ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ರಕ್ಷಿಸೊ ನಮ್ಮನು ಲಕ್ಷ್ಮೀನಾರಾಯಣ ರಕ್ಷಿಸೋ ಪ ಭವ ದೂರ ನಿತ್ಯೋದಾರ ಕರುಣದಿ ಅ.ಪ. ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖದಾಶಯನೇ ತೊರೆದೆ ಕಳತ್ರ ನಿವೇಶ ತನುಜ ಮಾಯಾ ನಿಖಿಲಸುರೇಶ ಕಮಲ ಭವ ಭಯ ಪಾಶ ಹರಪರಮೇಶ ವಂದಿತ||ನಾರಾಯಣ|| 1 ದೇಹಾಭಿಮಾನದಲ್ಲಿ ತೀವಿದಭೂತ ದ್ರೊಹವನಾಚರಿಸುತಲಿ ಸಿಲುಕಿ ದಾಸೋಹಮೆನ್ನದೆ ದೈವ ವಿದೇಹ ಜಾವರಿಗೂಹನೋಚಿತದೇಹ ವಿಜಿತವಿದೇಹ ಖಗವರವಾಹ ಶುಭಪರಿವಾಹ ನಿಖಿಲ ನಿರೀಹ ಲೋಕವಿ ಮೋಹನಾಚ್ಯುತ ||ನಾರಾಯಣ|| 2 ಧರ್ಮಾಚರಣೆಯನೆರೆತೊರೆದು ದುರುಳರ ಸಂಗದಿ ಜರಿದು ಸಜ್ಜನರನು ಜರಿದು ದುರ್ಗತಿಗೆ ನಾ ಗುರಿಯಾದೆನು ಹರಿ ಪರಮ ಪುರುಷ ಪರಮ ಪಾವನ ಭವ ಸಂಹರಣ ವಿಶ್ವಂಭರಣ ಪುಲಿಗಿರಿ ವರದ ವಿಠಲ ||ನಾರಾಯಣ|| 3
--------------
ಸರಗೂರು ವೆಂಕಟವರದಾರ್ಯರು
ನಾರಾಯಣ ರಕ್ಷಿಸೋ ನಮ್ಮನು ಲಕ್ಷ್ಮೀ ನಾರಾಯಣ ರಕ್ಷಿಸೋ ಪ ಪಾರರಹಿತ ಭವಪಾರಾವಾರದಿ ಬಲು ಘೋರತಾಪವು ಮೀರಿತೋ ಭವದೂರ ನಿತ್ಯೋದಾರ ಕರುಣದಿ ಅ.ಪ ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖ ಕಳತ್ರ ನಿವೇಶ ತನುಜ ಮಾಯಾ ಪಾಶದೊಳಗೆ ಶಿಲ್ಕಿ ಗಾಸಿಯಾದೆನು ಜಗದೀಶ ನಿಖಿಲಸು ರೇಶ ಕಮಲಫಲಾಶನಯನ ದಿ ನೇಶಶತ ಸಂಕಾಶ ವ್ಯಾಘ್ರಗಿರೀಶ ಭವಭಯ ಪಾಶ ಹರಪರಮೇಶ ವಂದಿತ 1 ದೇಹಾಭಿಮಾನದಲ್ಲಿ ತೀವಿದ ಭೂತ ಸೋಹಮೆಂಬುವ ಬಲು ಮೋಹದಿ ಸಿಲುಕಿ ದಾ ಸೋಹಮೆನ್ನದೆ ದೈವ ದ್ರೋಹಿಯಾದೆನು ವಿದೇಹಜಾವರಿ ಗೂಹ ನೋಚಿತದೇಹ ವಿಜಿತ ವಿ ದೇಹ ಖಗವರವಾರಶುಭಪರಿವಾಹ ನಿಖಿಲ ನಿ ರೀಹ ಲೋಕವಿಮೋಹನಾಚ್ಯುತ 2 ಗುರುಹಿರಿಯರ ಮರೆದು ಗರ್ವದಿ ಧರ್ಮಾವ ಚರಣೆಯ ನೆರೆತೊರೆದು ಜರಿದು ದುರ್ಗತಿಗೆ ನಾ ಗುರಿಯಾದೆನು ಹರಿ ಪರಮಪುರುಷ ಪಾವನ ಚರಣ ಸುಗುಣಾ ಭರಣ ದೀನೋ ಭವ ಸಂಹರಣವಿಶ್ವಂ ಭರಣ ಪುಲಿಗಿರಿ ವರದವಿಠಲ 3
--------------
ವೆಂಕಟವರದಾರ್ಯರು
ವಾಣಿ ಬ್ರಹ್ಮನ ರಾಣಿ ಕಲ್ಯಾಣೀ| ಫಣಿವೇಣಿ ಸದ್ಗುಣ | ಶ್ರೇಣಿ ವೀಣಾ ಪುಸ್ತಕ ಪಾಣಿ ಪ ಜಾಣೆ ಶ್ರೀ ಜಗತ್ರಾಣಿ ಶಾಸ್ತ್ರ ಪ್ರ- ವೀಣೆ ವೇದ ಪ್ರಮಾಣಿ ನಿನಗೆಣೆ | ಗಾಣೆ ಸಂತತಕೇಣವಿಡದೆನ್ನಾಣೆ | ನೆಲಸಿರು ಮಾಣದೆನ್ನೊಳು ಅ.ಪ. ತ್ರಿಜಗ ಶುಭ ಕಾಯೇ | ಓಂಕಾರರೂಪಿಣಿ | ಮಾಯೆ ಮುನಿಜನಗೇಯೆ ಸುಖದಾಯೇ || ತೋಯಜಾಂಬಕಿ ಶ್ರೀಯರ ಸೊಸೆ | ಆಯದಿಂದಲಿ ಶ್ರೇಯಸ್ಸುಖಪದ - ವೀಯೆ ಸಂತತ ಕಾಯೆ ಶತಧೃತಿ ಪ್ರೀಯೆ | ನೀನೆನಗೀಯೆ ವಾಕ್ಸುಧೆü 1 ಅಕ್ಷರ ಸ್ವರೂಪೆ ನಿರ್ಲೇಪೇ | ಮೌನಿಜನ ಮಾನಸ | ಪಕ್ಷ ಸಕಲಾಧ್ಯಕ್ಷೆ ಶುಭಚರಿತೇ | ಸೂಕ್ಷ್ಮ ಸ್ಥೂಲ ಸುಲಕ್ಷಣಾನ್ವಿತೆ | ಮುಮುಕ್ಷು ಜನ ನಿಜ | ಭಕ್ತಿ ಭುಕ್ತಿವರ ಪ್ರದಾಯಕಿ | ಮುಕ್ತಿ ಸುಖ ಸೌಖ್ಯ ಪ್ರದಾಯಕಿ 2 ಸುಂದರಾಂಗಿ ಆನಂದ ಗುಣ ಭರಿತೇ | ವಂದಿಸುವೆ ತವಪದ -| ದ್ವಂದಕಾನತನಾಗಿ ಸಚ್ಚರಿತೇ | ಯೆಂದು ಮದ್‍ಹ್ವನ್ ಮಂದಿರದಿ ನೀ | ನಿಂದು ಆಪದ್ ಬಂಧು ಕರುಣಾ | ಸಿಂಧುವನು ನಾನೆಂದು ಪೊಗಳ್ವಾ -| ನಂದವರ ಸದಾನಂದ ಪಾಲಿಸೇ 3
--------------
ಸದಾನಂದರು