ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಕದಾಸನ ಮೇಲೆ ದಯ ಮಾಡಲು ವ್ಯಾಸಮುನಿ ಮಠಿಕರೆಲ್ಲರು ದೂರುತಿಹರೊ ಪ. ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲುದೂರ್ತರಾಗಿದ್ದ ವಿದ್ವಾಂಸರೆಲ್ಲಸಾರ್ಥಕವಾಯ್ತು ಇವರ ಸನ್ಯಾಸಿತನವೆಲ್ಲಪೂತ್ರ್ಯಾಗಲೆಂದು ಯತಿ ನಗುತಲಿಹನು 1 ಕದಳಿ ಫಲವನೆ ಕೊಟ್ಟುಯಾರಿರದ ಸ್ಥಳದಲ್ಲಿ ಮೆದ್ದು ಬನ್ನಿರಿ ಎನಲು2 ಕದಳಿ ಫಲವ ತಂದು ಮುಂದಿಟ್ಟ 3 ಡಿಂಬದೊಳು ಶಬ್ದ ವಾಗಾದಿ ಶ್ರೋತೃಗಳಲ್ಲಿಇಂಬಾಗಿ ತತ್ತ್ವೇಶರೆಲ್ಲ ತುಂಬಿಹರುತಿಂಬುವುದು ಹ್ಯಾಂಗೆನುತ ವ್ಯಾಸರಾಯರ ಕೇಳೆಕಂಬದಂತಾದರವರೆಲ್ಲ ಕುಳಿತವರು 4 ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆಕೋಣನಿದಿರಿಗೆ ಕಿನ್ನರಿಯ ಮೀಟಿದಂತೆವೇಣುಧ್ವನಿ ಬಧಿರನ ಬಳಿ ಹೊರಡಿಸಿದಂತೆ ಕಣ್‍ಕಾಣದವನಿಗೆ ಕನ್ನಡಿಯ ತೋರಿದಂತೆ 5 ನೋಡಿದಿರ ಈ ಕನಕನಾಡುವ ಮಾತುಗಳಮೂಢ ಜನರರಿಯಬಲ್ಲರೆ ಮಹಿಮೆಯನಾಡಾಡಿಯಂತೆಯೆ ಮಾಡಿಬಿಟ್ಟರು ಇವಗೆ ನಾಡೆಲ್ಲ ಹುಡುಕಿದರು ಈಡಾರ ಕಾಣೆ6 ಪುರಂದರ ವಿಠಲನೆಂದ 7 * ಈ ಕೀರ್ತನೆ ಕನಕದಾಸರದೆಂದೂ, ‘ಪುರಂದರ ವಿಠಲ’ ಎಂಬ ಅಂಕಿತ ಪ್ರಕ್ಷಿಪ್ತವೆಂದೂ ಪ್ರತೀತಿ.
--------------
ಕನಕದಾಸ
ಕಾಣಿಸುವೆ ನಿಜವಾಗಿ ಚನ್ನಕೇಶವನ ಪ ಸಡಗರದಿ ನಿಂತಿಹನು ವರ ದೂರ್ವಾಪುರದಲ್ಲಿ ಪೊಡವಿಯೊಳು ದಾಸರಿಗೆ ವಲಿಯಬೇಕೆಂದು ಬಿಡದೆ ನೋಡಿರಿ ಹರಿಯ ಕಾಯಕಾಂತಿಯ ನೀಗ ಕಡು ಶ್ಯಾಮ ವರ್ಣದಲಿ ಯೆಸೆಯತ್ತಲಿಹುದು 1 ಮೇಲಿನ ಬಲ ಹಸ್ತದಲ್ಲಿ ಶಂಖವ ನೋಡು ಕೆಳಗಿನ ಬಲ ಹಸ್ತದಲ್ಲಿ ಪದ್ಮವನೂ ಮೇಲಿನ ಯಡ ಹಸ್ತದಲ್ಲಿ ಚಕ್ರವ ನೋಡು ಕೆಳಗಿನ ಯಡ ಹಸ್ತದಲ್ಲಿ ಗದೆಯನ್ನೂ 2 ಸೊಂಟದಲಿ ವಡ್ಯಾಣ ಕಿರುಗೆಜ್ಜೆಗಳ ನೋಡು ಕಂಠದಲಿ ಹಲವು ವಿಧದಾಭರಣಗಳನೂ ಕೌಸ್ತುಭ ನೋಡು ಬಂಟರನು ಸಲಹುವ ಪಾದಯುಗ್ಮವನೂ 3 ಸೂರ್ಯ ಚಂದ್ರಮಂತೆ ಇಳೆಯೊಳಗೆ ರಮಣೀಯವಾಗಿ ಶೋಭಿವವು ಬಲಯಡದ ಶ್ರೋತೃಗಳ ಕುಂಡಲವ ನೋಡು 4 ಉದರ ಮಧ್ಯದೊಳಿಪ್ಪ ನಾಭಿಕಮಲವ ನೋಡು ಮದನಪಿತ ಶ್ರೀಹರಿಯ ತುಲಸಿ ಮಾಲೆಯನೂ ಸದನ ಪೀಠವನುಟ್ಟ ಪಿಂತಾಂಬರವÀ ನೋಡು ಮೃದು ಪಣೆಯೊಳಿಟ್ಟಿರುವ ಶ್ರೇಷ್ಠ ತಿಲಕವನೂ 5 ಚಿನ್ಮಯ ರೂಪವ ಮೌಕ್ತಿಕದ ಸರಗಳನು ಕಂಣಿಗೆಯುವ ಪುಷ್ಪಮಾಲೆಗಳ ನೋಡು ಸನ್ನುತನು ಭಕ್ತರನು ಪೊರೆವ ಮೂರ್ತಿಯ ಬಿಡದೆ ಮನ್ನಿಸುತ ಭಜಕರನು ಕಾವ ರಂಗನನೂ 6
--------------
ಕರ್ಕಿ ಕೇಶವದಾಸ
ನಿತ್ಯ ಶ್ರೀಕರವು ಪ ಭೂಪತಿಯಂದದಿ ಭೂಮಿಯಾಳುವುದು ಕಾಪಾಡುತಿಹುದು ಲೋಕಿಗರಅ.ಪ ಆಳುವಾರುಗಳು ಆಚಾರ್ಯರುಗಳು ಪೇಳಿದರಿದರಾಂತರ್ಯವನು ಕೇಳುತ ಬಾಳಿದ ಬಹು ಭಾಗವತರ ಪಾಳಯವದು ತಾಂ ಪರಮಪದ 1 ಅಭಿಮತದಿಂದಲಿ ಮುನಿಗಳು ಮೂವರು ವಿಭವದಿಂದಲದ ಸಲಹಿದರು ಉಭಯ ವೇದಗಳ ಅಮೃತವರ್ಷದಿಂ ಸು ರಭಿತ ಕುಸುಮಗಳರಳಿದವು 2 ಶಂಖ ಸುದರ್ಶನ ಲಾಂಛನ ಭುಜಗಳಲ ಲಂಕಾರದ ಹನ್ನರೆಡು ನಾಮಗಳು ಪಂಕಜ ತುಳಸೀಮಣಿ ಪವಿತ್ರಗಳು ನಿಶ್ಶಂಕೆಯ ಮೂರು ಮಂತ್ರವೆ ಕಾಯ್ಗಳು 3 ಶಾಸ್ತ್ರ ಸಿದ್ಧವಾದರ್ಚಾಮೂರ್ತಿಯ ಕ್ಷೇತ್ರ ತೀರ್ಥಗಳು ಪಕ್ವಫಲ ಶ್ರೋತೃಗಳಿಗೆ ಮಧುರಾದತಿಮಧುರವು ಖ್ಯಾತಿಯ ವಿಜಯರಾಘವ ಕೃತಿ-ಪ್ರ- ಖ್ಯಾತಿಯ ಅಣ್ಣಂಗಾರ್ಯ ಕೃತಿ4 ನಿತ್ಯ ನೈಮಿತ್ತಿಕ ತಿರುವಾರಾಧದಿ ನವ್ಯ ತದೀಯದ ಕೈಂಕರ್ಯ ಸ್ತುತ್ಯಪ್ರಬಂಧ ಗೀತಾ ಶ್ರೀಭಾಷ್ಯ [ದರ್ಥಿ]ಪಾರಾಯಣ ಪರಮಾನಂದ 5 ಶ್ರೀರಂಗ ವೆಂಕಟ ವರದ ನಾರಾಯಣ [ರಾ ಶ್ರೀ] ಪದಯುಗ ಪೂಜನ ಪ್ರಾಪ್ತಿ ಫಲ ಓರಂತನುದಿನ ಧ್ಯಾನ ಗಾನಗಳು [ಬೀರುವವು] ತೃಪ್ತಿಕರ ಸುಧಾನಿಧಿ 6 ಜಾಜೀ ಕೇಶವ ಜಗವ ಪಾಲಿಸಲು ಮಾಜದೆ ಮಾಡಿದ ಉಪಕೃತಿಯು ರಾಜಿಪ ಚರಣಗಳಾಶ್ರಿತರಿಗೆ ಸವಿ ಭೋಜನವೀವುದು ಹರಿಯೆಡೆಯೊಳ್ 7
--------------
ಶಾಮಶರ್ಮರು