5 ಕಾಮೇಂದ್ರ ಶಿವ ರತೀಂದ್ರಾಣಿ ಪಾರ್ವತಿ ಮುಖ್ಯ ಈ ಮನೋಮಯಕಧಿಪರೆನಿಸುತಿಹರು ತಾಮರಸಭವ ವಾಯು ವಾಣಿ ಭಾರತಿ ಮುಖ್ಯ ಸ್ವಾಮಿಗಳೆನಿಸುವರು ವಿಜ್ಞಾನಕೋಶದಲಿ 6 ಆನಂದಮಯ ಕೋಶಕಭಿಮಾನಿ ಶ್ರೀನಿವಾಸನು ಪಂಚರೂಪಾತ್ಮಕಾ ಈ ನಿರ್ಜರರೊಳಿದ್ದು ತತ್ತದಾಹ್ವಯನಾಗಿ ಪಾನೀಯಜಾಂಡದೊಳಿಪ್ಪ ಕರುಣೀ 7 ಪೃಥಿವಿ ಗಂಧ ಘ್ರಾಣೋಪಸ್ಥಪ್ಪುರ ಸಂಜೀವಾ ಪ್ರಥಮ ಕೋಶದಿ ವಾಯು ಅಷ್ಟತತ್ತ್ವ ದ್ವಿತೀಯ ಕೋಶದಿ ತೇಜರೂಪ ಚಕ್ಷುಪಾದ ಪ್ರಥಮಾಂಗ ಸ್ಪರ್ಶ ತ್ವಕು ಪಾಣಿ ತತ್ವಗಳಿಹವು 8 ಆಕಾಶ ಶಬ್ದ ಶ್ರೋತ್ರವು ಪಿಂತೆ ಪೇಳ್ದಷ್ಟು ವಾಕು ಪ್ರಾಣಾದಿ ತತ್ತ್ವ ದ್ವಾದಶ ಕಾಮ ಶ್ರೀ ಕಂಠ ತತ್ವ ಮನ ಮನೋಮಯದಿ ವಿಜ್ಞಾನ ಕಮಲ ಭವ ನಂದ ಮಯತೆ ಅವ್ಯಕ್ತವನು 9 ಸ್ಥೂಲ ದೇಹಕೆ ಇನಿತು ಲಿಂಗ ತನುವಿನಲಿ ತತ್ತ ್ವ ಜಾಲ ಸೂಕ್ಷ್ಮಗಳಿಹವು ಗುಣ ಭೇದದಿ ಪೇಳುವೆನು ಅವ್ಯಕ್ತ ಮಹದಹಂಕಾರ ಮನ ಮೇಳೈಸಿಹವು ಸತ್ವಪರಿ ಭೇದದಲಿ 10 ರಜೋಪರಿಚ್ಛೇದದಲಿ ಜ್ಞಾನ ಕರ್ಮೇಂದ್ರಿಯವು ರಜನೀ ಗುಣದ ಮಾತ್ರ ಭೂತ ಇಹವು ಯಜಿಸು ಈ ತತ್ತ್ವ ಮಾನಿ ದಿವಿಜರನರಿತು ವೃಜಿನವರ್ಜಿತನಾಗಿ ಸುಪದವೈದುವಿ ಮನುಜ11 ಭೂಮ್ಯಭ್ರನ್ನ ಮಯನಳನೀಳಾಗಸ ಪ್ರಾಣ ಮಯ ಮ ನೋಮಯ ಮಹಾ ಅವ್ಯಕ್ತ ಸಮ್ಯಗಾನಂದ ವಿಜ್ಞಾನಮಯನೆನಿಸಿ ಗುರು ಸಮೀರನೊಳಗಿದ್ದು ಪಾಲಿಸುವ ಜಗವಾ 12 ಪಂಚಕೋಶದ ವಿವರ ತಿಳಿದ ಮಹಾತ್ಮರಿಗೆ ಕಿಂಚಿತಾದರು ದೋಷ ಬರಲರಿಯದು ಮಾರ್ಗಣ ಪಿತ ಜಗನ್ನಾಥ ವಿಠಲನು ಸಂಚತಾಗಾಮಿ ಕರ್ಮಗಳ ಫಲ ಬಿಡಿಸುವನು 13
--------------
ಜಗನ್ನಾಥದಾಸರು
ದಯ ಬಾರದ್ಯಾಕೊ ರಾಘವಾ ಪ ಕಾಯಬೇಕು ಯೆಂದು ಕೊರಗಿ ಮೊರೆಯಿಡೆ ನ್ಯಾಯವೇನು ಯೆನ್ನ ಮರತುಬಿಡುವದು ಅ.ಪ ಅಂದು ಅಜಮಿಳನು ಅಂತ್ಯಕಾಲದಲ್ಲಿ ಕಂದ ನಾರ ಬಾಯೆಂದು ಕರಿಯಲು ಅಂದ ಮಾತುಗಳಿಗೆ ಅತಿ ಹರುಷಿಸಿ ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ 1 ಹರಿಯೆ ಗತಿಯೆಂದು ಹೊಗಳು ಕಂದನ ಹರುಷವಿಲ್ಲದೆ ಪಿತ ಕಷ್ಟಪಡಿಸಲು ಊರು ತೋರದಂತಾ ಸ್ತಂಭದಿಂದ ಬಂದು ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ 2 ಸರ್ಪಶಯನನೆ ಸಾರ್ವಭೌಮನೆ ನಾಸಿಕ ಶ್ರೋತ್ರವಳಿದನೇ ಅಪ್ಪ ಗುರುವರ ವಿಜಯವಿಠ್ಠಲನೇ ಒಪ್ಪದಿಂದ ವಲಿವ ವರದರಾಜನೇ 3
--------------
ವಿಜಯದಾಸ
ಭಗವಂತನ ಸಂಕೀರ್ತನೆÀ ಇಂದಿರಾರಮಣ ಆನಂದಮೂರುತಿ ನಿನ್ನ ವಂದಿಸಿ ಕರಗಳ ಬಂಧಿಸಿ ಬೇಡುವೆ ಪ ಎಂದಿಗೂ ಎನ್ನ ಹೃದಯಮಂದಿರ ಬಿಡದಿರೊ ನಂದಮುನ್ನೀಶ್ವರ ವಂದಿತ ಚರಣನೆ ಅ.ಪ ಕೃತಿರಮಣನೇ ಮುನಿಸತಿಯು ಶಾಪದಿ ಶಿಲಾ ಕೃತಿಯಾಗಿರಲು ಶ್ರೀಪತಿಯೇ ನೀ ಬಂದು ರತಿಪತಿಪಿತನೆ ಯುವತಿಯನ್ನೆ ಮಾಡಿದ ಪತಿತಪಾವನ ನೀನಲ್ಲವೇನೊ ಹರಿಯೆ 1 ನಾಕರಾಜನ ಸುತನು ಕಾಕರೂಪದಿ ಬಂದು ಏಕಾಂತದೊಳು ಅವಿವೇಕವ ಮಾಡಲು ಶ್ರೀಕಾಂತ ತೃಣದಿಂದ ಭೀಕರಿಸಿ ಮೂರು ಲೋಕ ಸುತ್ತಿಸಿ ಅವನ ನೀ ಕಾಡಿದೆ ಹರಿಯೆ 2 ಮತ್ತು ಗಜೇಂದ್ರನಾಪತ್ತು ಪರಿಹರಿಸಿ ಉತ್ತಮ ಪದವವಗಿತ್ತು ರಕ್ಷಿಸಿದೆ ಭಕ್ತವತ್ಸಲ ಎನ್ನ ಕುತ್ತುಗಳನು ನೀ ಚಿತ್ತಕೆ ತರದೇ ಸದ್ವøತ್ತನೆಂದೆನಿಸೈ 3 ನೇತ್ರವೆಂಬುದು ನಾರಿಗಾತ್ರದೊಳಿರುವುದು ಶ್ರೋತ್ರವು ಗೀತವ್ರಾತದೊಳಿಹುದು ಚಿತ್ತ ವಿಷಯ ಭೋಗಾಸಕ್ತವು ಗೋಪಿಕಾ ಮಿತ್ರನೇ ಅಂಜಲಿಮಾತ್ರ ನೀನೊಪ್ಪಿಕೋ 4 ವರನಾಮಗಿರಿಲಕ್ಷ್ಮೀನರಸಿಂಹ ಮೂರುತೆ ಚರಣಕಮಲಯುಗ ಸ್ಮರಣೆಯ ಎನಗೆ ಸ್ಥಿರವಾಗಿರುವಂತೆ ವರವಿತ್ತು ಸಲಹೆಲೊ ಪರಮಪುರುಷ ದಿನಕರಕುಲತಿಲಕನೆ 5
--------------
ವಿದ್ಯಾರತ್ನಾಕರತೀರ್ಥರು