ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣುವಾಮಾಂಕಸದನಿ ಪ.
ತಾಮರಸಾಸನ ವ್ಯೋಮಾಳಕ ಸುರ-ಸ್ತೋಮ ವಿನುತೆ ಹೇ ಸೋಮ ಸಹೋದರಿಅ.ಪ.
ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹನಯನೆ 1
ಕಳೇವರ ಕೊಳುತಲಿಹಲವು ವಿಧಾರ್ಚನೆಗಳಲಿ ಪತಿಯನುಒಲಿಸಿ ವಲ್ಲಭನ ತೋಳಲಿ ಬಿಗಿದಪ್ಪಿದಬಲುಸುಖಜಲನಿಧೆ ಸಲಹೆ ನಮಿಸುವೆ 2
ಹೇಮಾಂಬರ ಚಾರು ಶ್ರೋಣಿಅಮಿತ ಸುಗುಣೆ ಶೋಭಿತ ಅಬ್ಜಸದನೆತಮಹಾರಿ ಗೋಪಾಲವಿಠಲನರ್ಧಾಂಗಿಯೆಸಮರೂಪ ಸಮಕಾಲ ಸಮದೇಶ ವ್ಯಾಪುತೆರಮೆ ಅನುಪಮೆ ಸಮೆ ನಮಿಸುವೆ ಎನ್ನ ಭವ-ಶಮಲವಳಿದು ಹೃತ್ಕಮಲದಿ ಹರಿತೋರೆ 3