(ಅಂ) ಪಾರ್ವತೀದೇವಿ
ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ |
ಹಿಮವಂತ ಗಿರಿಯ ಕುಮಾರಿ ಪ
ನಿತ್ಯ |
ಅಮರವಂದಿತೆ ಗಜಗಮನೆ ಭವಾನಿ ಅ. ಪ.
ಪನ್ನಗಧರನ ರಾಣಿ ಪರಮಪಾವನಿ |
ಪುಣ್ಯಫಲ ಪ್ರದಾಯಿನಿ ||
ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ |
ಉನ್ನತ ಗುಣಗಣ ಶ್ರೇಣಿ |
ಎನ್ನ ಮನದ ಅಭಿಮಾನ ದೇವತೆಯೆ |
ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ ||
ನಿನ್ನ ಮಹಿಮೆಯನು ಬಿನ್ನಾಣದಲಿ ನಾ |
ಬಣ್ಣಿಸಲಳವೆ ಪ್ರಸನ್ನ ವದನಳೆ 1
ಮುತ್ತಿನ ಪದಕ ಹಾರ ಮೋಹನ ಸರ |
ಉತ್ತಮಾಂಗದಲಂಕಾರ ||
ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ |
ರತ್ನಕಂಕಣದುಂಗುರ ||
ತೆತ್ತೀಸ ಕೋಟಿ ದೇವತೆಗಳ್ ಪೊಗಳುತ |
ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ ||
ಸುತ್ತಲು ಆಡುವ ನರ್ತನ ಸಂದಣಿ |
ಎತ್ತ ನೋಡಿದರತ್ತ ಕಥ್ಥೈ ವಾದ್ಯ2
ಕಂಚುಕ ತಿಲಕ |
ನಾಸಿಕ ||
ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ |
ಸಲೆ ಭುಜ ಕೀರ್ತಿಪಾಠಿಕ ||
ಇಳೆಯೊಳು ಮಧುರಾ ಪೊಳಲೊಳು ವಾಸಳೆ |
ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ ||
ಸುಲಭ ಜನರಿಗೆಲ್ಲ ಒಲಿದು ಮತಿಯನೀವ |
ಗಳಿಕರ ಶೋಭಿತೆ ಪರಮಮಂಗಳ ಹೇ 3