ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನ್ನಡ ಮಂತ್ರ ವಾಸುದೇವ ಲಕ್ಷ್ಮೀಪತಿ ಜಗಜನ್ಮಾದಿ ಕಾರಣ ನಾರಾಯಣ ನರಕಾಂತಕ ನಾರದಪ್ರಿಯ ನರಸಖನಾದ ನಾರಸಿಂಹಮೂರ್ತಿಗೆ ನಮಸ್ಕಾರಗಳು ಗೋಕುಲದರಸು ಯಾದವಶಿರೋಮಣಿಯೆನ್ನ ಬಿನ್ನಪವ ಲಾಲಿಸಿ ಕೇಳಯ್ಯ ಕೃಷ್ಣ ಕಾಮ ಕ್ರೋಧ ಮದ ಮತ್ಸರ ದುರ್ಬುದ್ಧಿ ದುರಾಚಾರ ದುರ್ವಿಷಯಗಳ ಮೋಹ ಲೋಭಗಳ ಮರೆಸಿ ಮುಂದೆ ಬಿರುದಿನಿಂದ ಭಕÀ್ತಜನ ಬಂಧು ನೀ ದಯಾಸಿಂಧು ನಾ ಬೇಡಿಕೊಂಬುವೆನು ಬಂದು ಸಜ್ಜನರಕ್ಷಕ ದುರ್ಜನಶಿಕ್ಷಕ ಅರ್ಜುನ ಸಾರಥಿಯಾದ ನಿತ್ಯ ಮುಕ್ತ ದ್ವಾರಾವತೀ ಮಧ್ವಮುನಿಗೊಲಿದಂಥ ಮೂರ್ಜಗಾಧೀಶ ಉದ್ಧಾರ ಮಾಡಯ್ಯ ಉರಗಾದ್ರಿವಾಸ ಪದ್ಮಾವತೀಕಾಂತ ಶ್ರೀ ವೆಂಕಟೇಶ ಜ್ಞಾನಭಕ್ತಿ ಘನ ವೈರಾಗ್ಯ ಆಯುಷ್ಯ ಆರೋಗ್ಯ ಶ್ರೇಯಸ್ಸು ಸೌಭಾಗ್ಯ ಶ್ರೇಷ್ಠವಾದ ಸಂತಾನ ಸಕÀಲಾಭೀಷ್ಟಗಳ ಕೊಡುವನೆಂದು ನಾ ಬೇಡಿಕೊಂಬುವೆನು ಬಂದು ಎನ್ನಬಾರ ಎನ್ನ ಪರಿವಾರ ನಿನ್ನಗೊಪ್ಪಿಸುವೆನು ಮನ್ಮಥನಪಿತ ಎನಗೆ ಇನ್ನು ಧರ್ಮಾರ್ಥ ಕಾಮಿತ ಫಲಗಳನು ಸನ್ಮಾನದಲಿ ಕೊಟ್ಟು ಮನ್ನಿಸಿ ನೀಡೆನಗೆ ಮಂಗಳವ ಅನುದಿನದಿ ಸುಜ್ಞಾನಿಗಳೊಡೆಯ ಸುರರಿಂದ್ವಂದಿತವಾದ ನಿನ್ನ ಪದ್ಮಪಾದಗಳಿಗೆ ಬಿದ್ದೆ ್ಹೀಳಿಕÉೂಂಬುವೆನು
--------------
ಹರಪನಹಳ್ಳಿಭೀಮವ್ವ
ನಾರಾಯಣ ರಕ್ಷಿಸೊ ನಮ್ಮನು ಲಕ್ಷ್ಮೀನಾರಾಯಣ ರಕ್ಷಿಸೋ ಪ ಭವ ದೂರ ನಿತ್ಯೋದಾರ ಕರುಣದಿ ಅ.ಪ. ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖದಾಶಯನೇ ತೊರೆದೆ ಕಳತ್ರ ನಿವೇಶ ತನುಜ ಮಾಯಾ ನಿಖಿಲಸುರೇಶ ಕಮಲ ಭವ ಭಯ ಪಾಶ ಹರಪರಮೇಶ ವಂದಿತ||ನಾರಾಯಣ|| 1 ದೇಹಾಭಿಮಾನದಲ್ಲಿ ತೀವಿದಭೂತ ದ್ರೊಹವನಾಚರಿಸುತಲಿ ಸಿಲುಕಿ ದಾಸೋಹಮೆನ್ನದೆ ದೈವ ವಿದೇಹ ಜಾವರಿಗೂಹನೋಚಿತದೇಹ ವಿಜಿತವಿದೇಹ ಖಗವರವಾಹ ಶುಭಪರಿವಾಹ ನಿಖಿಲ ನಿರೀಹ ಲೋಕವಿ ಮೋಹನಾಚ್ಯುತ ||ನಾರಾಯಣ|| 2 ಧರ್ಮಾಚರಣೆಯನೆರೆತೊರೆದು ದುರುಳರ ಸಂಗದಿ ಜರಿದು ಸಜ್ಜನರನು ಜರಿದು ದುರ್ಗತಿಗೆ ನಾ ಗುರಿಯಾದೆನು ಹರಿ ಪರಮ ಪುರುಷ ಪರಮ ಪಾವನ ಭವ ಸಂಹರಣ ವಿಶ್ವಂಭರಣ ಪುಲಿಗಿರಿ ವರದ ವಿಠಲ ||ನಾರಾಯಣ|| 3
--------------
ಸರಗೂರು ವೆಂಕಟವರದಾರ್ಯರು
ನಾರಾಯಣ ರಕ್ಷಿಸೋ ನಮ್ಮನು ಲಕ್ಷ್ಮೀ ನಾರಾಯಣ ರಕ್ಷಿಸೋ ಪ ಪಾರರಹಿತ ಭವಪಾರಾವಾರದಿ ಬಲು ಘೋರತಾಪವು ಮೀರಿತೋ ಭವದೂರ ನಿತ್ಯೋದಾರ ಕರುಣದಿ ಅ.ಪ ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖ ಕಳತ್ರ ನಿವೇಶ ತನುಜ ಮಾಯಾ ಪಾಶದೊಳಗೆ ಶಿಲ್ಕಿ ಗಾಸಿಯಾದೆನು ಜಗದೀಶ ನಿಖಿಲಸು ರೇಶ ಕಮಲಫಲಾಶನಯನ ದಿ ನೇಶಶತ ಸಂಕಾಶ ವ್ಯಾಘ್ರಗಿರೀಶ ಭವಭಯ ಪಾಶ ಹರಪರಮೇಶ ವಂದಿತ 1 ದೇಹಾಭಿಮಾನದಲ್ಲಿ ತೀವಿದ ಭೂತ ಸೋಹಮೆಂಬುವ ಬಲು ಮೋಹದಿ ಸಿಲುಕಿ ದಾ ಸೋಹಮೆನ್ನದೆ ದೈವ ದ್ರೋಹಿಯಾದೆನು ವಿದೇಹಜಾವರಿ ಗೂಹ ನೋಚಿತದೇಹ ವಿಜಿತ ವಿ ದೇಹ ಖಗವರವಾರಶುಭಪರಿವಾಹ ನಿಖಿಲ ನಿ ರೀಹ ಲೋಕವಿಮೋಹನಾಚ್ಯುತ 2 ಗುರುಹಿರಿಯರ ಮರೆದು ಗರ್ವದಿ ಧರ್ಮಾವ ಚರಣೆಯ ನೆರೆತೊರೆದು ಜರಿದು ದುರ್ಗತಿಗೆ ನಾ ಗುರಿಯಾದೆನು ಹರಿ ಪರಮಪುರುಷ ಪಾವನ ಚರಣ ಸುಗುಣಾ ಭರಣ ದೀನೋ ಭವ ಸಂಹರಣವಿಶ್ವಂ ಭರಣ ಪುಲಿಗಿರಿ ವರದವಿಠಲ 3
--------------
ವೆಂಕಟವರದಾರ್ಯರು
ಪುಣ್ಯ ಪಡೆಯೆ ನೀನು ಪೂರ್ಣೇಂದುವದನೆ ಪುಣ್ಯ ಪಡೆಯೆ ನೀನು ಪ ಕುಂದಣದಾರತಿ ಬೆಳಗಿ ಅಕ್ಷತೆನಿಟ್ಟು ಆ- ನಂದವಾಗಾಶೀರ್ವಾದ ಮಾಡ್ಹರಸುತಲಿ 1 ಅತಿ ಹರುಷದಿ ಗಂಡು ಸುತರನೆ ಪಡೆದು ನೀ ಪೃಥಿವಿನಾಳೆನುತ ದ್ರೌಪದಿ ಹರಸಿದಳು2 ಅಕ್ಕರದಿಂದ್ಹೆಣ್ಣುಮಕ್ಕಳ ಪಡೆದು ಪ- ಲ್ಲಕ್ಕಿನೇರೆನುತ ದೇವಕ್ಕಿ ಹರಸಿದಳು 3 ಕಟ್ಟಿದ್ದ ಮಾಂಗಲ್ಯ ಕರಿಯ ಕಾಜಿನ ಬಳೆ ಮುತ್ತೈದೆತನಕೆ ಸಾವಿತ್ರಿ ಹರಸಿದಳು 4 ಅನ್ನ ಗೋವ್ಗಳು ಕನ್ಯಾದಾನ ಮಾಡೆನುತ ಸಂ- ಪನ್ನ್ಯಾಗಿರೆನುತ ಅರುಂಧತಿ ಹರಸಿದಳು 5 ಆಯುಷ್ಯ ಆರೋಗ್ಯ ಶ್ರೇಯಸ್ಸು ಸೌಭಾಗ್ಯ ನೀ ಪಡೆ ಸುಖ ಶ್ರೀಮಹಾಲಕ್ಷ್ಮಿ ಹರಸಿದಳು 6 ಕಾಮಿತ ಫಲ ಇಷ್ಟದಾಯಕನಾದ ಶ್ರೀ ಭೀಮೇಶಕೃಷ್ಣರಾಯನ ಕರುಣದಲಿ 7
--------------
ಹರಪನಹಳ್ಳಿಭೀಮವ್ವ
ವಾಣಿ ಬ್ರಹ್ಮನ ರಾಣಿ ಕಲ್ಯಾಣೀ| ಫಣಿವೇಣಿ ಸದ್ಗುಣ | ಶ್ರೇಣಿ ವೀಣಾ ಪುಸ್ತಕ ಪಾಣಿ ಪ ಜಾಣೆ ಶ್ರೀ ಜಗತ್ರಾಣಿ ಶಾಸ್ತ್ರ ಪ್ರ- ವೀಣೆ ವೇದ ಪ್ರಮಾಣಿ ನಿನಗೆಣೆ | ಗಾಣೆ ಸಂತತಕೇಣವಿಡದೆನ್ನಾಣೆ | ನೆಲಸಿರು ಮಾಣದೆನ್ನೊಳು ಅ.ಪ. ತ್ರಿಜಗ ಶುಭ ಕಾಯೇ | ಓಂಕಾರರೂಪಿಣಿ | ಮಾಯೆ ಮುನಿಜನಗೇಯೆ ಸುಖದಾಯೇ || ತೋಯಜಾಂಬಕಿ ಶ್ರೀಯರ ಸೊಸೆ | ಆಯದಿಂದಲಿ ಶ್ರೇಯಸ್ಸುಖಪದ - ವೀಯೆ ಸಂತತ ಕಾಯೆ ಶತಧೃತಿ ಪ್ರೀಯೆ | ನೀನೆನಗೀಯೆ ವಾಕ್ಸುಧೆü 1 ಅಕ್ಷರ ಸ್ವರೂಪೆ ನಿರ್ಲೇಪೇ | ಮೌನಿಜನ ಮಾನಸ | ಪಕ್ಷ ಸಕಲಾಧ್ಯಕ್ಷೆ ಶುಭಚರಿತೇ | ಸೂಕ್ಷ್ಮ ಸ್ಥೂಲ ಸುಲಕ್ಷಣಾನ್ವಿತೆ | ಮುಮುಕ್ಷು ಜನ ನಿಜ | ಭಕ್ತಿ ಭುಕ್ತಿವರ ಪ್ರದಾಯಕಿ | ಮುಕ್ತಿ ಸುಖ ಸೌಖ್ಯ ಪ್ರದಾಯಕಿ 2 ಸುಂದರಾಂಗಿ ಆನಂದ ಗುಣ ಭರಿತೇ | ವಂದಿಸುವೆ ತವಪದ -| ದ್ವಂದಕಾನತನಾಗಿ ಸಚ್ಚರಿತೇ | ಯೆಂದು ಮದ್‍ಹ್ವನ್ ಮಂದಿರದಿ ನೀ | ನಿಂದು ಆಪದ್ ಬಂಧು ಕರುಣಾ | ಸಿಂಧುವನು ನಾನೆಂದು ಪೊಗಳ್ವಾ -| ನಂದವರ ಸದಾನಂದ ಪಾಲಿಸೇ 3
--------------
ಸದಾನಂದರು
ವಾಯಸ ಸಿದ್ಧಿ ಕೊಟ್ಟಾವಮ್ಮ ಒಲಿದಾಳೆ ದೂತೆ ಶ್ರೀಶನ ದಯ ಸೂಸಿತುಳುಕುತ ಶ್ರೇಯಸ್ಸು ಬರಲೆಂದು ಪ. ಶುದ್ಧ ಮುತ್ತು ರತ್ನದವಸ್ತ ತಿದ್ದಿಸೀರಿ ಕುಪ್ಪುಸ ತೊಟ್ಟುಬದ್ಧವಾದ ತಳಪಿಲಿಂದ ಮುದ್ದು ಸುರಿಯುತ1 ಪುಂಡರಿಕಾಕ್ಷನ ಪಾದಕೆ ದಂಡಪ್ರಣಾಮವ ಮಾಡಿ ಕೊಂಡಾಡಿ ಕೃಷ್ಣನ ನಡೆದಳು ಪಾಂಡವರರಮನೆಗೆ2 ಭಾವೆ ರುಕ್ಮಿಣಿ ದೇವಿಯರಿಗೆ ಭಾವ ಭಕ್ತಿಯಿಂದ ನಮಿಸಿ ಸ್ವಾಮಿ ಕಾರ್ಯ ಸಾಧಿಸಿ ನಿಸ್ಸೀಮಳು ನಡೆದಾಳೆÉ 3 ಅಂದಣ ಏರಿದಳು ದೂತೆ ಬಂದವು ನೀರಿನ ಕುಂಭಚಂದದ ಸೇವಕರು ಮಾರ್ಗ ಮುಂದೆ ನಡೆದರು 4 ಹಾಲು ಮೊಸರು ಹಲವು ಫಲ ಸಾಲುಸಾಲು ಮುತ್ತೈದೆಯರು ಮೇಲಾದ ವಿಪ್ರರು ಮೇಲೆ ಮೇಲೆ ಬಂದರು5 ಧೀರ ಧರ್ಮರಾಯನ ಸಭೆüಯ ದ್ವಾರಪಾಲಕಳಾಗಿ ದೂತೆ ವೀರ ಮುದ್ರಿಕೆಯ ಕೊಟ್ಟು ನೀರೆ ನಡೆದಳು6 ಶ್ರೀದೇವಿ ದೂತೆ ರಾಮೇಶನ ಪಾದಸ್ಮರಣೆಯ ಮಾಡಿಮೋದಭರಿತಳಾಗಿ ರಾಯನ ಪಾದಕ್ಕೆರಗಿದಳು 7
--------------
ಗಲಗಲಿಅವ್ವನವರು
ಸುಖದ ಸುಂದರ ವಿಠಲರಾಯಾ | ಈ |ಭüಕುತಗೆ ವಿಜ್ಞಾನ ಕೊಡು ಜೀಯಾ ಪ ಸುಖತೀರ್ಥ ಶಾಸ್ತ್ರ ಸಮ್ಮತವಾಗಿ | ಈ |ಸುಕವನಕ್ಕೆ ವಾಕ್ಯವದಾಗಲಿ ||ಸಕಲ ಜನರು ಕೇಳಿ ಪಾಡಲಿ | ಇದು |ಮುಕುತಿಗೆ ಸತ್ಪಥವಾಗಲಿ 1 ಆಯುರಾರೋಗ್ಯವು ಪೆಚ್ಚಲಿ | ಕೇಳಿ |ಮಾಯಾವಾದಿಗಳು ಬಾಯ್ಮುಚ್ಚಲಿ ||ಶ್ರೇಯಸ್ಸು ಬಂದು ಕೈಗೂಡಲಿ || ಶ್ರೀ ||ವಾಯುದೇವನು ಪ್ರೀತನಾಗಲಿ 2 ಕರ ಮುಗಿವೆನೊ 3
--------------
ಗುರುಪ್ರಾಣೇಶವಿಠಲರು
ರಾಯನ ಭಯವಿಲ್ಲ ಮನಕೆ ಪಶ್ರೇಯಸ್ಸು ಸೌಖ್ಯವ ನೀಡೋದು ಜನಕೆ ಅ.ಪನೀನೆ ನೀಡುವಿ ಎಂಬ ಙ್ಞÕನ ದಿಂ -ದನು ಸಂಧಾನ ಮಾಡುತಲಿಪ್ಪನರಗೆ 1ಸತಿಸುತ ಹಿತಜನ ವಿತತವೃತ್ತಿಕ್ಷೇತ್ರವ್ರತತೀಜ ಯುಗಕೀವ ಮತಿಯುಳ್ಳ ನರಗೆ 2ಪಾತಕಕರ್ಮವ ಮಾಡಲೇನುಯಾತನಮಯಭವಪಾಥೋನಿಧಿಯೋಳನೀತಗುರುಜಗನ್ನಾಥವಿಠಲಗತಿಪ್ರೀತನಾದಗುರುದೂತನಾದವಗೆ3
--------------
ಗುರುಜಗನ್ನಾಥದಾಸರು