ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರಜ ನೇತ್ರ ನಿನ್ನ ಪಾದಂಗಳ ನಂಬಿದೆ ಕೊನೆಗೆ ಪ ಶ್ರುತಿಹಿತ ಧರ್ಮವಿಶ್ರುತ ನಾನಲ್ಲ ಸತತವು ಜ್ಞಾನಿಯ ಜೊತೆ ಸೇರಲಿಲ್ಲ 1 ಭಕ್ತಿಪಥದಿ ಮನವರ್ತಿಸಲಿಲ್ಲ ಯುಕ್ತಿಯಿಂ ವಿಷಯ ವಿರಕ್ತನಾನಲ್ಲ 2 ಗುರುಕುಲವಾಸದ ಗುರುತೆನಗಿಲ್ಲ ಪರಮ ಭಾಗವತರ ಪರಿಚರ್ಯವಿಲ್ಲ 3 ಮಂತ್ರಾರ್ಥದ ಬೋಧೆ ಮನದೊಳಗಿಲ್ಲ ತಂತ್ರದೊಳಗೆ ಜಾಣ್ಮೆ ಎನಗಿನಿತಿಲ್ಲ 4 ಸಜ್ಜನ ಸಹವಾಸದುಜ್ಜುಗವಿಲ್ಲ ದುರ್ಜನರ ಸಂಗತಿ ವರ್ಜಿಸಲಿಲ್ಲ 5 ಹರಿಕಥೆ ಮಾಡುವ ಪ್ರಜ್ಞೆ ನನಗಿಲ್ಲ ದುರುಳ ಕಾಮುಕಸಂಗ ಕಿರಿದಾಗಿಲ್ಲ 6 ಪರಿಪರಿ ಕಷ್ಟವ ಪರಿಹರಿಸುವನೆ ಪರಮಶ್ರೀಪುಲಿಗಿರಿ ವರದವಿಠಲನೆ 7
--------------
ವೆಂಕಟವರದಾರ್ಯರು