ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ರಕ್ಷಿಸೊ ನಮ್ಮನು ಲಕ್ಷ್ಮೀನಾರಾಯಣ ರಕ್ಷಿಸೋ ಪ ಭವ ದೂರ ನಿತ್ಯೋದಾರ ಕರುಣದಿ ಅ.ಪ. ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖದಾಶಯನೇ ತೊರೆದೆ ಕಳತ್ರ ನಿವೇಶ ತನುಜ ಮಾಯಾ ನಿಖಿಲಸುರೇಶ ಕಮಲ ಭವ ಭಯ ಪಾಶ ಹರಪರಮೇಶ ವಂದಿತ||ನಾರಾಯಣ|| 1 ದೇಹಾಭಿಮಾನದಲ್ಲಿ ತೀವಿದಭೂತ ದ್ರೊಹವನಾಚರಿಸುತಲಿ ಸಿಲುಕಿ ದಾಸೋಹಮೆನ್ನದೆ ದೈವ ವಿದೇಹ ಜಾವರಿಗೂಹನೋಚಿತದೇಹ ವಿಜಿತವಿದೇಹ ಖಗವರವಾಹ ಶುಭಪರಿವಾಹ ನಿಖಿಲ ನಿರೀಹ ಲೋಕವಿ ಮೋಹನಾಚ್ಯುತ ||ನಾರಾಯಣ|| 2 ಧರ್ಮಾಚರಣೆಯನೆರೆತೊರೆದು ದುರುಳರ ಸಂಗದಿ ಜರಿದು ಸಜ್ಜನರನು ಜರಿದು ದುರ್ಗತಿಗೆ ನಾ ಗುರಿಯಾದೆನು ಹರಿ ಪರಮ ಪುರುಷ ಪರಮ ಪಾವನ ಭವ ಸಂಹರಣ ವಿಶ್ವಂಭರಣ ಪುಲಿಗಿರಿ ವರದ ವಿಠಲ ||ನಾರಾಯಣ|| 3
--------------
ಸರಗೂರು ವೆಂಕಟವರದಾರ್ಯರು