ಮಹಾಲಕ್ಷ್ಮಿದೇವಿ ಪ
ಆಹಾ ನಿನ್ನ ಮಹಿಮೆ ಹೊಗಳಲಳವೆ ಅ.ಪ
ಮೂಲ ಪ್ರಕೃತಿ ಮಹಾಮಾಯೆ ನಿನ್ನ
ಲೀಲೆಯಲ್ಲವೆ ಸಮಸ್ತವೂ
ಸಾಲದೆಂಬುವ ದುಸ್ವಭಾವ ಬಿಡಿಸಮ್ಮ 1
ಕ್ಷೀರಸಾಗರಾತ್ಮಜೇ ಭಜೇ ಅಂ
ಭೋರುಹಾಕ್ಷನರ್ಧಾಂಗಿ
ಸಾರಸ ವೈರಿಯ ತಂಗಿ ಶುಭಾಂಗಿ 2
ತುತ್ತುಮಾಡಿವುಣಿಸಮ್ಮ
ಮತ್ತಾರನು ಕಾಣೆಮ್ಮ ನಮ್ಮಮ್ಮ 3
ತಾನೆ ಶ್ರೇಷ್ಟನೆಂಬ ಹೀನರ ಸಂಗವು
ಜ್ಞಾನಿಗಳಿಗೆಯಿದು ಹಾಸ್ಯವಲ್ಲದೆ 4
ನಿನ್ನ ಪತಿಯಾದ ಗುರುರಾಮ ವಿಠಲನ
ಘನ್ನ ಚಿತ್ತಗನುಸಾರ ಮನ್ನಿಸಿ ಕಾಯಿ ನೀ
ನೆನ್ನನು ನಿಜದೆÉ ಮಹಾಲಕ್ಷ್ಮಿದೇವಿ 5